ಕೆರೆಗಳ ಹಿಂಬದಿ ಜಂಗಲ್ ತೆರವು ಯಾವಾಗ ?

ಮಿಡಿಗೇಶಿ:


ಡಿ. ಮಧುಗಿರಿ ತಾಲ್ಲೂಕಿನ ಐವತ್ನಾಲ್ಕು ಕೆರೆಗಳಿದ್ದು ಸುಮಾರು ಕೆರೆಗಳು ತುಂಬಿ ಕೋಡಿ ಹೋಗಿರುವ ಬಗ್ಗೆ ವರದಿಯಾಗಿರುತ್ತವೆ. ಇನ್ನುಳಿದ ಕೆರೆಗಳು ಕೆಲವು ಅರ್ಧ, ಮುಕ್ಕಾಲು ಭಾಗ ನೀರು ಸಂಗ್ರಹವಾಗಿರುತ್ತವೆ. ಈ ಸಮಯದಲ್ಲಿ ಘನ ಸರ್ಕಾರವು ಕೆರೆಗಳ ಅಂಗಳದಲ್ಲಿ ಸಂಗ್ರಹವಾಗಿರುವಷ್ಠು ಭೂಮಿಯು ಕೆರೆಗೆ ಸಂಭಂಧಿಸಿದ್ದು ಎಂಬುದು ಖಚಿತಪಡಿಸಿಕೊಟ್ಟಂತಾಗುತ್ತದೆ ಇದೊಂದು ಸ್ಪಷ್ಠ ಸಮೀಕ್ಷೆ ಎದು ಸಾರ್ವಜನಿಕವಾಗಿ ತಿಳಿದುಕೊಳ್ಳಬಹುದಾಗಿರುತ್ತದೆ. ಸದರಿ ಕೆರೆಗಳ ಅಂಗಳದ ಭೂಮಿ ಎಷ್ಠು ಒತ್ತುವರಿಯಾಗಿದೆ. ಎಂಬುದು ನಿಖರವಾಗಿದೆ.

ಈ ಬಗ್ಗೆ ಜಲಾನಯನ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ. ಆಯಾ ಕೆರೆ ಅಭಿವೃದ್ಧಿ ಸಂಘಗಳ ಸಮಿತಿಯವರ ಜವಾಬ್ದಾರಿಯೂ ಹೆಚ್ಚಾಗಲಿದೆ. ಕೆರೆ ಅಭಿವೃದ್ಧಿ ಸಂಘಗಳ ಸಮಿತಿಗಳಿಗೆ ಕೆರೆಗ ನಿರ್ವಹಣೆಗೆ ಸರ್ಕಾರ ಪ್ರತಿ ವರ್ಷ ಇಂತಿಷ್ಠು ಹಣ ನೀಡುತ್ತಾ ಬರುತ್ತಿದೆ ಸದರಿ ಹಣ ಸದ್‍ವಿನಿಯೋಗವಾದಲ್ಲಿ ಕೆರೆಯ ನಿರ್ವಹಣೆ ಉತ್ತಮವಾಗಿರುತ್ತದೆ. ಇಲ್ಲದೆ ಹೋಗಿದ್ದಲ್ಲಿ ಕೆರೆಯ ನಿರ್ವಹಣಾ ಕಾರ್ಯಗಳು ಅಭಿವೃದ್ಧಿ ಅಷ್ಟಕ್ಕಷ್ಠೇ ಎಂಬುದರಲ್ಲಿ ಅನುಮಾನವಿಲ್ಲ. ಸದರಿ ಕೆರೆಗಳು ಈ ವರ್ಷದಲ್ಲಿ ಬಂಗಾಳಕೊಲ್ಲಿ, ಅರಬ್ಬೀ ಸಮುದ್ರಗಳ ವಾಯುಭಾರ ಕುಸಿತದಿಂದಾಗಿ ಮಳೆಯು ತುಂತರಿನಿಂದ ಪ್ರಾರಂಭವಾಗಿ ಬಿರುಸಾದ ಮಳೆಯು ಸುರಿದಿದ್ದರಿಂದ ತುಂಬಿರುತ್ತವೆ.

