ಹಗರಿಬೊಮ್ಮನಹಳ್ಳಿ
ಬಳ್ಳಾರಿ ಜಿಲ್ಲೆಯಲ್ಲಿ ಲೂಟಿ ಆಗುತ್ತಿದ್ದ ಗಣಿ ಹಗರಣವನ್ನು ಬಯಲಿಗೆಳೆದ ವಿ.ಎಸ್.ಉಗ್ರಪ್ಪ ಸಂಸತ್‍ನಲ್ಲಿ ಬಳ್ಳಾರಿ ಜಿಲ್ಲೆಯ ಧ್ವನಿಯಾಗಲಿದ್ದಾರೆ ಎಂದು ಶಾಸಕ ಎಸ್.ಭೀಮಾನಾಯ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ಹಂಪಾಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಲೋಕಸಭಾ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಮತಯಾಚನೆ ವೇಳೆ ಪಾಲ್ಗೊಂಡು ಅವರು ಮಾತನಾಡಿದರು. ಉಗ್ರಪ್ಪನವರು ಬಳ್ಳಾರಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‍ನಲ್ಲಿ ಪ್ರಶ್ನಿಸುತ್ತಾರೆ, ಅವರು ಗೆದ್ದು ಬಂದರೆ, ಅಭಿವೃದ್ಧಿಗಾಗಿ ಕೇಂದ್ರದ ಅನುದಾನ ತರುವಲ್ಲಿ ನಿರಂತರ ಪ್ರಯತ್ನದಲ್ಲಿರುತ್ತಾರೆ.
ಈ ಗ್ರಾಮ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಮತ್ತು ಇತ್ತೀಚಿನ ಸಮ್ಮಿಶ್ರ ಸರ್ಕಾರಗಳು ಸಾಕಷ್ಟು ಅನುದಾನಗಳನ್ನು ಬಿಡುಗಡೆಗೊಳಿಸಿದೆ. ರೈತರ ಹಿತದೃಷ್ಠಿಯಿಂದ ಮಾಲವಿ ಜಲಾಶಯ, ಚಿಲವಾರು ಬಂಡಿ ಏತ ನೀರಾವರಿ ಯೋಜನೆಗಳ ಕಾಮಗಾರಿಗಳು ಪ್ರಗತಿಯಲಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಹತ್ತಾರು ಕೆರೆಗಳ ತುಂಬಿಸುವ ಯೋಜನೆಗೆ ಕೈ ಹಾಕಿದ್ದು ಈ ಎಲ್ಲಾ ಯೋಜನೆಗಳು ರೈತರಿಗೆ ಸಮರ್ಪಣೆಯಾಗಲಿವೆ ಎಂದರು.
ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಮಾತನಾಡಿ, ನಿಂತು ಹೋಗಿರುವ ರೈಲು ಓಡಾಟ ಹಾಗೂ ಅನೇಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಈ ಜಿಲ್ಲೆಯ ಪ್ರತಿತಿನಿಧಿಯಾಗಿ ನನ್ನನ್ನು ಆಯ್ಕೆಮಾಡಿ ಕಳಿಸಿ ನಿರಂತರ ನಿಮ್ಮ ಸೇವೆ ಮಾಡುವ ಅವಕಾಶ ಕಲ್ಪಿಸಿಕೊಡಿ ಎಂದು ಮತಯಾಚಿಸಿದರು.
ಇದಕ್ಕೂ ಮುನ್ನ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ್ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗಾಗಿ 2ಸಾವಿರ ಕೋಟಿ ರೂ.ಗಳ ಅನುದಾನ ತರುವಲ್ಲಿ ಶಾಸಕರು ಯಶಸ್ವಿಯಾಗಿದ್ದಾರೆ. ಮುಂದೆ ಎಂ.ಪಿ.ಅನುದಾನ ತಲುವಲ್ಲಿ ಉಗ್ರಪ್ಪ ಮೊದಲಿಗರಾಗುತ್ತಾರೆ. ಆದ್ದರಿಂದ ಅವರನ್ನು ಅತಿ ಹೆಚ್ಚು ಮತಗಳನ್ನು ನೀಡುವ ಮೂಲಕ ಗೆಲ್ಲಿಸಿಕಳಿಸಬೇಕೆಂದು ವಿನಂತಿಸಿಕೊಂಡರು.
ನಂತರ ಉಪನಾಯಕನಹಳ್ಳಿ, ಪಿಂಜಾರ್ ಹೆಗ್ಡಾಳ್, ಮಗಿಮಾವಿನಹಳ್ಳಿ, ಮಾದೂರು, ವಲ್ಲಾಭಾಪುರ ಸೇರಿದಂತೆ ಅನೇಕ ಗ್ರಾಮಗಳನ್ನು ಸುತ್ತಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ, ಜಿ.ಪಂ.ಮಾಜಿ ಸದಸ್ಯರಾದ ಭೀಮಣ್ಣ, ಅಕ್ಕಿತೋಟೇಶ್, ರೋಗಾಣು ಹುಲುಗಪ್ಪ, ಮುಖಂಡರಾದ ಹೆಗ್ಡಾಳ್ ರಾಮಣ್ಣ, ಜಿ.ತಿಮ್ಮಣ್ಣ, ಜೆಡಿಎಸ್ ಅಧ್ಯಕ್ಷ ಬನ್ನಿಗೋಳ ವೆಂಕಣ್ಣ, ಮೈಲಾರಪ್ಪ, ಡಿಶ್ ಮಂಜುನಾಥ, ಹುಡೇದ್ ಗುರುಬಸವರಾಜ್, ದಾದಾಪೀರ್, ನೂರ್‍ಭಾಷ, ತತ್ತಿ ಖಾಸಿಂ, ಅಜೀಜುಲ್ಲಾ, ಜಂದಿಸಾಬ್, ಅಂಬಾಡಿ ನಾಗರಾಜ್, ಹನಸಿ ದೇವರಾಜ್ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
