ಜಗಳೂರು:
ಕರ್ನಾಟಕ ರಾಜ್ಯ ಗ್ರಾಮಲೆಕ್ಕಾಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷರಾಗಿ ಯು.ಎಂ. ವಿಜಯ್ ಕುಮಾರ್ ಆವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಸಂಘಟನಾ ಕಾರ್ಯ ದರ್ಶಿ ದುರುಗೇಶ್ ಹೇಳಿದರು. ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಗುರುವಾರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯ ನಂತರ ಅವರು ಮಾತನಾಡಿದರು.
ಈ ಹಿಂದಿನ ತಾಲೂಕು ಅಧ್ಯಕ್ಷರಾಗಿದ್ದ ವಿನಾಯಕ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು ತೆರವಾದ ಸ್ಥಾನಕ್ಕೆ ಸಂಘದ ಪದಾಧಿಕಾರಿಗಳೆಲ್ಲರು ಸಭೆ ಸೇರಿ ನೂತನ ಪದಾಧಿಕಾರಿಗಳನ್ನು ಆವಿರೋದವಾಗಿ ಆಯ್ಕೆ ಮಾಡಿಕೊಳ್ಳಲಾಯಿತು ಎಂದರು
ಗೌರವ ಅಧ್ಯಕ್ಷರಾಗಿ ವಿನಾಯಕ್, ಉಪಾಧ್ಯಕ್ಷರಾಗಿ ಅಮರೇಶ್, ಪ್ರಧಾನ ಕಾರ್ಯದರ್ಶಿಯಾಗಿ ಶಿವರಾಜ್, ಖಜಾಂಚಿಯಾಗಿ ಕೆಂಚನಗೌಡ, ಸಹಕಾರ್ಯದರ್ಶಿಯಾಗಿ ಎರಿಸ್ವಾಮಿ, ಸಂಘಟನ ಕಾರ್ಯದರ್ಶಿಯಾಗಿ ಆರ್.ಪಿ. ನಾಗರಾಜ್, ಸಾಂಸ್ಕøತಿಕ ಕಾರ್ಯದರ್ಶಿಯಾಗಿ ಅರಣಕುಮಾರ್, ಕ್ರೀಡಾ ಕಾರ್ಯದರ್ಶಿಯಾಗಿ ಮಲ್ಲಿಕಾರ್ಜುನ , ಜಿಲ್ಲಾ ಪರಿಷತ್ ಸದಸ್ಯರಾಗಿ ಮಾರುತಿ, ಕರಿಯಪ್ಪ, ನಿದೇಶಕರಾಗಿ ನೇತ್ರಾವತಿ, ಲಕ್ಷ್ಮೀದೇವಿ, ಕೋಟೆಪ್ಪ, ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
