ಪೌರ ಕಾರ್ಮಿಕರಿಗೆ ಪುರಸಭಾ ನಿಧಿಯಿಂದ ಸಂಬಳ ನೀಡಿ ; ಶಾಸಕ ತಾಕೀತು!

ಚಿಕ್ಕನಾಯಕನಹಳ್ಳಿ :

     ಪುರಸಭೆಗೆ ಹೆಚ್ಚುವರಿಯಾಗಿ ನೇಮಿಸಿಕೊಂಡಿರುವ ಪೌರಕಾರ್ಮಿಕರಿಗೆ ಪುರಸಭಾ ನಿಧಿಯಿಂದ ಸಂಬಳ ನೀಡಿ, ಎಸ್‍ಎಸ್‍ಪಿ ಅನುದಾನದಲ್ಲಿ ಸಂಬಳ ನೀಡಬೇಡಿ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ಪಟ್ಟಣದ ತೀನಂಶ್ರೀ ಭವನದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

     2021-22ನೇ ಸಾಲಿನ ಎಸ್‍ಎಫ್‍ಎಸಿ ಅನುದಾನವನ್ನು ಸರ್ಕಾರದ ಮಾರ್ಗಸೂಚಿಯಂತೆ ಕ್ರಿಯಾಯೋಜನೆ ರೂಪಿಸಿ ಬಳಸಿ, ಅನಗತ್ಯವಾಗಿ ಬಳಸಬೇಡಿ, ನಾನು ಶಾಸಕನಾದ ಸಂದರ್ಭದಲ್ಲಿ ಪುರಸಭೆಯಲ್ಲಿದ್ದಂತಹ ಹೆಚ್ಚುವರಿ ಪೌರಕಾರ್ಮಿಕರನ್ನು ತೆಗೆದುಹಾಕಲಾಗಿತ್ತು. ಆದರೆ ಈಗ ಮತ್ತೆ ನೌಕರರನ್ನು ತೆಗೆದುಕೊಂಡಿರುತ್ತೀರಿ ಇವರಿಗೆ ಸಂಬಳವನ್ನು ಪುರಸಭೆಯ ನಿಧಿಯಿಂದ ನೀಡಿ ಹಾಗೂ 15ನೇ ಹಣಕಾಸು ಯೋಜನೆಗೆ ಸಂಭಂದಿಸಿದಂತೆ ಪುನಃ ಸಭೆ ಕರೆದು ಕ್ರಿಯಾ ಯೋಜನೆ ರೂಪಿಸಿ ಎಂದರು.

ಹೆಚ್ಚುವರಿ ಮನೆಗಳನ್ನು ತರುವ ಶಕ್ತಿ ನನ್ನಲ್ಲಿದೆ :

     ಪುರಸಭಾ ವ್ಯಾಪ್ತಿಯಲ್ಲಿ 800 ಮನೆಗಳನ್ನು ಮಂಜೂರು ಮಾಡಿದ್ದು, ಇನ್ನು ಅಗತ್ಯವಿದ್ದರೆ 800 ಮನೆಗಳನ್ನು ಹೆಚ್ಚುವರಿಯಾಗಿ ತರುವಂತಹ ಶಕ್ತಿ ನನ್ನಲ್ಲಿದೆ. ಆದ್ದರಿಂದ ಕೂಡಲೇ ಆಶ್ರಯ ಯೋಜನೆಯಡಿ ಮನೆಗಳು ಅವಶ್ಯಕತೆ ಇರುವಂತಹ ಸಾರ್ವಜನಿಕರಿಂದ ಅರ್ಜಿಗಳನ್ನು ತೆಗೆದುಕೊಂಡು ಅವರಿಂದ ಒಪ್ಪಿಗೆ ಪತ್ರಗಳನ್ನು ಬರೆಸಿಕೊಳ್ಳಿ ಹಾಗೂ ಮರಣದ ದಾಖಲೆಯಲ್ಲಿ ಕೋವಿಡ್‍ನಿಂದ ಮೃತಪಟ್ಟವರ ಬಗ್ಗೆ ಸರಿಯಾದ ವರದಿಯನ್ನು ನೀಡುವಂತೆ ತಿಳಿಸಿದರು.

