ತಿಪಟೂರು :
ನಗರದ ಗೋವಿನಪುರದಲ್ಲಿ ಹುಳಿಯಾರು ಕಡೆಯಿಂದ ತಿಪಟೂರಿಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸ್ಟೇರಿಂಗ್ ರಾಡ್ ಮುರಿದ ಘಟನೆ ನಡೆದಿದೆ.
ತಿಪಟೂರಿನಿಂದ ಹಾಲ್ಕುರಿಕೆ ಮಾರ್ಗವಾಗಿ ಹುಳಿಯಾರು ಮತ್ತು ಬಳ್ಳಾರಿಗೆ ಸಂಪರ್ಕಕಲ್ಪಿಸುವ ರಾಜ್ಯಹೆದ್ದಾರಿ 54 ಗೋವಿನಪುರದ ಹತ್ತಿರ ಸಂಪೂರ್ಣವಾಗಿ ಹಾಳಾಗಿಹೋಗಿ ರಸ್ತೆಯಲ್ಲಿ 2-3ಅಡಿಯಷ್ಟು ಆಳವಾದ ಗುಂಡಿಗಳಾಗಿದ್ದು ರಸ್ತೆಯ ಗುಂಡಿನ್ನು ತಪ್ಪಿಸಲು ಹೋಗಿಯೋ ಅಥವಾ ಗುಂಡಿಗೆ ಚಕ್ರ ಇಳಿದ ಪರಿಣಾಮವಾಗಿ ರಲ್ಲಿರುವ ಹುಳಿಯಾರಿನಿಂದ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಸಂಖ್ಯೆ KA17 F1188 ಈ ಸ್ಪಲ್ಪದರಲ್ಲೆ ಮರಕ್ಕೆ ಡಿಕ್ಕಿಯಾಗುವುದು ತಪ್ಪಿದ್ದು ಮತ್ತು ಬಸ್ ಬಲಕ್ಕೆ ಸಂಚರಿಸಿದ ಸಮಯದಲ್ಲಿ ಎದುರಿಗೆ ಯಾರು ಬರದಿದ್ದರಿಂದ ಅಫಘಾತ ತಪ್ಪಿದ್ದು ಮುಂದೆ ಅಪಘಾತವಾಗುವ ಮುಂಚೆಯೇ ಓಡಾಡಲು ಸಾಧ್ಯವಾಗದಂತಹ ರಸ್ತೆಯನ್ನು ಸರಿಪಡಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
