ತಿಪಟೂರು :
ತಾಲ್ಲೂಕಿನ ಕೈದಾಳ ಗೇಟ್‌ಬಳಿ ಭಾನುವಾರ ಸಂಜೆ ಜರುಗಿದ ಅಪಘಾತದಲ್ಲಿ ದ್ವಿಚಕ್ರವಾಹನ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜರುಗಿದೆ.ತಿಪಟೂರು ಕಡೆಯಿಂದ ನೊಣವಿನಕೆೆರೆ ಕಡೆಗೆ ಹೋಗುತ್ತಿದ್ದ ಕಾರು ಕೆ.ಎ 51 ಎನ್ 7212ಗೆ ನೊಣವಿನಕೆರೆ ಯಿಂದ ತಿಪಟೂರು ಕಡೆಗ ಬರುತ್ತಿದ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸಂಭವಿಸಿ ಬೈಕ್ ಸವಾರ ಕೃಷ್ಣ (30) ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೊಬ್ಬ ಸವಾರ ದೊಡ್ಡಯ್ಯನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಕೈದಾಳ ಗೇಟ್‌ನ ನಿವಾಸಿಗಳೆಂದು ತಿಳಿದುಬಂದಿದ್ದು ಕಾರ್‌ನಲ್ಲಿದ್ದವರು ಪರಾರಿಯಾಗಿದ್ದು ಪ್ರಕರಣ ನೊಣವಿನಕೆರೆ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








