ಬೆಂಗಳೂರು
ಪ್ರೀತಿಸಲು ನಿರಾಕರಿಸಿದ ಗಗನಸಖಿಯ ಕಿವಿ ಹರಿದು ಹಲ್ಲೆ ನಡೆಸಿರುವ ರೌಡಿ ಅಜಯ್ ಅಲಿಯಾಸ್ ಜಾಕಿಯನ್ನು ಯಶವಂತಪುರ ಹಾಗೂ ಕೊಡಿಗೇಹಳ್ಳಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕಳೆದ ಮೇ 12 ರಂದು ಸಂಜೆ ಕೆಲಸಕ್ಕೆ ಕ್ಯಾಬ್ನಲ್ಲಿ ಹೋಗುತ್ತಿದ್ದ ಇಂಡಿಗೋ ಏರ್ ಲೈನ್ಸ್ನ ಗಗನಸಖಿಯಾಗಿದ್ದ 27 ವರ್ಷದ ಯುವತಿಯನ್ನು ಹೆಬ್ಬಾಳ ಮೇಲುಸೇತುವೆ ಬಳಿ ಅಡ್ಡಗಟ್ಟಿ ಕ್ಯಾಬ್ನೊಳಗೆ ನುಗ್ಗಿ ಹಲ್ಲೆ ನಡೆಸಿ ಆಕೆಯ ಬಲಕಿವಿ ಹಿಂಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ರೌಡಿ ಅಜಯ್ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಕಿವಿ ಹರಿದಿರುವ ಯುವತಿಯ ಕುಟುಂಬದವರ ಜೊತೆ ರೌಡಿ ಅಜಯ್ಗೆ ಹಲವು ವರ್ಷಗಳಿಂದ ಪರಿಚಯವಿತ್ತು.2012 ರಲ್ಲಿ ಅಜಯ್ನ ನೆರವು ಪಡೆದಿದ್ದ ಗಗನಸಖಿಯ ಅಕ್ಕ ತನ್ನ ಗೆಳೆಯನನ್ನು ಕೊಲೆ ಮಾಡಿಸಿದ್ದಳು. ಈ ಪ್ರಕರಣದಲ್ಲಿ ಅಜಯ್ ಹಾಗೂ ಯುವತಿಯ ಅಕ್ಕ ಇಬ್ಬರೂ ಜೈಲು ಸೇರಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರವೂ ಇವರ ಪರಿಚಯ ಮುಂದುವರೆದಿತ್ತು.
ಈ ನಡುವೆ ಗೆಳೆಯನನ್ನು ಕೊಲೆ ಮಾಡಿಸಿದ್ದ ಯುವತಿಯು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅಜಯ್ನಿಂದ ಅಂತರ ಕಾಯ್ದುಕೊಂಡಿದ್ದಳು. ಆಕೆಗೆ ನೀನು ದೂರ ಹೋಗಿದ್ದೀಯ, ನಿನ್ನ ತಂಗಿಗಾದರೂ ನನ್ನನ್ನು ಪ್ರೀತಿಸುವಂತೆ ಹೇಳು ಎಂದು ದುಂಬಾಲು ಬಿದ್ದಿದ್ದ. ಆದರೆ ಆಕೆ ಅದನ್ನು ನಿರಾಕರಿಸಿ, ನಿಂದಿಸಿ ಕಳುಹಿಸಿದ್ದಳು.
ಅಲ್ಲಿಂದ ಗಗನಸಖಿಗಲ್ಲದೆ, ಆಕೆಯ ಅಕ್ಕನಿಗೂ ಕಿರುಕುಳ ಕೊಡುತ್ತಿದ್ದು,ಅಜಯ್ನ ಕಾಟ ತಾಳಲಾರದೆ ಗಗನಸಖಿಯು ಒಂದು ತಿಂಗಳ ಹಿಂದೆ ಯಶವಂತಪುರ ಪೊಲೀಸರಿಗೆ ದೂರು ನೀಡಿದ್ದರು.ಪೆÇಲೀಸರು ತನಗಾಗಿ ಹುಡುಗಾಟ ನಡೆಸಿದ ಬೆನ್ನಲ್ಲೇ ಅಜಯ್ ಕಳೆದ ಮೇ 12 ರಂದು ಈ ಕೃತ್ಯ ನಡೆಸಿ ಪರಾರಿಯಾಗಿದ್ದನು.
ಅಜಯ್ ಚಾಕುವಿನಿಂದ ಇರಿದ ರಭಸಕ್ಕೆ ಯುವತಿಯ ಕಿವಿ ಹರಿದುಹೋಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








