ಬ್ಲೂಫಿಲಂ ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪುತ್ರಿ

0
1177

ಧಾರವಾಡ: 

  ಕಾಮುಕನೊಬ್ಬ ಸ್ವಂತ ಮಗಳಿಗೆ ಸೆಕ್ಸ್ ವೀಡಿಯೊ ತೋರಿಸಿ ಆಕೆಯ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

  ಶಮಶುದ್ದೀನ್ ಲಾಲಾಮಿಯಾ ಎಂಬಾತನೇ ಇಂತಹ ನೀಚಕೃತ್ಯವೆಸಗಿದವ. ಪುತ್ರಿ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಸೆಕ್ಸ್ ವೀಡಿಯೋ ತೋರಿಸುತ್ತಿದ್ದ. ಬೆಡ್ ರೂಮಿಗೆ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಎಂಬ ಆರೋಪ ಕೇಳಿಬಂದಿದೆ.

  ಶಮಶುದ್ದೀನ್ ಗೆ 17 ವರ್ಷದ ಪುತ್ರಿ ಇದ್ದು, ಆಕೆಗೆ 6 ತಿಂಗಳಿಂದ ಸೆಕ್ಸ್ ವಿಡಿಯೋ ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

  ವಿಷಯ ಗೊತ್ತಾಗಿ ಪತ್ನಿ ಪ್ರಶ್ನಿಸಿದಾಗ ಆಕೆಗೂ ಕೊಲೆ ಮಾಡುವುದಾಗಿ ಬೆದರಿಸಿದ್ದು, ನೊಂದ ಪತ್ನಿ ಧಾರವಾಡ ಉಪನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here