ಆಯತಪ್ಪಿ ಬಿದ್ದು ಸಾಫ್ಟ್ ವೇರ್ ಇಂಜಿನಿಯರ್ ಸಾವು..!!

ಬೆಂಗಳೂರು

      ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಇಬ್ಬರು ಮಹಿಳಾ ಸಾಫ್ಟ್‍ವೇರ್ ಇಂಜಿನಿಯರ್‍ಗಳಲ್ಲಿ ಆಯತಪ್ಪಿ ಬಿದ್ದು ಒಬ್ಬಾಕೆ ಮೃತಪಟ್ಟರೆ, ಮತ್ತೊಬ್ಬಾಕೆ ಗಾಯಗೊಂಡಿರುವ ದುರ್ಘಟನೆ ಕೆಆರ್‍ಪುರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ನ್ಯೂ ಲೈಟ್ ಜಂಕ್ಷನ್ ಬಳಿ ಶನಿವಾರ ಮುಂಜಾನೆ ನಡೆದಿದೆ.

      ಮೃತಪಟ್ಟವರನ್ನು ಕೇರಳ ಮೂಲದ ದೊಡ್ಡನೆಕ್ಕುಂದಿಯ ಸುಶ್ಮಿತ (25)ಎಂದು ಗುರುತಿಸಲಾಗಿದೆ.ಗಾಯಗೊಂಡು ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಮಮೂರ್ತಿನಗರದ ಚೈತನ್ಯ (24) ಅವರ ಸ್ಥಿತಿ ಗಂಭೀರವಾಗಿದೆ.ಕೆ.ಆರ್. ಪುರಂನ ಇಎಂಸಿ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಸ್ನೇಹಿತರು ರಾತ್ರಿಪಾಳಯದಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗಲು ಮುಂದಾದರು.

       ಚೈತನ್ಯ ಚಲಾಯಿಸುತ್ತಿದ್ದ ಹೊಂಡಾ ಆಕ್ಟೀವಾ ಸ್ಕೂಟರ್‍ನಲ್ಲಿ ಹಿಂದೆ ಕುಳಿತು ಸುಶ್ಮಿತ ಹೋಗುತ್ತಿದ್ದು, ಮಾರ್ಗಮಧ್ಯೆ ನ್ಯೂ ಲೈಟ್ ಜಂಕ್ಷನ್‍ನ ಹಳೆಮಸೀದಿ ಬಳಿ ಮುಂಜಾನೆ 4.30ರ ವೇಳೆ ಸ್ಕೂಟರ್ ಆಯತಪ್ಪಿ ಬಿದ್ದು, ಗಂಭೀರವಾಗಿ ಮುಖಕ್ಕೆ ಗಾಯಗೊಂಡ ಸುಶ್ಮಿತ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.ಗಾಯಗೊಂಡಿರುವ ಚೈತನ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿರುವ ಕೆ.ಆರ್. ಪುರಂ ಸಂಚಾರ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link