ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಮಹತ್ವ ಪೂರ್ಣವಾದದ್ದು

ಗುಬ್ಬಿ

       ವ್ಯಕ್ತಿತ್ವ ವಿಕಸನಕ್ಕೆ ಚಿತ್ರಕಲೆ ಮಹತ್ವ ಪೂರ್ಣವಾದುದಾಗಿದ್ದು ಚಿತ್ರಕಲೆಗೆ ತನ್ನದೆ ಅದ ಮಹತ್ವದ ಸ್ಥಾನವಿದ್ದು ಚಿತ್ರಕಲೆ ಸಮಾಜದ ಸರ್ವತೋಮುಖ ಪ್ರಗತಿಗೆ ಹೆಚ್ಚು ಸಹಕಾರಿಯಾಗಲಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಪ್ರೊ:ಎಂ.ಜೆ.ಕಮಲಾಕ್ಷಿ ತಿಳಿಸಿದರು.

        ತಾಲೂಕಿನ ಕಸಬಾ ಹೋಬಳಿಯ ದೊಡ್ಡಕಟ್ಟಿಗೇನಹಳ್ಳಿ-ತೋಟಸಾಗರ ಗ್ರಾಮದಲ್ಲಿ ಕರ್ನಾಟಕ ಲಲಿತಕಲಾ ಅಕಾಡಮಿ ಬೆಂಗಳೂರು ಮತ್ತು ನಿರಂತರ ಆಟ್ರ್ಸ್ ಗ್ರೂಪ್ ತುಮಕೂರು ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ನೆಲದ ಮರೆಯ ಸೊಬಗು ರಾಜ್ಯ ಮಟ್ಟದ ಚಿತ್ರಕಲಾ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಆದುನೀಕತೆ ಬೆಳೆದಂತೆ ಚಿತ್ರಕಲೆ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುತ್ತಿದ್ದು ಚಿತ್ರಗಳ ನೈಜತೆ ಮತ್ತು ಅವುಗಳ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವಂತಹ ಮಹತ್ವದ ಕಾರ್ಯಗಲಾಗಬೇಕೆಂದು ತಿಳಿಸಿದರು.

       ನಾನು ಕೇವಲ ನಮ್ಮ ಹಿರಿಯರು ಬರೆಯತ್ತಿದ್ದಂತಹ ಚಿತ್ರಗಳನ್ನು ನೋಡಿ ಆಸಕ್ತಿಯಿಂದ ಅದನ್ನು ರೊಡಿಸಿಕೊಂಡೆ ಸಾಕಷ್ಟು ಚಿತ್ರಗಳನ್ನು ಬರೆಯುವ ಮೂಲಕ ಲಲಿತಕಲಾ ಅಕಾಡೆಮಿಯಲ್ಲಿ ಕೆಲಸ ಮಾಡುತಿದ್ದೇನೆ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದಾಗ ಖಂಡಿತವಾಗಿ ಅವರಿಗೆ ಆಸಕ್ತಿ ಬೆಳೆಯುತ್ತದೆ ಅಲ್ಲದೆ ಮಕ್ಕಳ ಮನಸಿಗೆ ಮುದ ನೀಡುವಂತಹ ಕಲೆ ಚಿತ್ರಕಲೆಯಾಗಿದೆ ಎಂದರು.