ವಸೂಲಾಗದ ಮಳಿಗೆ ಬಾಡಿಗೆದಾರರ ವಿರುದ್ಧ ಕ್ರಮಕ್ಕೆ ಸೂಚನೆ :
     2021ರ ಜನವರಿಯಿಂದ ಮೇ 2021 ರವರೆಗೆ ಜಮಾ-ಖರ್ಚನ್ನು ಓದಿ ರೆಕಾರ್ಡ್ ಮಾಡುವ ವಿಚಾರದಲ್ಲಿ ಯಾವುದರಿಂದ ಎಷ್ಟು ಪುರಸಭೆಗೆ ಆದಾಯ ಬರುತ್ತದೆ ಹಾಗೂ ಪ್ರತಿ ತಿಂಗಳು ಬರುವಂತಹ ನಿಗದಿತ ಆದಾಯವನ್ನು ಸರಿಯಾಗಿ ವಸೂಲು ಮಾಡಬೇಕು ಹಾಗೂ ಖರ್ಚನ್ನು ಆಯಾ ತಿಂಗಳಲ್ಲೇ ತೋರಿಸಬೇಕು ಎಂದ ಶಾಸಕರು 10ನೇ ಹಣಕಾಸು ಯೋಜನೆಯ ಮಳಿಗೆ ಬಾಡಿಗೆ, ಐಡಿಎಸ್‍ಎಂಟಿ ಮಳಿಗೆ ಬಾಡಿಗೆ, ಪುರಸಭಾ ಮಳಿಗೆ ಬಾಡಿಗೆ ಇವುಗಳು ಪ್ರತಿ ತಿಂಗಳು ವಸೂಲಾಗಬೇಕು, ಅದರೆ ವಸೂಲಾಗಿಲ್ಲ ಬಾಡಿಗೆ ನೀಡದವರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದಿರಿ ಎಂದರು.

ಭವನಗಳ ನಿರ್ಮಾಣ ಪ್ರಗತಿಯಲ್ಲಿ :

      ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ರೇಣುಕಾದೇವಿ ಮಾತನಾಡಿ, ವಾಲ್ಮೀಕಿ ಭವನಕ್ಕೆ 2ಕೋಟಿ ಹಾಗೂ ಬಾಬು ಜಗಜೀವನರಾಂ ಭವನಕ್ಕೆ 3ಕೋಟಿ ರೂಪಾಯಿಗಳಿಗೆ ಸರ್ಕಾರವು ಈಗಾಗಲೇ ಮಂಜೂರಾತಿ ನೀಡಿದ್ದು, ಅದರಂತೆ ಮೀಸಲುಗೊಂಡಂತಹ ನಿವೇಶನಗಳು, ಭವನಗಳನ್ನು ನಿರ್ಮಿಸಲು ನೀಡುವಂತೆ ತಿಳಿಸಿದ ಅವರು ಪಟ್ಟಣದ ಸಾಯಿಗಂಗಾ ಆಸ್ಪತ್ರೆಯ ಹಿಂಭಾಗದಲ್ಲಿ ಬಾಬು ಜಗಜೀವನರಾಂ ಭವನ ಹಾಗೂ ಶ್ರೀ ಶಿವಕುಮಾರ ಬಡಾವಣೆಯಲ್ಲಿ ವಾಲ್ಮೀಕಿ ಭವನವನ್ನು ನಿರ್ಮಿಸಲು ಸ್ಥಳ ಗುರುತಿಸಲಾಗಿದ್ದು, ನಿವೇಶನವನ್ನು ಹಸ್ತಾಂತರಿಸಲು ತಿಳಿಸಿದರು.

      ಸಭೆಯಲ್ಲಿ ಪುರಸಭಾಧ್ಯಕ್ಷೆ ಪುಷ್ಪಾ ಹನುಮಂತರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಮುಖ್ಯಾಧಿಕಾರಿ ಶ್ರೀನಿವಾಸ್, ಪುರಸಭಾ ಸದಸ್ಯರುಗಳಾದ ರೇಣುಕಮ್ಮ, ಮಂಜುನಾಥ್‍ಗೌಡ, ರೇಣುಕಪ್ರಸಾದ್ (ಶ್ಯಾಮ್) ಸಿ.ಬಸವರಾಜು, ದಯಾನಂದ್, ಉಮಾಪರಮೇಶ್, ನಾಗರಾಜು, ಸಿ.ಡಿ.ಸುರೇಶ್, ಪೂರ್ಣಿಮಾಸುಬ್ರಮಣ್ಯ, ನಾಮಿನಿ ಸದಸ್ಯರಾದ ಮಿಲಿಟರಿ ಶಿವಣ್ಣ, ಗೋವಿಂದರಾಜು, ದೇವರಾಜು, ಮಲ್ಲಿಕಾರ್ಜುಸ್ವಾಮಿ, ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap