ಯಾರೊಬ್ಬರೂ ಸೂರಿಲ್ಲಾ ಎಂಬ ಕೊರಗಿನಿಂದ ಜೀವನ ಸಾಗಿಸಬಾರದು: ಎಸ್ ಟಿ ಸೋಮಶೇಖರ್

ಬೆಂಗಳೂರು

       ಪ್ರತಿಯೊಬ್ಬರೂ ಸೂರಿಲ್ಲ ಎಂಬ ಕೊರಗಿನಿಂದ ಜೀವನ ಸಾಗಿಸಬಾರದು ಎಂಬ ಉದ್ದೇಶವನ್ನಿಟ್ಟುಕೊಂಡು ೪೫೦೦ ಎಕರೆ ಜಮೀನನ್ನು ಗುರುತಿಸಿ ನೀಡಲು ತೀರ್ಮಾನಿಸಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ತಿಳಿಸಿದರು.

      ಮಾಗಡಿ ರಸ್ತೆಯ ಅಂಜನಾನಗರದಲ್ಲಿ ಬಿಜೆಪಿ ಮಹಿಳಾ ವಿಭಾಗ ಹಮ್ಮಿಕೊಂಡಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಖ್ಯಮಂತ್ರಿಯವರ ಒಂದು ಲಕ್ಷ ವಸತಿ ಯೋಜನೆಯಡಿ ಶೀಘ್ರದಲ್ಲಿಯೇ ಬಹು ಅಂತಸ್ಥಿತಿನ ೪೪ ಸಾವಿರ ಮನೆಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಕ್ಷೇತ್ರದ ಜನರಿಗೆ ೨೫ಸಾವಿರ ಮನೆ ನೀಡಿದ ನಂತರ ಉಳಿದವರಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದ ಅವರು ಹೇರೋಹಳ್ಳಿ, ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಕೇಲವೇ ತಿಂಗಳಲ್ಲಿ ಸಂಪೂರ್ಣ ಒಳಚರಂಡಿ, ಡಾಂಬರೀಕರಣ ಮುಗಿಸಲಾಗುವುದು ಎಂದರು.

     ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣೀಕವಾಗಿ ಪ್ರತಿಯೊಬ್ಬ ಮಹಿಳೆಯರು ಮುಂದೆ ಬರಲೇಬೇಕು.ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಹಲವಾರು ಸವಲತ್ತು ದೊರಕಿಸಿಕೊಡಲಾಗುವುದು. ಹನ್ನೊಂದು ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದ್ದ ಸಮಾಜ ಮುಖಿ ಸೇವೆ ಮುಂದುವರೆಸಿಕೊಂಡು ಹೋಗಲಾಗುವುದು. ರಾಜಕೀಯ ಸಮಸ್ಯೆಯಿಂದ ಒಂದು ವರ್ಷದಿಂದ ನಿಲ್ಲಿಸಿದ್ದ ಎಲ್ಲಾ ಜನಪರ ಕೆಲಸ ಮುಂದುವರೆಸಲಾಗುವುದು ಎಂದು ಭರವಸೆ ನೀಡಿದರು.

      ಚಿಂತಕ ಹಿರಿಯ ರಾಜಕಾರಣಿ ಬ್ಯಾಡರಹಳ್ಳಿ ಹನುಮಂತರಾಯಪ್ಪ ಮಾತನಾಡಿ ದೇವರಾಜಅರಸು, ಕೆಂಗಲ್ ಹನುಮಂತಯ್ಯ, ಶಾಂತವೀರಗೋಪಾಲಗೌಡ, ಎಚ್.ಕೆ.ವೀರಣ್ಣಗೌಡ, ಎಚ್.ಜಿ.ಗೋವಿಂದೇಗೌಡ ಅವರ ಚಿಂತನೆಯನ್ನು ಮೈಗೂಡಿಸಿಕೊಂಡು ದುಡಿಯುತ್ತಿರುವ ಎಸ್.ಟಿ.ಸೋಮಶೇಖರ್ ಅವರ ಜನಪರ ಕೆಲಸಗಳನ್ನು ಮೆಚ್ಚಿಕೊಂಡು ರಾಜಕೀಯ ದಿಂದ ದೂರವಿರುವ, ವೇದಿಕೆ ಹತ್ತದ ನಮ್ಮಂತಹ ಹಲವಾರು ಜನಪರ ಕಾಳಜಿಯಿಂದ ಕೆಲಸ ಮಾಡುವವರು ಬಹಳಷ್ಟು ಇದ್ದು ಸೋಮಶೇಖರ್ ಅವರ ಜಾತ್ಯಾತೀತ, ಪಕ್ಷಾತೀತ ಕೆಲಸಗಳಿಗೆ ಕೈ ಜೋಡಿಸುತ್ತಿದ್ದಾರೆ ಎಂದರು.

     ಚಿತ್ರನಟಿ ಅಭಿನಯ, ಪಾಲಿಕೆ ಸದಸ್ಯ ರಾಜಣ್ಣ, ಜಿ.ಪಂಅಧ್ಯಕ್ಷ ಮರಿಸ್ವಾಮಿ, ಮುಖಂಡರಾದ ಸವಿತಾ, ನಾಗವೇಣಿ ಪಟೇಲ್ ಚಿಕ್ಕಣ್ಣ, ಎಚ್.ಶ್ರೀಧರ್, ಹೇರೋಹಳ್ಳಿ ರಘು, ಪಂಚಾಯ್ತಿ ಮಾಜಿ ಸದಸ್ಯೆ ನಂದಾಸಿಂಗ್, ಅಂಜನ್‌ಕುಮಾರ್, ಟೆಂಟ್ ಮಹೇಶ್‌ಕುಮಾರ್, ಕಾಚೋಹಳ್ಳಿ ಲೋಕೇಶ್ ಪಟೇಲ್ ಚಿಕ್ಕಣ್ಣ ಇದ್ದರು.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link