ಲಕ್ನೋ
ತ್ರಿವಳಿ ತಲಾಖ್ ಹೇಳುವ ಕೆಟ್ಟ ಸಂಪ್ರದಾಯಕ್ಕೆ ಸಂಸತ್ ಕೊನೆಹಾಡಿ , ಮಸೂದೆಗೆ ಅಂಗೀಕಾರ ದೊರೆತು ವಾರವಷ್ಟೆ ಕಳೆದಿದ್ದರೂ ಕೆಟ್ಟ ಸಂಪ್ರದಾಯ ಮಾತ್ರ ಕೊನೆಯಾಗಿಲ್ಲ .!
ತ್ರಿವಳಿ ತಲಾಖ್ ವಿರುದ್ಧ ನೀಡಿದ್ದ ದೂರು ಹಿಂದಕ್ಕೆ ಪಡೆಯಲು ನಿರಾಕರಿಸಿದ ಉತ್ತರ ಪ್ರದೇಶದ ಮಹಿಳೆಯೊಬ್ಬರ ಮೂಗನ್ನು ಅತ್ತೆ, ಮಾವನ ಮನೆಯವರು ಸೇರಿಕೊಂಡು ಕತ್ತರಿಸಿ ಹಾಕಿದ ಅಮಾನವೀಯ ಘಟನೆ ಜರುಗಿದೆ. ಆಕೆಯ ಪತಿ ದೂರವಾಣಿಯ ಮೂಲಕವೇ ಮೂರು ಬಾರಿ ತಲಾಖ್ ಹೇಳಿದ್ದರು . ಇದರ ವಿರುದ್ದ ಆಕೆ ಪತಿ ಮತ್ತು ಅವರ ತಾಯಿ, ತಂದೆಯ ವಿರುದ್ಧ ದೂರು ದಾಖಲಿಸಿ, ಯಾವುದೇ ಕಾರಣಕ್ಕೂ ದೂರನ್ನೂ ಹಿಂದಕ್ಕೆ ಪಡೆಯುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದರು.
ಜೊತೆಗೆ ಎರಡು ಕುಟುಂಬಗಳ ನಡುವೆ ಅಪ್ತ ಸಮಾಲೋಚನೆ ಸಹ ಮಾಡಲಾಗಿದ್ದರೂ ಅತ್ತೆ ಮಾವ ವಿರುದ್ಧ ನೀಡಿದ್ದ ದೂರನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದ ಕಾರಣ ಈಗ ಆಕೆಯ ಮೂಗನ್ನೆ ಕತ್ತರಿಸಿ ಹಾಕಲಾಗಿದೆ .ಪತಿ ಮತ್ತು ಆಕೆಯ ತಾಯಿ , ತಂದೆ ಇತರರು ಸೇರಿಕೊಂಡು ಮೂಗು ಕತ್ತರಿಸಿ ಹಾಕುವುದರ ಜೊತೆಗೆ ಕಲ್ಲಿನಿಂದಲೂ ಆಕೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೆÇಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಪತಿಯ ತಾಯಿ , ತಂದೆ ಅವರ ಮಗಳು, ಅಳಿಯಂದಿರು ಈ ಕೃತ್ಯದಲ್ಲಿ ಭಾಗಿಯಾಗಿ, ಥಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಗಳಿಗೆ ಆಗಿರುವ ಅನ್ಯಾಯದ ಬಗ್ಗೆ ಆಕೆಯ ತಾಯಿ ಪೆÇಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದರು. ಇದರಿಂದ ಹಿಂದೆ ಸರಿಯಬೇಕು ಎಂದು ಪತಿಯ ಕಡೆಯವರು ಬೆದರಿಕೆ ಹಾಕಿದ್ದರು . ಕಡೆಗೂ ದೂರು ಹಿಂದಕ್ಕೆ ಪಡೆಯಲು ನಿರಾಕರಿಸಿದಾಗ ಪತಿಯ ಮನೆಯರೆಲ್ಲರೂ ಸೇರಿಕೊಂಡು ಮಗಳ ಮೂಗನ್ನು ಕತ್ತರಿಸಿ ಹಾಕಿ ಮನಬಂದಂತೆ ಕಲ್ಲಿನಿಂದಲೂ ಥಳಿಸಿದ್ದಾರೆ ಎಂದು ತಾಯಿ ಅವಲತ್ತುಕೊಂಡಿದ್ದಾರೆ.
ಹಠಾತ್ತನೆ ಅದು ಮೂರು ಬಾರಿ ತಲಾಖ್ , ತಲಾಖ್ , ತಲಾಖ್ ಹೇಳುವುದು ಶಿಕ್ಷಾರ್ಹ ಅಪರಾಧ, ಮುಸ್ಲಿಂ ಮಹಿಳಾ ಹಕ್ಕುಗಳ ಸಂರಕ್ಷಣಾ ಮಸೂದೆಯನ್ನು ಕಳೆದ ವಾರವಷ್ಟೆ ಸಂಸತ್ ಅಂಗೀಕಾರ ಮಾಡಿತ್ತು . ಈ ರೀತಿಯ ಅಮಾನವೀಯ ಘಟನೆಗಳು ಮೇಲಿಂದ ಮೇಲೆ ಜರುಗುತ್ತಿವೆ . ತ್ರಿವಳಿ ತಲಾಖ್ ಅತ್ಯಂತ ಕೆಟ್ಟ ಸಂಪ್ರದಾಯ ಇದಕ್ಕೆ ಇತಿಶ್ರೀ ಹಾಡುವುದು ಒಳ್ಳೆಯದು ಎಂದು ಸುಪ್ರಿಂಕೋರ್ಟ್ ಸಹ ಅಭಿಪ್ರಾಯಪಟ್ಟಿತ್ತು.ಮಸೂದೆ ಅಂಗೀಕಾರದ ನಂತರವೂ, ಕಾಯಿದೆ ಜಾರಿಗೆ ಬಂದ ನಂತವೂ ತ್ರಿವಳಿ ತಲಾಖ್ ಹೇಳುವ, ಮುಸ್ಲಿಂ ಮಹಿಳೆಯರನ್ನು ಸಂಕಷ್ಟಕ್ಕೆ ನೂಕುವ ಕೆಟ್ಟ ಪರಿಪಾಠ ಪುನರಾವರ್ತನೆ ಆಗುತ್ತಲೇ ಇದೆ.!
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








