ಮಸೂದ್ ಮೌಲಾನ ಅಲ್ಲ ಸೈತಾನ್ : ಓವೈಸಿ

ಮುಂಬೈ:
 
        ಪುಲ್ವಾಮಾ ದಾಳಿಯನ್ನು ಎಐಎಂಐಎಂ ಮುಖಂಡ ಅಸಾದುದ್ದೀನ್ ಓವೈಸಿ ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೆ ಉಗ್ರರ ಕೃತ್ಯದ ರೂವಾರಿ  ಜೈಷ್-ಇ-ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಝರ್ ವಿರುದ್ಧ ಕೆಂಡಾಮಂಡಲವಾದ ಘಟನೆ ವರದಿಯಾಗಿದೆ.
        ಮುಂಬೈನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಓವೈಸಿ ಯೋಧರು ಹುತಾತ್ಮರಾಗಿರುವುದು ಖಂಡನಾರ್ಹ ಮತ್ತು “ಮಸೂದ್ ಅಝರ್ ಮೌಲಾನಾ ಅಲ್ಲ, ಬದಲಿಗೆ ಸೈತಾನ” ಎಂದು ವಾಗ್ದಾಳಿ ನಡೆಸಿದ್ದಾರೆ.
     ಭಾರತದಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಬೇಕಾಗಿಲ್ಲ. ದೇಶದ ವಿಚಾರ ಬಂದರೆ ನಾವೆಲ್ಲ ಒಂದು ಎನ್ನುವುದನ್ನು ಪಾಕ್ ಎಂದಿಗೂ ಮರೆಯಬಾರದು. ಅಲ್ಲದೆ ಪಾಕಿಸ್ತಾನದ ಪಿತರಾದ ಮೊಹಮ್ಮದ್ ಅಲಿ ಜಿನ್ನಾರನ್ನೇ ಪಾಕ್ ಮುಖಂಡರು ಇಂದು ನಿರ್ಲಕ್ಷಿಸಿದ್ದಾರೆ” ಅವರು ಹೇಳಿದ್ದಾರೆ.
     “ಪುಲ್ವಾಮಾ ದಾಳಿಯ ಹಿಂದೆ ಪಾಕಿಸ್ತಾನ, ಅದರ ಸೇನೆ ಹಾಗೂ ಐಎಸ್‌ಐ ನೇರ ಕೈವಾಡವಿದೆ.” ಎಂದು ಆರೋಪಿಸಿದ ಓವೈಸಿ “ನೀವು ಜೈಷ್-ಇ-ಮೊಹಮ್ಮದ್ ಅಲ್ಲ, ಜೈಷ್-ಇ-ಸೈತಾನ್” ಎಂದು ಕಿಡಿಕಾರಿದ್ದಾರೆ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link