ಚಿತ್ರದುರ್ಗ;
ಕೇಂದ್ರ ಸರ್ಕಾರ ಇತ್ತೀಚಿನ ದಿನದಲ್ಲಿ ಎಲ್ಲಾ ವಸ್ತುಗಳ ಮೇಲೆ ಜಿಎಸ್.ಟಿ.ಯನ್ನು ಹಾಕಿದೆ ಇದರಿಂದ ಪುಸ್ರಕ ಪ್ರಕಾಶಕರಿಗೆ ಹೊರೆಯಾಗುತ್ತಿದೆ ಇದರಿಂದ ಲೇಖಕರಿಗೆ ನೀಡುವ ಗೌರವಧನ ಕಡಿಮೆಯಾಗುತ್ತಿದ್ದು ಪುಸ್ತಕವನ್ನು ಖರೀದಿ ಮಾಡುವ ಓದುಗರಿಗೂ ಸಹಾ ಹೊರೆಯಾಗುತ್ತಿದೆ ಇದರಿಂದ ಪುಸ್ತಕ ಪ್ರಕಾಶನವನ್ನು ಜಿಎಸ್.ಟಿ.ಯಿಂದ ಹೊರಗಿಡುವಂತೆ ಮನವಿ ಮಾಡಲಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ: ವಸುಂಧರಾ ಭೂಪತಿ ತಿಳಿಸಿದರು.
ಕನ್ನಡ ಪುಸ್ತಕ ಪ್ರಾಧಿಕಾರದವತಿಯಿಂದ ನಿಮ್ಮ ಮನೆಗೆ ನಮ್ಮ ಪುಸ್ತಕ ಕಾರ್ಯಕ್ರಮದಡಿಯಲ್ಲಿ ನಗರದ ಡಾ: ಬಿ. ರಾಜಶೇಖರಪ್ಪ ನವರ ಮನೆಯಂಗಳದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಡಿ.
ಇತ್ತೀಚಿನ ದಿನಮಾನದಲ್ಲಿ ಓದುವ ಪ್ರವೃತ್ತಿ ಕಡಿಮೆಯಾಗಿ ನೋಡುವ ಪ್ರವೃತ್ತಿ ಹೆಚ್ಚಾಗುತ್ತಿದೆ ವರ್ಷಕ್ಕೆ ಲೇಖಕರು ಹಲವಾರು ಪುಸ್ತಕಗಳನ್ನು ಬರೆದರು ಪ್ರಕಾಶಕರು ಅದನ್ನು ಮುದ್ರಣ ಮಾಡಿದರು ಸಹಾ ಓದುವರು ಅದನ್ನು ಗಮನ ನೀಡುತ್ತಿಲ್ಲ ಇದನ್ನ ಮನಗಂಡ ಪ್ರಾಧಿಕಾರ ಜನತೆ ಅದರಲ್ಲೂ ಯುವ ಜನತೆಯಲ್ಲಿ ಓದುವ ಹವ್ಯಾಸವನ್ನು ಬೆಳಸಬೇಕೆಂಬ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಜಾರಿ ಮಾಡಿದ್ದು ಇದುವರೆವಿಗೂ 5 ಕಾರ್ಯಕ್ರಮ ನಡೆದಿದ್ದು ಇದು 6 ನೇ ಕಾರ್ಯಕ್ರಮವಾಗಿದೆ ಎಂದರು.
1993ರಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿದ್ಧಾಗ ಆರಂಭವಾದ ಪುಸ್ತಕ ಪ್ರಾಧಿಕಾರ ಯಾರು ಪ್ರಕಟ ಮಾಡದೇ ಇರುವ ಪುಸ್ತಕಗಳನ್ನು ಪ್ರಕಟ ಮಾಡುವುದರೊಂದಿಗೆ ಲೇಖಕ, ಪ್ರಕಾಶಕ ಮತ್ತು ಓದುಗ ಇವರ ಮಧ್ಯೆ ಸೇತುವೆಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದೆ, ಪ್ರಾಧಿಕಾರ ಬರೀ ಲೇಖಕರಿಗೆ ಮಾತ್ರವೇ ಪ್ರಾತಿನಿಧ್ಯ ನೀಡದೆ ಪ್ರಕಾಶಕರನ್ನು ಸಹಾ ಗುರುತಿಸಿ ಅವರಿಗೂ ಸಹಾ ಉತ್ತಮವಾದ ಕೃತಿಗಳ ಮುದ್ರಣಕ್ಕೆ ಪುಟ ವಿನ್ಯಾಸ ಸೇರಿದಂತೆ ಇತರೆ ಕಾರ್ಯಗಳನ್ನು ಗುರುತಿಸಿ ಗೌರವಿಸಲಾಗುವುದು. ಅಲ್ಲದೆ ಪ್ರಕಾಶಕರ ಸಮಾವೇಶವನ್ನು ಮಾಡುವುದರ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಮಾಡಲಾಗಿದೆ ಎಂದು ಭೂಪತಿ ತಿಳಿಸಿದರು.
ಕೇಂದ್ರ ಸರ್ಕಾರ ಇತ್ತೀಚೇಗೆ ಎಲ್ಲದರ ಮೇಲು ಸಹಾ ತೆರಿಗೆಯನ್ನು ವಿಧಿಸಿದೆ ಇದೇ ರೀತಿ ಪುಸ್ತಕ ಪ್ರಕಾಶನದ ಮೇಲೂ ಸಹಾ ಶೇ 12 ರಷ್ಟು ತೆರಿಗೆಯನ್ನು ವಿಧಿಸಿದೆ ಇದರಿಂದ ಪ್ರಕಾಶಕರಿಗೆ ಹೆಚ್ಚಿನ ಹೊರೆಯಾಗಿದೆ, ಇದದರಿಂದ ಲೇಖಕರ ಸಂಭಾವನೆ ಕಡಿತವಾಗುತ್ತಿದೆ ಇದರಿಂದ ಪುಸ್ತಕ ಪ್ರಕಾಶನದ ಮೇಲೆ ಕೇಂದ್ರ ಸರ್ಕಾರ ವಿಧಿಸಿರುವ ತೆರಿಗೆಯನ್ನು ರದ್ದು ಮಾಡುವುದರ ಮೂಲಕ ಓದುಗರಿಗೆ ಸಾದ್ಯವಾದಷಟ್ಟು ಕಡಿಮೆ ದರದಲ್ಲಿ ಪುಸ್ತಕಗಳನ್ನು ತಲುಪಿಸಬೇಕೆಂಬುದು ಪ್ರಾಧಿಕಾರದ ಆಸೆಯಾಗಿದೆ ಎಂದರು.
ಇಂದಿನ ದಿನಮಾನದಲ್ಲಿ ಯಾವುದೇ ಮಾಹಿತಿ ಬೇಕಾದರೂ ಸಹಾ ಅದನ್ನು ತಮ್ಮ ಮೊಬೈಲ್‍ನಲ್ಲಿ ಶೀಘ್ರವಾಗಿ ಪಡೆಯಬಹುದಾಗಿದೆ, ಇದೇ ರೀತಿ ಕೆಲವೊಂದು ಪುಸ್ತಕಗಳನ್ನು ಪ್ರಾಧಿಕಾರದಿಂದ ಯೂಟೂಬ್ ಮತ್ತು ಈ ಬುಕ್‍ಗೆ ಹಾಕಲಾಗಿದೆ, ಇದರಲ್ಲಿ ಓದುವುದು ಇರದೇ ಕೇಳುವ ಸಂಸ್ಕøತಿಯನ್ನು ಆಳವಡಿಸಲಾಗಿದೆ. ಉತ್ತಮ ಕೃತಿಗಳನ್ನು ಪ್ರಾಧಿಕಾರ ಖರೀದಿ ಮಾಡುವುದರ ಮೂಲಕ ಶಾಲೆಗಳಿಗೆ ನೀಡಲಾಗುತ್ತಿದೆ. ಮನೆಯಲ್ಲಿ ವಿವಿಧ ಭಾಗಗಳಿದ್ದಂತೆ ಪುಸ್ತಕಗಳಿಗೂ ಸಹಾ ಜಾಗವನ್ನು ನೀಡಬೇಕಿದೆ ಅವುಗಳನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಓದುವ ಹವ್ಯಾಸವನ್ನು ಬೆಳಸಬೇಕಿದೆ ಎಂದು ವಸುಂಧರ ಭೂಪತಿ ತಿಳಿಸಿದರು.
