ಬೆಂಗಳೂರು
ಇನ್ನೆರಡು ದಿನಗಳಲ್ಲಿ ಅಮೆರಿಕಾದಲ್ಲಿ ಡಾಕ್ಟರೇಟ್ ಪದವಿಯ ಉನ್ನತ ವ್ಯಾಸಂಗಕ್ಕೆ ಹೋಗಲು ಸಿದ್ಧತೆ ನಡೆಸಿದ್ದ ಸ್ನಾತಕೋತ್ತರ ಪದವೀಧರರೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದುರ್ಘಟನೆ ಜಾಲಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮಧ್ಯೆ ರಾತ್ರಿ ನಡೆದಿದೆ.
ಯಶವಂತಪುರದ ಹರೀಶ್ (28)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ. ನಾರ್ವೆ ದೇಶದಲ್ಲಿ ಇತ್ತೀಚೆಗೆ ಅಷ್ಟೇ ಸ್ನಾತಕೋತ್ತರ ಪದವಿ (ಎಂಎಸ್) ಮುಗಿಸಿ ಬಂದಿದ್ದ ಹರೀಶ್ ಇನ್ನೆರಡು ದಿನಗಳಲ್ಲಿ ಅಮೆರಿಕಾಕ್ಕೆ ಉನ್ನತ ವ್ಯಾಸಂಗಕ್ಕೆ ಹೋಗಬೇಕಾಗಿತ್ತು.
ಸ್ನೇಹಿತರ ಮನೆಗೆ ಹೋಗಿ ಊಟ ಮುಗಿಸಿ ರಾತ್ರಿ 1.30ರ ವೇಳೆ ಮನೆಗೆ ಸ್ಕೂಟರ್‍ನಲ್ಲಿ ವೇಗವಾಗಿ ಬರುತ್ತಿದ್ದ ಹರೀಶ್ ಮಾರ್ಗ ಮಧ್ಯೆ ನಾಗಾಲ್ಯಾಂಡ್ ವೃತ್ತದ ಬಸ್ ನಿಲ್ದಾಣದ ಬಳಿ ಹಾಯತಪ್ಪಿ ಬಿದ್ದು ಫುಟ್‍ಬಾತ್‍ಗೆ ತಲೆಹೊಡೆದು ಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರಕರಣ ದಾಖಲಿಸಿರುವ ಜಾಲಹಳ್ಳಿ ಸಂಚಾರ ಪೆÇಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸೌಮ್ಯ ಲತಾ ತಿಳಿಸಿದ್ದಾರೆ.
ಕಾರು ಚಾಲಕ ಸಾವು
ಬನಶಂಕರಿಯ 6ನೇ ಹಂತದ 80 ಅಡಿ ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಸ್ಪಿಫ್ಟ್ ಡಿಸೈರ್ ಕಾರು ಡಿಕ್ಕಿ ಹಾಯತಪ್ಪಿ ಬಿದ್ದು ಚಾಲಕ ಮೃತಪಟ್ಟಿರುವ ದುರ್ಘಟನೆ ಕುಮಾರಸ್ವಾಮಿ ಲೇ ಔಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ವಿದ್ಯಾಪೀಠದ ವೃತ್ತದ ಏಳುಮಲೈ (27) ಮೃತಪಟ್ಟವರು. ಕಾರಿನ ಚಾಲಕ ಕಂ ಮಾಲೀಕನಾಗಿದ್ದ ಏಳುಮಲೈ ಬೆಳಿಗ್ಗೆ 6ರ ವೇಳೆ ಬನಶಂಕರಿಯ ಜಂಕ್ಷನ್ 80 ಅಡಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, ಕುಮಾರಸ್ವಾಮಿ ಲೇ ಔಟ್ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಸೌಮ್ಯಲತಾ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ







