ಮೈಸೂರು ದಸರಾ : ಜಂಬೂ ಸವಾರಿ ಗಜ ಪಡೆ ಸ್ವಾಗತ ಸಂಭ್ರಮ..!

ಮೈಸೂರು:

         ನಾಡಹಬ್ಬ ಮೈಸೂರು ದಸರಾ ಗಜಪಡೆ ಇಂದು ಔಪಚಾರಿಕವಾಗಿ ಚಾಲನೆ ಪಡೆದು ಮೈಸೂರು ಪ್ರವೇಶಿಸಲಿವೆ.

         ಗುರುವಾರ ಬೆಳಗ್ಗೆ ವೀರನಹೊಸಳ್ಳಿಯಲ್ಲಿ ಪೂಜೆ ನೆರವೇರಿಸಿ ಸಾಂಪ್ರದಾಯಿಕವಾಗಿ ಗಜಪಡೆ ಕರೆತರುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು,ಈ ಗಜಪಡೆ ಮೈಸೂರಿನ ಅರಣ್ಯ ಭವನಕ್ಕೆ ವೇಳೆ ಬಂದಿಳಿಯಲಿದ್ದು, ಕ್ಯಾಪ್ಟನ್ ಅಭಿಮನ್ಯು ಟೀಂ ಸ್ವಾಗತಿಸಲು ಅರಮನೆ ನಗರಿ ಸಿದ್ಧವಾಗಿದೆ.

     ಗಜಪಡೆ ಸ್ವಾಗತಕ್ಕೆ ಅರಣ್ಯ ಭವನದಲ್ಲಿ ಸಕಲ ಸಿದ್ಧತೆ ಮಾಡಲಾಗುತ್ತಿದ್ದು, ಆನೆಗಳು ಅರಣ್ಯ ಭವನದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ. ವೀರನ ಹೊಸಹಳ್ಳಿಯಲ್ಲಿ ಗಜಪಡೆಗೆ ಬೆಳಗ್ಗೆ 10 ರಿಂದ 11ರ ಶುಭ ಲಗ್ನದಲ್ಲಿ ಪೂಜೆ ನೆರವೇರಿತು. ಈ ಪೂಜೆ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳಷ್ಟೇ ಭಾಗಿಯಾಗಿದ್ದರು.

      ಸಾಂಸ್ಕೃತಿಕ ನಗರಿಯಲ್ಲಿ ದಸರಾ ಮಹೋತ್ಸವ ಕಳೆಗಟ್ಟಲು ಕೆಲ ದಿನಗಳಷ್ಟೇ ಬಾಕಿ ಇದ್ದು ಕೊರೊನಾ ಆತಂಕದ ನಡುವೆಯೂ ನಾಡಹಬ್ಬಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap