ಚಿತ್ರದುರ್ಗ:
ಪಾರ್ಲಿಮೆಂಟ್ ಚುನಾವಣೆಗೆ ಈ ಬಾರಿ ಚಿತ್ರದುರ್ಗ ಕ್ಷೇತ್ರದಿಂದ ಸ್ಥಳೀಯ ಅಭ್ಯರ್ಥಿ ಮಾಜಿ ಸಂಸದ ಜನಾರ್ಧನಸ್ವಾಮಿಗೆ ಟಿಕೇಟ್ ನೀಡಬೇಕೆಂದು ಅಂಬೇಡ್ಕರ್ ಜನಾಂದೋಲನ ಸೇನೆ ರಾಜ್ಯಾಧ್ಯಕ್ಷ ಎಂ.ಕೆ.ಶಶಿಧರ್ ಬಿಜೆಪಿ.ವರಿಷ್ಟರುಗಳನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಜನಾರ್ಧನಸ್ವಾಮಿ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿದ್ದಾಗ ಕೇವಲ ಭೋವಿ ಜನಾಂಗವನ್ನಲ್ಲ. ಎಲ್ಲಾ ಜಾತಿಯವರನ್ನು ಒಟ್ಟಿಗೆ ತೆಗೆದುಕೊ9ಂಡು ಹೋಗಿ ಜಿಲ್ಲೆ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನಾರ್ಧನಸ್ವಾಮಿಗೆ ಬಿಜೆಪಿ.ಯಿಂದ ಟಿಕೇಟ್ ನೀಡಿದರೆ ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಲ್ಲಿರುವ ಮಾದಿಗ ಸಮುದಾಯ ಅವರಿಗೆ ಬೆಂಬಲಿಸಲಿದೆ.
ಒಂದು ವೇಳೆ ಸ್ಥಳೀಯರನ್ನು ಕಡೆಗಣಿಸಿ ಹೊರಗಿನವರು ವರಿಷ್ಟರು ಟಿಕೇಟ್ ನೀಡಿದ್ದೇ ಆದಲ್ಲಿ ಬಿಜೆಪಿ.ಯನ್ನು ಸೋಲಿಸುವುದು ಶತಸಿದ್ದ ಎಂದು ವರಿಷ್ಟರುಗಳಿಗೆ ಎಚ್ಚರಿಕೆ ನೀಡಿದರು. ಇಲ್ಲಿಯವರೆಗೂ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸದಸ್ಯರುಗಳಾಗಿದ್ದವರು ಯಾರು ಬರಪೀಡಿತ ಜಿಲ್ಲೆಯ ಅಭಿವೃದ್ದಿಗೆ ಒತ್ತು ಕೊಡಲಿಲ್ಲ. ಆದರೆ ಜನಾರ್ಧನಸ್ವಾಮಿ ಚಳ್ಳಕೆರೆ ಸಮೀಪ ಡಿ.ಆರ್.ಡಿ.ಓ.ಆರಂಭವಾಗಲು ಅಪಾರ ಕೊಡುಗೆ ನೀಡಿದ್ದಾರೆ. ಇದರಿಂದ ಬರಪೀಡಿತ ಜಿಲ್ಲೆ ಮುಂದಿನ ದಿನಗಳಲ್ಲಿ ವಿಜ್ಞಾನದಲ್ಲಿ ಸಾಕಷ್ಟು ಅಭಿವೃದ್ದಿಯಾಗಲಿದೆ ಎಂದು ತಿಳಿಸಿದರು.
ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಿಂದ ಗೆದ್ದು ದೆಹಲಿಗೆ ಹೋದವರು ಜಿಲ್ಲೆಯ ಮಾದಿಗರಿಗೆ ಏನು ಮಾಡಿದ್ದಾರೆ.
ಅದಕ್ಕಾಗಿ ಈ ಚುನಾವಣೆಯಲ್ಲಿ ಬಿಜೆಪಿ.ಯಿಂದ ಜನಾರ್ಧನಸ್ವಾಮಿಗೆ ಟಿಕೇಟ್ ಕೊಡಿ ಎನ್ನುವುದು ನಮ್ಮ ಅಹವಾಲು. ಒಂದು ವೇಳೆ ವರಿಷ್ಟರು ಜನಾರ್ಧನಸ್ವಾಮಿಯನ್ನು ಕಡೆಗಣಿಸಿ ಬೇರೆಯವರಿಗೆ ಟಿಕೇಟ್ ನೀಡಿದರೆ ಬಿಜಪಿ.ವಿರುದ್ದ ಮತಚಲಾಯಿಸಬೇಕಾಗುತ್ತದೆ ಎಂದರು.ಅಂಬೇಡ್ಕರ್ ಜನಾಂದೋಲನ ಸೇನೆ ರಾಜ್ಯ ಉಪಾಧ್ಯಕ್ಷ ವರುಣ್‍ಕುಮಾರ್ ಎಲ್. ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಪ್ರಹ್ಲಾದ್, ತಾ.ಪಂ.ಸದಸ್ಯ ಚನ್ನಗನಹಳ್ಳಿ ಮಲ್ಲೇಶ್, ಮಾದಿಗ ಮುಖಂಡ ಎನ್.ತಿಪ್ಪೇಸ್ವಾಮಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
