ಸಿರಿಡಿ ಸಾಯಿಬಾಬಾರವರ ಸಮಾಧಿ ಪ್ರವೇಶದ 100ನೇ ವರ್ಷಾಚರಣೆ

0
20

ಚಳ್ಳಕೆರೆ

       ಭಗವಾನ್ ಸಿರಿಡಿ ಸಾಯಿಬಾಬಾರವರು ಸಮಾಧಿ ಪ್ರವೇಶಿಸಿ 100 ವರ್ಷಗಳು ಸಂದ ಈ ಸಂದರ್ಭದಲ್ಲಿ ವಾಸವಿ ಸಿರಿಡಿ ಸಾಯಿಬಾಬಾ ಭಜನಾ ಸಂಘದ ವತಿಯಿಂದ ಗಾಂಧಿನಗರದ ವಾಣಿಜ್ಯೋದ್ಯಮಿ ಬೃದುಲಶ್ರೀನಿವಾಸ್ ಸ್ವಗೃಹದಲ್ಲಿ ವಿಶೇಷ ಭಜನಾ ಕಾರ್ಯಕ್ರಮವನ್ನು ಏರ್ಪಡಿಸಿ ಸಾಯಿಬಾಬಾರವರ ಪುಣ್ಯ ಸ್ಮರಣೆ ಮಾಡಲಾಯಿತು.

      ಸಿರಿಡಿ ಸಾಯಿಬಾಬಾ ಭಜನಾ ತಂಡ ಪ್ರತಿ ದಿನವೂ ತಂಡದ ಸದಸ್ಯರ ಮನೆಯಲ್ಲೇ ಸಾಯಿಬಾಬಾರವರ ಭಜನೆಗಳ ಮೂಲಕ ಇವರ ಸ್ಮರಣೆಯನ್ನು ಮಾಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷೆ ವಿಶಾಲಾಕ್ಷಮ್ಮಜಿ.ಎಸ್.ಮಾರುತಿ ತಿಳಿಸಿದರು. ಭಜನಾ ತಂಡದ ಎಲ್ಲಾ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಯಿಬಾಬಾರವರ ಸ್ಮರಣೆಯಲ್ಲಿ ನಿರತರಾಗಿರುವುದಲ್ಲದೆ ಬರುವ ದಸರಾ ಹಬ್ಬದ ಹಿನ್ನೆಲೆಯಲ್ಲೂ ಸಹ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

      ಭಜನಾ ಕಾರ್ಯಕ್ರಮದಲ್ಲಿ ಸುಮಿತ್ರಮ್ಮರಾಮದಾಸ್, ಆಶಾಮಧು, ಜಾನ್ಸಿಚಿದಾನಂದಶೆಟ್ಟಿ, ನಾಗವೇಣಮ್ಮ, ಬೃದುಲಶ್ರೀನಿವಾಸ್ ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here