ಹೊನ್ನಾಳಿ:
ಹಿಂದೂ ರುದ್ರಭೂಮಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮಿತಿಯ ಪದಾಧಿಕಾರಿಗಳು ಶೀಘ್ರವೇ ಕಲ್ಪಿಸಬೇಕು ಎಂದು ಇಲ್ಲಿನ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಬಳಿ ವೀರಶೈವ ಲಿಂಗಾಯಿತ ಹಿಂದೂ ರುದ್ರಭೂಮಿಯಲ್ಲಿ ಗುರುವಾರ ಲಿಂಗಮುದ್ರೆ ಕಲ್ಲು ಪ್ರತಿಷ್ಠಾಪಿಸಿ ಅವರು ಮಾತನಾಡಿದರು.
ವೀರಶೈವ ಲಿಂಗಾಯಿತ ಹಿಂದೂ ರುದ್ರಭೂಮಿ ಸಮಿತಿ ಅಧ್ಯಕ್ಷ, ಪಟ್ಟಣದ ಮಿನರ್ವ ಪೆಟ್ರೋಲ್ ಬಂಕ್ ಮಾಲಿಕ ಎಂ. ಸುರೇಶ್ ಮಾತನಾಡಿ, ಸರಕಾರವು 1965ರಿಂದ ಕಾಯ್ದಿರಿಸಿದ್ದ ದೇವನಾಯ್ಕನಹಳ್ಳಿ ಗ್ರಾಮದ ಸರ್ವೇ ನಂ. 62/ಪಿ3 ವ್ಯಾಪ್ತಿಯ ಭೂಮಿಯಲ್ಲಿ ವೀರಶೈವ ಲಿಂಗಾಯಿತ ಹಿಂದೂ ರುದ್ರಭೂಮಿಗೆ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಲಿಂಗಮುದ್ರೆ ಕಲ್ಲುಗಳನ್ನು ಪ್ರತ್ಯೇಕವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಭೂಮಿಗೆ ನಿರ್ದಿಷ್ಟ ಬದು ನಿರ್ಮಾಣ, ಕಾಪೌಂಡ್ ಕಟ್ಟಡ, ನೀರಿನ ಸೌಲಭ್ಯ ಸೇರಿದಂತೆ ಇತರೆ ಮೂಲಭೂತ ಸೌಲಭ್ಯಗಳನ್ನು ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ಕಲ್ಪಿಸಲು ಶ್ರಮಿಸುವುದಾಗಿ ತಿಳಿಸಿದರು.
ವೀರಶೈವ ಲಿಂಗಾಯಿತ ಹಿಂದೂ ರುದ್ರಭೂಮಿ ಸಮಿತಿ ಪದಾಧಿಕಾರಿಗಳಾದ ಕೋರಿ ಗುರುಲಿಂಗಪ್ಪ, ಬಸವರಾಜ ಪಟೇಲ್, ಪಟ್ಟಣಶೆಟ್ಟಿ ಪರಮೇಶ್, ಮಾದೇನಹಳ್ಳಿ ಸೋಮಶೇಖರ್, ರೈತ ಮುಖಂಡ ಹಿರೇಮಠದ ಬಸವರಾಜಪ್ಪ, ಸಣ್ಣಕ್ಕಿ ಬಸವನಗೌಡ, ಗೌಡರ ಪಾಪಣ್ಣ, ಸಣ್ಣಕ್ಕಿ ಮಂಜುನಾಥ್, ಅಂದಾನಿ ಗಂಗಾಧರ್, ಲಾಯರ್ ಸುರೇಶ್, ಪ್ರೊ. ಆರ್.ಸಿ. ದೊಡ್ಡಗೌಡರ್, ನಂದಿ ಮಹೇಶಣ್ಣ, ಪೇಟೆ ಗಂಗಾಧರ್, ಬಾಬುಗೌಡ, ಎಲ್‍ಐಸಿ ಸುರೇಶ್, ಕಾಗಿನಲೆ ರಮೇಶ್, ಕಾಯಿ ಬಸಣ್ಣ, ಕುಂಬಾರ ಮುರುಗೇಶ್, ಹಿರೇಕಲ್ಮಠದ ವೇ. ಅನ್ನದಾನಯ್ಯ ಶಾಸ್ತ್ರೀ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
