ಅಸ್ಪೃಶ್ಯತೆ ಆಚರಣೆ ನಾಚಿಕೆಗೇಡಿನ ಸಂಗತಿ : ಪೂವಿತಾ

ತಿಪಟೂರು:

     ಸ್ವಾತಂತ್ರ್ಯ ಬಂದು 60 ವರ್ಷಗಳು ಕಳೆದರು ಅಸ್ಪೃಶ್ಯತೆ ಆರಚಣೆ ಇನ್ನೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ತಿಪಟೂರು ಉಪವಿಭಾಗಾಧಿಕಾರಿ ಪೂವಿತ ವಿಷಾದ ವ್ಯಕ್ತಪಡಿಸಿದರು.

     ತಾಲ್ಲೂಕಿನ ಹೊನ್ನವಳ್ಳಿ ಪೋಲೀಸ್‍ಠಾಣಾ ವ್ಯಾಪ್ತಿಯಲ್ಲಿಬರುವ ಮಾರಗೊಂಡನಹಳ್ಳಿಯಲ್ಲಿ ಆಯೋಜಿಸಿದ್ದ ಅಸ್ಪೃಶ್ಯತಾ ನಿರ್ಮೂಲನ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸಂಧಾನ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ 60 ವರ್ಷಕಳೆದಿದ್ದು ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು ಈಗಲೂ ಅಸ್ಪೃಶ್ಯತೆ ಆಚರಣೆಯಲ್ಲಿಸುವುರು ನಮಗೆ ನಾಚಿಕೆಗೇಡಿನ ಸಂಗತಿ. ಸಂವಿಧಾನದಲ್ಲಿ ಉಲ್ಲೇಖಿಸಿರುವಂತೆ ಅಸೃಶ್ಯತೆಯ ನಿವಾರಣೆಗಾಗಿ ಹಲವಾರು ವಿಧಿಗಳಿದ್ದು ಸಮಾನತೆಯಹಕ್ಕನ್ನು ನೀಡಿದೆ.

      ನಾವು ಅಸ್ಪೃಶ್ಯತೆ ವಿರುದ್ದ ಕಾನೂನು ಕ್ರಮತೆಗೆದುಕೊಳ್ಳಬಹುದು ಆದರೆ ಮೊದಲಿಗೆ ಆರೀತಿಮಾಡುವುದು ಸರಿಯಲ್ಲ ಆದ್ದರಿಂದ ಈ ಸಂಧಾನಸಭೆಯನ್ನು ಹಮ್ಮಿಕೊಂಡಿದ್ದು ಇದು ಇದೇ ರೀತಿ ಮುಂದುವರೆದರೆ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಗುವುದು ನಾವು ಮತ್ತೆ ಈ ವಿಷಯವಾಗಿ ಈರೀತಿ ಸಭೆನಡೆಸುವುದು ಇಲ್ಲಿಗೆ ಕೊನೆಯಾಗಲಿ ಎಂದು ಗ್ರಾಮಸ್ಥರಿಗೆ ತಿಳಿಸಿದರು.

      ಕಾರ್ಯಕ್ರಮದಲ್ಲಿ ಮಾತನಾಡಿದ ತಾಪಂ ಪ್ರಭಾರ ಇ.ಓ ಸುನಿಲ್‍ಕುಮಾರ್ ಮಾತನಾಡಿ ನಮ್ಮ ದೇಶ ಅಭಿವೃದ್ಧಿಹೊಂದುತ್ತಿರುವ ದೇಶ ಈಗಲೂ ಅಸ್ಪೃಶ್ಯತೆ ಇರುವುದು ನಮಗೆ ದುಖಃತರುತ್ತದೆ. ಪಂಚಭೂತಗಳಾದ ಪೃಥ್ವಿ, ಅಗ್ನಿ, ಆಕಾಶ, ವಾಯು, ನೀರಿನ್ನು ಬಳಸು ಎಲ್ಲೂ ಅಸೃಶ್ಯತೆಯಿಲ್ಲ ಅವುಗಳು ಇವುರು ಮೇಲೆ ಕೀಳೆಂಬ ಬೇದಭಾವಮಾಡದೇ ಒಂದೇ ತನ್ನ ಗುಣವನ್ನು ನೀಡುತ್ತವೆ

      ಆದರೆ ನಮ್ಮಲ್ಲಿ ಕೆಲವರು ಕಾಲೋನಿಯಿಂದ ಬರುವ ನೀರನ್ನೇ ನಮಗೆ ಬೇಡ ಎನ್ನುವ ಮೌಡ್ಯಜನರಿಗೆ ಏನನ್ನಬೇಕು, ಎಲ್ಲರಲ್ಲೂ ಹರಿಯುವು ಒಂದೇ ರಕ್ತ ರೋಗಿ ಅಪಾಯದಲ್ಲಿದ್ದಾಗೆ ಜೀವರಕ್ಷಕವಾದ ರಕ್ತನೀಡಲು ಬರುವರು ಯಾರೆಂದು ನೋಡದ ಜನ ಬೇರೆ ವಿಷಯಗಳಿಗೆ ಏಕೆ ಈ ರೀತಿಮಾಡುತ್ತಾರೆ ಎಂದು ವಿಷಾದಪಡಿಸಿದ ಅವರು ಇದು ಇಲ್ಲಿಗೆ ಕೊನೆಯಾಗಬೇಕೆಂದು ಗ್ರಾಮಸ್ಥರಿಗೆ ಕರೆನೀಡಿದರು.

     ಆದರೆ ಗ್ರಾಮದದಲ್ಲಿ ಎಲ್ಲಾಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕೇವಲ ಒಂದು ಪಂಗಡದವರನ್ನೇ ಇಟ್ಟುಕೊಂಡು ಕಾರ್ಯಕ್ರಮವನ್ನು ಮಾಡಿರುವುದು ಎಷ್ಟುಸರಿ, ಸಭೆಯು ಯಶಸ್ವಿಯಾದಂತೆ ಕಂಡುಬಂದರು ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಕೊರತೆಯಾಗಿತ್ತು.

      ಕಾರ್ಯಕ್ರಮ ಪ್ರಾರಂಭಿಸಿ ಊರಿನಲ್ಲಿ ಉಪವಿಭಾಗಾಧಿಕಾರಿ, ತಾಲ್ಲೂಕು ದಂಡಾಧಿಕಾರಿಗಳು, ತಾ.ಪಂ. ಇ.ಓ ಮತ್ತು ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು, ಹೊನ್ನವಳ್ಳಿ ಪೋಲೀಸ್ ಠಾಣಾ ಸಿಬ್ಬಂದಿಗಳು ಮತ್ತು ಡಾ ಬಿ.ಆರ್ ಅಂಬೇಡ್ಕರ್ ಯುವಜನ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ(ರಿ), ತಿಪಟೂರು ಕಲಾತಂಡದವರೊಂದಿಗೆ ಸಮನ್ವಯಗೀತೆಹಾಡುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾತಾ ಮಾಡಿ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link