ಭೀಕರ ಅಪಘಾತ : ಲಾರಿ ಹರಿದು 20ಕ್ಕೂ ಹೆಚ್ಚು ಕುರಿ, ಮಹಿಳೆ ಸಾವು!!

ಹಳಿಹಾಳ :

      ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು 20ಕ್ಕೂ ಹೆಚ್ಚು ಕುರಿಗಳು ಹಾಗೂ ಕುರಿಗಾಹಿ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕಲಘಟಗಿ-ಹಳಿಯಾಳ ರಸ್ತೆಯಲ್ಲಿರುವ ಜನಗಾ ಕ್ರಾಸ್​ನಲ್ಲಿ ನಡೆದಿದೆ.

      ಮೃತ ಮಹಿಳೆಯನ್ನು ಶೋಭಾ ಯಲ್ಲಪ್ಪ ಕರಿಗಾರ‌ (20) ಎಂದು ಗುರುತಿಸಲಾಗಿದೆ. ರಸ್ತೆ ಬದಿಯಲ್ಲಿ ಕುರಿ ನಡೆಸಿಕೊಂಡು ಹೋಗುತ್ತಿದ್ದಾಗ ಕಲಘಟಗಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಲಾರಿಯೊಂದು ರಸ್ತೆ ತಿರುವಿನಲ್ಲಿ ಕುರಿ ಮತ್ತು ಕುರಿಗಾಹಿ ಮಹಿಳೆ ಮೇಲೆ ಹರಿದು ಈ ದುರ್ಘಟನೆ ನಡೆದಿದೆ.

      ಘಟನೆಯ ಬಳಿಕ ಲಾರಿ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap