ಬೆಂಗಳೂರು:
ಅತೃಪ್ತ ಶಾಸಕರ ಸಂಬಂಧ ವಿಚಾರಣೆ ಮಾಡಿ ನಿಮ್ಮ ನಿರ್ಧಾರ ತಿಳಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಅದರ ಪ್ರಕಾರ ಸಂಜೆಯೊಳಗೆ ನನ್ನ ನಿರ್ಧಾರವನ್ನು ಕೋರ್ಟ್ಗೆ ತಿಳಿಸುತ್ತೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಸೂಚನೆ ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಹತ್ತು ಶಾಸಕರು ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದರೆ. ಆ ಸಂಬಂಧ ವಿಚಾರಣೆ ಮಾಡುತ್ತೇನೆ. ಸಂಜೆಯೊಳಗಡೆ ಒಂದು ತೀರ್ಮಾನ ಮಾಡಿ, ಕೋರ್ಟ್ ಗೆ ತಿಳಿಸಲಾಗುವುದು. ಇನ್ನು ಸುಪ್ರೀಂ ಕೋರ್ಟ್ ಗೆ ನನ್ನ ಪರವಾಗಿ ವಕೀಲರು ಹಾಜರಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ನನ್ನ ವಕೀಲರು ಏನು ಹೇಳಬೇಕು ಅದನ್ನು ಕೋರ್ಟ್ ನಲ್ಲಿ ಹೇಳುತ್ತಾರೆ. ಅದರ ಮೇಲೆ ಏನಾಗುತ್ತದೆ ಆಮೇಲೆ ನೋಡೋಣ. ಹತ್ತು ಜನ ಶಾಸಕರು ಇಲ್ಲಿಗೆ ಬರಲಿ ಮೊದಲು. ಪೋಲಿಸರು ಭದ್ರತೆ ಕೊಡುತ್ತಾರೆ. ಗೌರವಯುತವಾಗಿ ಸ್ವೀಕಾರ ಮಾಡುತ್ತೇವೆ. ಅವರು ಏನು ಹೇಳುತ್ತಾರೆ ಕೇಳುತ್ತೇವೆ. ಕಾನೂನು ಪ್ರಕಾರ ಕ್ರಮ ತಗೊಳುತ್ತೇವೆ ಎಂದು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