ಕಾರ್ಯಕ್ರದಲ್ಲಿ ಭಾಗವಹಿಸಿದ್ದ ಪ್ರೊ: ಜಿ.ಶರಣಪ್ಪ ಮಾತನಾಡಿ, ಯಾವ ಮಾನವ ಜೊತೆಗೆ ಪುಸ್ತಕ ಇರುತ್ತದೆಯೂ ಆತ ಯಾವೊತ್ತು ಸಹಾ ಏಕಾಂಗಿ ಅಲ್ಲ, ಪುಸ್ತಕವನ್ನು ಓದುವುದರಿಂದ ನಮ್ಮ ಮನಸಿನ ದುಃಖ, ದುಮ್ಮಾನಗಳನ್ನು ದೂರ ಮಾಡಬಹುದಾಗಿದೆ, ಅಲ್ಲದೆ ಜ್ಞಾನವನ್ನು ಬೆಳಸಿಕೊಳ್ಳಬಹುದಾಗಿದೆ, ಪುಸ್ತಕಗಳಿಲ್ಲದ ಮನೆ ಪ್ರಾಣ ಇಲ್ಲದ ಶರೀರದ್ದಂತೆ, ಬರೆಯುವುದಕ್ಕೆ, ಓದುವುದಕ್ಕೆ ಸಮಯ ಮತ್ತು ವಯಸ್ಸಿನ ಕೊರತೆ ಇರಬಾರದು ಯಾವ ವಯಸ್ಸಿನಲ್ಲಾದರೂ ಸರಿ ಓದುವ ಮತ್ತು ಬರೆಯವ ಹವ್ಯಾಸ ಬೆಳಸಿಕೊಳ್ಳಬೇಕಿದೆ ಎಂದರು.
ಉಪನ್ಯಾಸಕಿ, ಲೇಖಕಿ ತಾರಿಣಿ ಶುಭದಾಯಿನಿ ಮಾತನಾಡಿ ಓದುವ ಹವ್ಯಾಸವನ್ನು ನಮ್ಮ ತಂದೆಯಿಂದ ಪಡೆದು ಅದನ್ನು ನಾವು ಮುಂದುವರೆಸಿದ್ದೇವೆ ನಮ್ಮ ಕಾಲವು ಮುಗಿಯುತ್ತಾ ಬಂದಿದೆ ಇದನ್ನು ಮುಂದಿನ ಪೀಳಿಗೆಗೆ ಕಳುಹಿಸಬೇಕಿದೆ ಆದರೆ ಯಾವ ರೀತಿ ಎಂದು ಮನವರಿಕೆಯಾಗುತ್ತಿಲ್ಲ ಏಕೆಂದರೆ ಯುವ ಜನಾಂಗ ಓದುವ ಹವ್ಯಾಸವನ್ನು ಬೆಳಸಿಕೊಳ್ಳದೆ ಬರೀ ನೋಡುವ ಹವ್ಯಾಸವನ್ನು ರೂಢಿಸಿಕೊಂಡಿದೆ ಇದ್ದಲ್ಲದೆ ಈಗ ಕೇಳುವ ಹವ್ಯಾಸವೂ ಸಹಾ ಹೆಚ್ಚಾಗಿದೆ ಇದರಿಂದ ನಮ್ಮ ಜೀವನದಲ್ಲಿ ಇದ್ದಂತೆ ಓದುವ ಹವ್ಯಾಸ ಇಂದಿನ ಪೀಳಿಗೆಯಲ್ಲಿ ಇಲ್ಲ ಎಂದು ವಿಷಾಧಿಸಿದರು.
ಹಿಂದಿನ ಕಾಲದಲ್ಲಿ ವಿವಿಧ ಗಲಾಟೆ ಇದ್ದರೂ ಸಹಾ ಓದುವ ಏಕಾಗ್ರತೆಯನ್ನು ರೂಢಿಸಿಕೊಂಡು ಪುಸ್ತಕವನ್ನು ಓದುತ್ತಿದ್ದ ಈಗ ಟಿ.ವಿ. ಮೊಬೈಲ್‍ಗಳ ಗಲಾಟೆ ನಡುವೆ ಓದುವ ಹವ್ಯಾಸ ಬೆಳೆಯಬೇಕಿದೆ. ಪುಸ್ತಕವನ್ನು ಓದುವುದರಿಂದ ದೈಹಿಕವಾಗಿ ಏನು ಸಿಗದಿದ್ದರೂ ಸಹಾ ಮಾನಸಿಕವಾಗಿ ಆತ್ಮಸ್ಥರ್ಯ, ನೆಮ್ಮದಿ ಸಿಗುತ್ತದೆ ನಾನು ಇಲ್ಲಿ ನಿಂತು ಮಾತನಾಡುವುದಕ್ಕೆ ಉಪನ್ಯಾಸಕಿಯಾಗಿ ಕೆಲಸ ಮಾಡುವುದಕ್ಕೆ ನಮ್ಮ ತಂದೆಯ ಮನೆಯಲ್ಲಿ ಓದಿದ ಪುಸ್ತಕಗಳು ಕಾರಣವಾಗಿದೆ ಎಂದು ತಾರಿಣಿ ಶುಭದಾಯಿನಿ ತಿಳಿಸಿದರು.ಸಮಾರಂಭದ ಅತಿಥೇಯರು ಡಾ: ಬಿ. ರಾಜಶೇಖರಪ್ಪ ಶ್ರೀಮತಿ ಯಶೋಧ ರಾಜಶೇಖರಪ್ಪ, ಉಜ್ಜನಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