        ಚಿತ್ರಗಳು ಮೊದಲು ಚರ್ಚ್, ದೇವಾಲಯಗಳಲ್ಲಿ ಹೆಚ್ಚು ಕಂಡುಬರುತಿದ್ದವು ಪ್ರಸ್ತುತ ಚಿತ್ರಕಲೆ ಮನುಷ್ಯನ ಬದುಕಿನಲ್ಲಿ ಹೊಸ ಆಯಮ ನೀಡುತ್ತಿವೆ ಆದುನೀಕತೆ ಬೆಳೆದಂತೆ ವಿನೂತನವಾದ ಚಿತ್ರಗಳು ವರ್ನ ರಂಜಿತವಾಗಿ ಮೂಡಿಬರುತ್ತಿವೆ ಇಂತಹ ಉತ್ತಮ ಚಿತ್ರಗಳು ಆರೋಗ್ಯವಂತ ಸಮಾಜ ನಿರ್ಮಾಣಮಾಡುತ್ತವೆ. ಚಿತ್ರಗಳು ಶಾಶ್ವತವಾಗಿದ್ದು ಯುವಜನರು ಮತ್ತು ವಿದ್ಯಾರ್ಥಿ ಜೀವನದಲ್ಲೇ ಚಿತ್ರ ಬರೆಯುವ ಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

         ಹಿರಿಯ ಸಾಹಿತಿ ಕೆ.ಬಿ.ಸಿದ್ದಯ್ಯ ಮಾತನಾಡಿ ಕಲೆ ಮತ್ತು ಕಾವ್ಯ ಚಳುವಳಿಗಳು ಇತರರರಿಗೆ ಮಾರ್ಗದರ್ಶನವಾಗಿರುತ್ತದೆ ರಾಜ್ಯದ ವಿವಿಧ ಭಾಗಗಳಿಂದ ಕಲಾವಿದರು ಈ ಹಳ್ಳಿಗೆ ಬಂದಿದ್ದು 5 ದಿನಗಳ ಕಾಲ ವಿಶೇಷವಾಗಿ ಗೋಡೆಗಳ ಮೇಲೆ ಚಿತ್ರಪಟಗಳನ್ನು ಬರೆಯುವರಿದ್ದು ಪ್ರತಿಯೂಬ್ಬರು ವಿಶೇಷ ಜ್ಞಾನ ಉಳ್ಳವರರಾಗಿದ್ದಾ ಕಲೆ ಎಲ್ಲ ನೂವ್ವುಗಳನ್ನು ಮರೆಸುವಂತದ್ದು ಎಂದು ತಿಳಿಸಿದ ಅವರು ಚಿತ್ರಕಲೆ ಮತ್ತು ಸಾಹಿತ್ಯ ಮನಸ್ಸಿನ ಕೊಳಕನ್ನು ತೊಳೆಯುವ ಶಕ್ತಿಹೊಂದಿವೆ. ಕಲಾವಿದರು, ಚಳುವಳಿಗಾರರು ಮತ್ತು ಲೇಖಕರು ಸ್ವಾಭಿಮಾನಿಗಳು ಇವರುಗಳು ಮಾಡುವ ಕೆಲಸದಿಂದ ಉತ್ತಮ ಸಮಾಜ ನಿರ್ಮಾಣ ವಾಗಲಿದೆ ಎಂದರು.

         ನಿರಂತರ ಆರ್ಟ್ ಗ್ರೂಪ್ ಅಧ್ಯಕ್ಷ ಕೆ.ಎಂ.ರವೀಶ್ ಮಾತನಾಡಿ ಕಲಾ ಕೃತಿಗಳು ಗ್ರಾಮೀಣ ಭಾಗದಲ್ಲಿ ಜನರ ಮುಂದೆ ಅನಾವರಣಗೊಳ್ಳುವ ಜತೆಗೆ ಹಳ್ಳಿಗಳ ಜನರಲ್ಲಿ ಮತ್ತು ಯುವಕರಲ್ಲಿ ಅಡಗಿರುವ ಸುಪ್ತ ಕಲೆಯ ಪ್ರತಿಭೆಗಳು ಹೊರಹೊಮ್ಮುದಕ್ಕೆ ಈ ಶಿಬಿರ ಪರಿಣಾಮಕಾರಿ ಯಾಗುತ್ತದೆ ಎಂದು ತಿಳಿಸಿದ ಅವರು ಚಿತ್ರಕಲೆ ಪುರಾತನ ಕಾಲದಿಂದ ಬಂದಿದ್ದು ಪ್ರಸ್ತುತ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಿಟ್ಟಿನಲ್ಲಿ ಉತ್ತಮ ಕಲಾಕೃತಿಗಳು ರಚನೆಯಾಗಲಿವೆ ಎಂದರು.

        ಅಂತರಾಷ್ಟ್ರೀಯ ಕಲಾವಿದ ಶಿವಪ್ರಸಾದ್ ಮಾತನಾಡಿ ವಿದೇಶಗಳಲ್ಲಿ ಚಿತ್ರಕಲೆಗೆ ಹೆಚ್ಚಿನ ಬೇಡಿಕೆ ಸೀಗುತ್ತದೆ ಆದರೆ ನಮ್ಮಲ್ಲಿ ಸಿಗುತ್ತಿರುವ ಗೌರವ ಕಡಿಮೆ ಎಂದು ತಿಳಿಸಿದ ಅವರು ವಿದೇಶದಲ್ಲಿ ಲಕ್ಷಾಂತರ ಡಾಲರ್‍ಗಳಿಗೆ ಒದೊಂದು ಚಿತ್ರಪಟಗಳು ಮಾರಾಟವಾಗುತ್ತವೆ ಇದರಿಂದ ಹೆಚ್ಚು ಲಾಭವನ್ನು ಕಲಾವಿದರು ಗಳಿಸುತ್ತಾರೆ ಹಾಗೂ ಅದನ್ನು ಇಷ್ಟ ಪಡುವವರು ಸಹ ಹೆಚ್ಚಾಗಿರುತ್ತಾರೆ ಆದರೆ ನಮ್ಮಲ್ಲಿ ಅದು ಕಡಿಮೆ ಇದೆ ಆದರೆ ನಿಮ್ಮ ಗ್ರಾಮದಲ್ಲಿ ಇಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಕಲಾವಿದರು ಬಂದು ಚಿತ್ರಗಳನ್ನು ಬರೆಯುತ್ತಿದ್ದು ತಾವೆಲ್ಲರೂ ಸಹಕಾರ ನೀಡಬೇಕು ಎಂದರು.

           ಪ್ರತಿದಿನ ಸಂಜೆ ಕಾರ್ಯಕ್ರಮಗಳು ನಡೆಯಲಿವೆ ನ.28 ರಂದು ಚಿತ್ರಕಲೆ ಮತ್ತು ಸಾಹಿತ್ಯ, ನ.29 ರಂದು ಸಮಾಜದ ಬದಲಾವಣೆಯಲ್ಲಿ ಕಲೆಯ ಪಾತ್ರ, ನ.30 ರಂದು ರಂಗಕಲೆ ಹಾಗೂ ಚಿತ್ರಕಲೆ ಸೇರಿದಂತೆ ಐದು ದಿನಗಳ ಕಾಲ ಶಿಬಿರದಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಪ್ರತಿದಿನ ಗೊಡೆಯಮೇಲೆ ಚಿತ್ರಗಳನ್ನು ಬಿಡಿಸಲಾಗುತ್ತದೆ.

         ಕಾರ್ಯಕ್ರಮದಲ್ಲಿ ನಿರಂತರ ಆರ್ಟ ಗ್ರೂಪ್‍ನ ಮನುಚಕ್ರವರ್ತಿ, ಗ್ರಾಮ ಪಂಚಾಯತಿ ಅಧ್ಯಕ್ಷ ನಲ್ಲೂರಯ್ಯ, ಸದಸ್ಯ ಪರಮಶಿವಯ್ಯ, ಬಿಇಒ ವೆಂಕಟೇಶಪ್ಪ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಗಂಗಾಧರ್, ರೈತ ಮುಖಂಡ ಜಗದೀಶ್, ಮಹಾಲಿಂಗಪ್ಪ. ರವೀಶ್, ಆನಂದ್, ಶಿಕ್ಷಕ ರೇಣುಕಪ್ಪ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ 50 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link