ಗುರುದಾಸ್ಪುರ:
1984ರ ಸಿಖ್ ಮಾರಣಹೊಮದಲ್ಲಿ ಭಾಗಿಯಾಗಿದ್ದವರಿಗೆ ಸಿಎಂ ಪಟ್ಟ ಕಟ್ಟಿರುವಂತಹ ಕಾಂಗ್ರೆಸ್ ಸಿಖ್ ಸಮುದಾಯದ ಬೆನ್ನಿಗೆ ಚೂರಿಯಿಂದ ಇರಿದಿದೆ ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು. ವಂದೇ ಮಾತರಂ ಹಾಡಲು, ಭಾರತ ಮಾತೆಗೆ ಜೈ ಎಂದು ಜೈಕಾರ ಹಾಕಲು ಆಕ್ಷೇಪ ವ್ಯಕ್ತಪಡಿಸುವ ಕಾಂಗ್ರೆಸ್, 1984ರ ಸಿಖ್ ಗಲಭೆಯಲ್ಲಿ ಭಾಗಿಯಾದವರಿಗೆ ಉನ್ನತ ಸ್ಥಾನ ನೀಡಿದೆ ಎಂದು ಮಧ್ಯಪ್ರದೇಶ ಸಿಎಂ ಕಮಲ್ನಾಥ್ ವಿರುದ್ಧ ಹರಿಹಾಯ್ದಿದ್ದಾರೆ ಮತ್ತು ತಮ್ಮ ಸರ್ಕಾರ ಸಿಖ್ ಸಮುದಾಯಕ್ಕೆ ಮಾಡಿದ ಸೇವೆಯನ್ನು ಇದೇ ಸಂದರ್ಭದಲ್ಲಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
