ಕೊರಟಗೆರೆ:-
ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲುಕೆರೆ ಅಂಗಳದಲ್ಲಿ ಮರಳು ಶೇಖರಣೆ ಮಾಡುವ ನಿಖರ ಮಾಹಿತಿಯ ಮೆರೆಗೆ ಕೊರಟಗೆರೆ ಪಿಎಸೈ ಮಂಜುನಾಥ್ ನೇತೃತ್ವದ ಪೊಲೀಸ್ ತಂಡ ಭಾನುವಾರ ಮದ್ಯರಾತ್ರಿ ದಾಳಿ ನಡೆಸಿ ಮರಳು ತುಂಬಿದ ಲಾರಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಜೆಟ್ಟಿಅಗ್ರಹಾರ ಬಳಿಯ ದೊಡ್ಡನರಸಯ್ಯನ ಪಾಳ್ಯದ ಕೆರೆಯ ಅಂಗಳದಲ್ಲಿ ಭಾನುವಾರ ಮಧ್ಯರಾತ್ರಿ ಲಾರಿಗೆ ಅಕ್ರಮವಾಗಿ ಮರಳು ತುಂಬುತ್ತಿರುವ ಬಗ್ಗೆ ಕೊರಟಗೆರೆ ಪೊಲೀಸ್ ಬೀಟ್ ಸಿಬ್ಬಂದಿ ದೊಡ್ಡಲಿಂಗಯ್ಯ ನೀಡಿದ ಮಾಹಿತಿ ಮೇಲೆ ಪೊಲೀಸರತಂಡ ದಾಳಿ ನಡೆಸಿ ಮರಳು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪೊಲೀಸರಿಗೆ ಕಣ್ತಪ್ಪಿಸಿ ಮದ್ಯರಾತ್ರಿ ವೇಳೆ ಕೆರೆ ಅಂಗಳದಲ್ಲಿ ಕೂಲಿ ಕಾರ್ಮಿಕರ ಮೂಲಕ ನೇರವಾಗಿ ಲಾರಿಗೆ ಮರಳನ್ನು ಅಕ್ರಮವಾಗಿ ತುಂಬಿ ಸಾಗಾಣಿಕೆ ಮಾಡುವ ಮಾಹಿತಿ ಆಧರಿಸಿ ಅಲ್ಲಿನ ಬೀಟ್ ಪೊಲೀಸರ ಮಾಹಿತಿ ಮೆರೆಗೆ ಮದ್ಯರಾತ್ರಿ ಪಿಎಸೈ ಹಾಗೂ ಪೊಲೀಸ್ ಸಿಬ್ಬಂದಿ ದಾಳಿ ನಡೆಸಿ ಲಾರಿಯನ್ನು ವಶಕ್ಕೆ ಪಡೆದಿದ್ದಾರೆ.
ಈ ಸಂಬಂದ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಕ್ರಮ ಮರಳು ಸಾಗಿಸುತ್ತಿದ್ದ ಲಾರಿ ಮಾಲಿಕ ಹಾಗೂ ಮರಳು ತುಂಬುತ್ತಿದ್ದ ಕೂಲಿ ಕಾರ್ಮಿಕ ಹನುಮಂತರಾಯಪ್ಪ ಹಾಗೂ ಇತರರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.ಅಕ್ರಮ ಮರಳು ದಾಳಿಯ ಸಂದರ್ಬದಲ್ಲಿ ಪೊಲೀಸ್ ಸಿಬ್ಬಂಧಿಗಳಾದ ದೊಡ್ಡಲಿಂಗಯ್ಯ, ಚಂದ್ರಶೇಖರ್, ಮಲ್ಲಿಕಾರ್ಜುನ್ ಸೇರಿದಂತೆ ಇತರ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
