ಬೆಂಗಳೂರು:
ಜೈಲಿನೊಳಗೇ ಕುಳಿತುಕೊಂಡು ತಮ್ಮ ಪ್ರೇಯಸಿಯ ಫೋಟೋ ಹಾಕಿ ಕೊಲೆ ಆರೋಪಿಯೊಬ್ಬ ಟಿಕ್ ಟಾಕ್ ಮಾಡಿದ ಘಟನೆ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.
ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಫಯಾಜ್ ಆ್ಯಂಡ್ ಟೀಂ ಶಾಹಿದ್ ಎಂಬಾತ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ತಪ್ಪು ಮಾಡಿ, ಪೊಲೀಸರಿಂದ ಗುಂಡೇಟು ತಿಂದು, ಜೈಲು ಸೇರಿದ್ದರೂ ತಮ್ಮ ಹಳೇ ವರಸೆಯನ್ನು ಬದಲಾಯಿಸಿಕೊಳ್ಳದ ಬೆಂಗಳೂರಿನ ರೌಡಿಗಳು ತಮ್ಮ ಸೆಲ್‍ನಲ್ಲೇ ಕುಳಿತು ಫಯಾಜ್ ಆ್ಯಂಡ್ ಟೀಂ ಶಿವರಾಜ್ ಕುಮಾರ್ ಸಿನಿಮಾವೊಂದರ ಡೈಲಾಗ್‍ಗೆ ಸೆಲ್ ನಲ್ಲೇ ಕೂತು ಸಿಗರೇಟ್ ಹಿಡಿದುಕೊಂಡು ಗ್ರೂಪ್ ಫೋಟೋಗೆ ಪೋಸು ಕೊಟ್ಟಿದ್ದಾರೆ. ಟಿಕ್ ಟಾಕ್ ಮಾಡಿ ವಿಡಿಯೋ ಮಾಡಿ ಅದನ್ನು ಅಪ್ಲೋಡ್ ಮಾಡಿದ್ದಾರೆ.
ಟಿಕ್ಟಾಕ್ನಲ್ಲಿ ಚಾಕು, ಮಾರಕಾಸ್ತ್ರ ತೋರಿಸಿ ದರ್ಪ ತೋರಿಸಿರುವ ಈ ಇಬ್ಬರು ಜೈಲಿನಲ್ಲೂ ರೌಡಿಸಂ ಪ್ರದರ್ಶಿಸಿದ್ದಾರೆ. ಅಪರಾಧ ಚಟುವಟಿಕೆ ಮಾಡಿ ಜೈಲಿಗೆ ಹೋಗುವ ಅಪರಾಧಿಗಳಿಗೆ ಈ ರೀತಿಯ ಚಾಕು, ಸಿಗರೇಟ್ ಸೇರಿದಂತೆ ಎಲ್ಲಾ ರೀತಿಯ ವಸ್ತುಗಳು ಆರೋಪಿಗಳ ಕೈಗೆ ಹೇಗೆ ಸಿಗುತ್ತವೆ. ಸಂಬಂಧಪಟ್ಟ ಜೈಲಾಧಿಕಾರಿಗಳು ಏನು ಮಾಡುತ್ತಿದ್ದಾರೆ ಎನ್ನುವ ಅನುಮಾನ ಎಲ್ಲರಿಗೂ ಶುರುವಾಗಿದೆ.