ಅಮರಾವತಿ
ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಮಹಾಘಟಬಂಧನ್ ಪರವಾಗಿ ಬಂದರೆ ನಂತರದಲ್ಲಿ ಪ್ರಧಾನಿ ಹುದ್ದೆ ರೇಸ್ ನಿಂದ ನಾನು ದೂರ ಇರುತ್ತೇನೆ ಏಕೆಂದರೆ “ನಾನು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ” ಎಂದು ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ಎನ್ ಚಂದ್ರಬಾಬು ನಾಯ್ಡು ಅವರೂ ಇದೇ ಮಾತನ್ನು ಹೇಳಿದ್ದಾರೆ. ಹೀಗೆ ತ್ಯಾಗಕ್ಕೆ ಸಿದ್ಧರಾಗುವ ಮೂಲಕ ಸಾಕಷ್ಟು ಅನುಮಾನಗಳಿಗೆ ಅವರೇ ಎಡೆ ಮಾಡಿಕೊಟ್ಟಿದ್ದಾರೆ. ಹಾಗೆ ನೋಡಿದರೆ ಮಹಾಘಟಬಂಧನ ಸ್ಥಾಪನೆಯಾಗುವಂತೆ ಮಾಡುವಲ್ಲಿ ಅತೀ ಹೆಚ್ಚು ಮುಂಚೂಣಿಯಲ್ಲಿ ಚುರುಕುತನ ತೋರಿದ್ದು ಚಂದ್ರಬಾಬು ನಾಯ್ಡು ಅವರೆ.
ಮಹಾಘಟಬಂಧನದ ಶಕ್ತಿ ಹೆಚ್ಚಿಸಲು ಪಕ್ಷಗಳನ್ನು ಒಗ್ಗೂಡಿಸುವಾಗ ಮನಸ್ಸಿನ ಮೂಲೆಯಲ್ಲೆಲ್ಲೋ ತಾವೂ ಪ್ರಧಾನಿಯಾಗಿಬಿಡುವ ಕನಸು ಚಿಗುರೊಡೆಯದೆ ಇರಲಿಲ್ಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅವರು ‘ತಾವು ಪ್ರಧಾನಿ ಹುದ್ದೆಯ ಆಕಾಂಕ್ಷಿಯಲ್ಲ ಎಂದಿದ್ದಾರೆ. ಹಾಗೆಯೇ ಪ್ರಧಾನಿ ಯಾರಾಗಬೇಕು ಎಂಬ ಬಗ್ಗೆಯೂ ಅವರು ಯಾವುದೇ ಅಭಿಪ್ರಾಯ ತಿಳಿಸಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








