ಹುಳಿಯಾರು:
ಹುಳಿಯಾರು ಮತ್ತು ಹಂದನಕೆರೆ ಹೋಬಳಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತಾದರೂ ಮಧ್ಯಾಹ್ನದವರೆಗೂ ಮಳೆಯಾಗಿರಲಿಲ್ಲ, ಸಂಜೆ ಮೇಲೆ ಹದ ಮಳೆಯಾಗಿ ಪ್ರಕೃತಿ ಸಂಭ್ರಮಕ್ಕೆ ಕಾರಣವಾಯಿತು.ತಮ್ಮಡಿಹಳ್ಳಿ, ಕೆಂಕೆರೆ, ಕುರಿಹಟ್ಟಿ, ಕೆ.ಸಿ.ಪಾಳ್ಯ, ಮತಿಘಟ್ಟ, ದೊಡ್ಡಎಣ್ಣೇಗೆರೆ ಸುತ್ತ ಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಬಿರುಸಿನಿಂದ ಸುರಿದು, ನಂತರ ರಾತ್ರಿವರೆಗೂ ಜಿಟಿ ಜಿಟಿಯಾಗಿ ಹನಿಯಿತು.
ಮಳೆಯ ನೀರು ತಗ್ಗು ಪ್ರದೇಶಗಳಿಗೆ ಹರಿದು ನಿಂತು ಪ್ರಾಣಿ, ಪಕ್ಷಿಗಳಿಗೆ ಸಂಭ್ರಮ ಸೃಷ್ಠಿಸಿತ್ತು. ಕೆಲ ಕಡೆ ತೆಂಗಿನ ತೋಟಗಳಲ್ಲಿ ನೀರು ಶೇಖರಣೆಯಾಗಿ ತೆಂಗು ಬೆಳೆಗಾರರಿಗೂ, ರಾಗಿ ಬಿತ್ತಿದ್ದ ರೈತರಿಗಂತೂ ಈ ಮಳೆ ಖುಷಿ ತಂದಿತ್ತು. ಮಳೆ ಮಾಪನದ ಪ್ರಕಾರ ಹುಳಿಯಾರಿನಲ್ಲಿ 15.2 ಮಿ.ಮೀ, ಮತಿಘಟ್ಟದಲ್ಲಿ 15.1 ಮಿ.ಮೀ, ದೊಡ್ಡಎಣ್ಣೇಗೆರೆಯಲ್ಲಿ 6.2 ಮಿ.ಮೀ ಮಳೆಯಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