ಆದರೆ ಕೆರೆ ಏರಿಯ ಮೇಲುಗಡೆ, ಹಿಂಬದಿಗಳಲ್ಲಿ ವಿಪರೀತ ಗಿಡ ಗಂಟೆ, ಸೀಮೆ ಜಾಲಿಗಳು, ಊಡಿಗೆ ಗಿಡಗಳು , ಮರಾಳಿ ಗಿಡ, ಬೇಲಿಗಿಡಗಳು ಬೃಹದಾಕಾರವಾಗಿ ಬೆಳೆದು ನಿಂತಿದ್ದು (ಜಂಗಲ್ ಅತಿ ಹೆಚ್ಚಾಗಿದೆ) ಸದರಿ ಮರಗಿಡಗಳ ಬೇರುಗಳು ಕೆರೆಯ ಏರಿಯ ಒಳಗಡೆ ಹೋಗುತ್ತಿದ್ದು ಕೆರೆ ಏರಿಗಳು ಬಿರುಕು ಹೊಡೆಯಲು ಪ್ರಮುಖ ಕಾರಣಗಳಾಗಿರುತ್ತವೆಯಾದ್ದರಿಂದ ಸರ್ಕಾರ, ಜಲಾನಯನ ಇಲಾಖೆ, ಕೆರೆ ಅಭಿವೃದ್ಧಿ ಸಂಘಗಳ ಸಮಿತಿಯವರು ತ್ವರಿತವಾಗಿ ಕೆರೆಯ ಹಿಂಭಾಗ ಬೆಳೆದಿರುವ ಜಂಗಲ್‍ನ್ನು ತೆರವುಗೊಳಿಸಿದಲ್ಲಿ ಕೆರೆಗಳ ಉಳಿವು, ಒಳಿತಿಗೆ ತುಂಬಾ ಸಹಕಾರಿಯಾಗಲಿದೆ ಎಂಬುದು ರೈತಾಪಿ ವರ್ಗ ಹಾಗೂ ಪ್ರಜ್ಞಾವಂತ ನಾಗರೀಕರ ಒಟ್ಟಾರೆ ಅಭಿಪ್ರಾಯವಾಗಿರುತ್ತದೆ.

ಉದಾ : ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ದೊಡ್ಡಕೆರೆ, ಬೇಡತ್ತೂರಿನ ದೊಡ್ಡಕರೆ, ಹೊಸಕೆರೆಯ ದೊಡ್ಡಕೆರೆ, ಹೊಸಕೆರೆಯ ಚಿಕ್ಕಕೆರೆಗಳ                      ಮೇಲಿನ ಜಂಗಲ್ ಬಗ್ಗೆ ಸಂಭಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲಿಸಿದಲ್ಲಿ ಅನುಕೂಲಕರವಾಗಲಿದೆ (ಬೇಡತ್ತೂರು ಕೆರೆ, ಸ.ನಂ132 ಆಗಿದ್ದು 153.24 ಎಕರೆ ಆಗಿದ್ದು ವಿಸ್ಥೀರ್ಣ ಭೂಮಿಯಿರುತ್ತದೆ ಈ ಬಾರಿಯ ಮಳೆಯಿಂದ 25 ಎಕರೆ ಬೆಳೆ ನಷ್ಠ ಸಂಭಂವಿಸಿರುವ ಬಗ್ಗೆ ರೆವಿನ್ಯೂ ದಾಖಲಾಯಲ್ಲಿದೆ, ಬೇಡತ್ತೂರು, ಶ್ರವಣಗುಡಿ, ಎಸ್.ಅಪ್ಪೇನಹಳ್ಳಿ, ಎಮ್ಮೇತಿಮ್ಮನಹಳ್ಳಿ ಗ್ರಾಮದ ರೈತರ ಬೆಳೆಗಳಿಗೆ ನೀರಿನ ಅನುಕೂಲಕರ ಎಂದರೆ ತೆರೆದ ಬಾವಿ, ಕೊಳವೆಬಾವಿಗಳಿಗೆ ನೀರಿನ ಸೀಪೇಜ್ ಆಗಲಿದೆ ಎಂದು ತಿಳಿಯಬಹುದು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link