ಕಾರಿನ ಚಕ್ರ ಸ್ಫೋಟಗೊಂಡು ಭೀಕರ ಅಪಘಾತ: 8 ಸಾವು

ಸಹರನ್ ಪುರ

      ಕಾರೊಂದರ ಚಕ್ರ ಸ್ಫೋಟಗೊಂಡು ಟಾಟಾ ವಾಹನಕ್ಕೆ ಗುದ್ದಿದ ಪರಿಣಾಮ ಕಾರು ಮಗುಚಿ ಬಿದ್ದ ಪರಿಣಾಮ ಎಂಟು ಜನ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಸಹರಾನ್‍ಪುರ ಜಿಲ್ಲೆಯ ದೇವಬಂದ್ ಎಂಬಲ್ಲಿ ನಡೆದಿದೆ.

      ದೇವಬಂದ್ ಮೇಲ್ಸೇತುವೆಯ ಮೂಲಕ ಟಾಟಾ ವಾಹನವು ಸಹಾರನ್ ಪುರ-ಮುಜಾಫರ್ ನಗರದ ಮಾರ್ಗದಲ್ಲಿ ತೆರಳುತ್ತಿದ್ದಾಗ ವೇಗವಾಗಿ ಸಾಗುತ್ತಿದ್ದ ಕಾರೊಂದರ ಚಕ್ರ ಸ್ಫೋಟಗೊಂಡು ಹಿಂಬದಿಯಿಂದ ಟಾಟಾ ವಾಹನಕ್ಕೆ ಗುದ್ದಿದೆ. ಇದರಿಂದ ವಾಹನದ ನಿಯಂತ್ರಣ ಕಳೆದುಕೊಂಡ ಚಾಲಕ ರಸ್ತೆ ಬದಿಯ ರೋಲಿಂಗ್ ಗೆ ಗುದ್ದಿ ಪಲ್ಟಿ ಹೊಡೆದಿದ್ದರಿಂದ 8 ಮಂದಿ ಮೃತಪಟ್ಟಿದ್ದು, 13-14 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಮೃತರೆಲ್ಲರೂ ಮುಜಾಫರ್ ನಗರದವರಾಗಿದ್ದು, ಐವರು ಮಹಿಳೆಯರು ಸಮೇತ 8 ಜನ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link