ಅಪರಿಚಿತ ಮಗು ಪತ್ತೆ

ಶಿರಾ:

       ತಾಲ್ಲೂಕಿನ ಕಳ್ಳಂಬೆಳ್ಳ ಹೋಬಳಿಯ ಕಡವಿಗೆರೆ ಗ್ರಾಮದಲ್ಲಿ ಅಪರಿಚಿತ ಒಂದು ತಿಂಗಳ ಮಗುವೊಂದು ಪತ್ತೆಯಾಗಿದ್ದು ಸದರಿ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಪಸ್ಪತ್ರೆಗೆ ದಾಖಲಿಸಿರುವ ಘಟನೆ ಬುಧವಾರ ನಡೆದಿದೆ.

       ಬುಧವಾರ ಬೆಳಿಗ್ಗೆ ಕಡವಿಗೆರೆ ಗ್ರಾಮದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಸುಮರು 1 ತಿಂಗಳ ಗಂಡು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಕುಳಿತಿದ್ದು ಗ್ರಾಮಸ್ಥರಿಗೆ ಸದರಿ ವ್ಯಕ್ತಿಗಳ ಬಗ್ಗೆ ಸಂಶಯ ಬಂದಿದೆ. ಕೂಡಲೇ ಕಳ್ಳಂಬೆಳ್ಳ ಪೋಲಿಸರಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸುದ್ದಿ ಮುಟ್ಟಿಸಲಾಗಿದೆ.

       ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸದರಿ ವ್ಯಕ್ತಿಗಳನ್ನು ತನಿಖೆ ಮಾಡಲಾಗಿ ಸದರಿ ಮಗುವನ್ನು ಯಾರೋ ಅಪರಿಚಿತರು ಸಾಕಿಕೊಳ್ಳಲಾಗದೆ ಅವರಿಗೆ ನೀಡಿರುವ ಪ್ರಕರಣ ಬೆಳಕಿಗೆ ಬಂದಾಗ ಕೂಡಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರಕ್ಷಕ ಇಲಾಖೆಯ ಅಧಿಕಾರಿಗಳು ಮಗುವನ್ನು ತಮ್ಮ ವಶಕ್ಕೆ ಪಡೆದರು ಎನ್ನಲಾಗಿದೆ.

        ಸದರಿ ಗಂಡು ಮಗುವಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿ ಬಸವರಾಜು, ಪಿ.ಎಸ್.ಐ. ಮುತ್ತುರಾಜು, ಸಾಂಸ್ವತನ ಕೇಂದ್ರದ ಸತ್ಯನಾರಾಯಣ್ ಹಾಗೂ ಪುಟ್ಟರಾಜು ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಮಗವಿನ ಆರೋಗ್ಯ ಪರೀಕ್ಷೆಯ ನಂತರ ಪೋಕರ ಪತ್ತೆಗಾಗಿ ಪ್ರಕರಣ ದಾಖಲಿಸಿಕೊಂಡು ನಂತರ ಶಿಶು ಮಂದಿರಕ್ಕೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಸಿ.ಡಿ.ಪಿ.ಓ. ಬಸವರಾಜು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link