ನವರಾತ್ರಿ ಹಬ್ಬಕ್ಕೆ 9 ದಿನಗಳ ಕಾಲ ಪಟ್ಟದ ಗೊಂಬೆ ಪ್ರತಿಷ್ಠಾಪನೆ

0
28

ಕೊರಟಗೆರೆ

         ದಸರಾ ಪ್ರಯುಕ್ತ ಕಳೆದ 150 ವರ್ಷಗಳಿಂದಲೂ ನವರಾತ್ರಿ ಹಬ್ಬಕ್ಕೆ 9 ದಿನಗಳ ಕಾಲ ಪಟ್ಟದ ಗೊಂಬೆ, ಲಕ್ಷ್ಮೀ ಕಳಸ ಸೇರಿದಂತೆ ಸಾವಿರಾರು ದೇವರ ಗೊಂಬೆಗಳನ್ನು ಪ್ರತಿಷ್ಟಾಪಿಸುವ ಮೂಲಕ ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ನಿವೃತ್ತ ಮುಖ್ಯೊ ಪಾದ್ಯಾಯರ ಕುಟುಂಬವೊಂದು ಪ್ರತಿ ವರ್ಷದಂತೆ ಈ ಬಾರಿಯೂ ಪ್ರತಿಷ್ಟಾಪಿಸಿ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳುವ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

      ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದ ನಿವೃತ್ತ ಪ್ರೌಢಶಾಲಾ ಮುಖ್ಯೋಪಾದ್ಯಾಯರಾದರಮಾನಂದ್‍ಎಂಬುವರ ಮನೆಯಲ್ಲಿ ಕಳೆದ 150 ವರ್ಷಗಳಿಂದಲೂ ವಂಶ ಪಾರಂಪರಿಗತವಾಗಿ ರೂಢಿಸಿಕೊಂಡು ಬಂದ ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ದಸರಾ ಸಾರುವಂತಹ ಹಲವು ಗೊಂಬೆಗಳನ್ನು ಪ್ರತಿಷ್ಟಾಪಿಸುವುದರ ಮೂಲಕ ಸಾರ್ವಜನಿಕರದರ್ಶನಕ್ಕೆ ಅನುವು ಮಾಡಿಕೊಟ್ಟಿರುವುದಲ್ಲದೇ ಸಂಪ್ರದಾಯದಂತೆ 9 ದಿನಗಳ ಕಾಲವು ಪೂಜಾಕಾರ್ಯ ನಡೆಸುವ ಮೂಲಕ ಮುತ್ತೈದೆಯರಿಗೆ ಬಾಗಿನ ನೀಡುವುದು ವಿಶೇಷವಾಗಿದೆ.

       ನವರಾತ್ರಿ ಪ್ರಯುಕ್ತ 9 ದಿನಗಳ ಕಾಲ ಪಟ್ಟದ ಗೊಂಬೆ ಹಾಗೂಲಕ್ಷ್ಮೀಯ ಕಳಸ ಪ್ರತಿಷ್ಟಾಪನೆ ವಿಶೇಷವಾಗಿದ್ದು, ರಾಮ ಪಟ್ಟಾಭಿಷೇಕ, ಕೃಷ್ಣ ಲೀಲೆ ಬಣ್ಣಿಸುವ ಹಲವು ಗೊಂಬೆಗಳು,ಗೋವರ್ಧನ ಬೆಟ್ಟಏರುತ್ತಿರುವುದು, ಕೃಷ್ಣನ ರಾಸಲೀಲೆಗಳು, ರಂಗನಾಥ ಸ್ವಾಮಿ, ತಿರುಪತಿಯ ಬ್ರಹ್ಮೋತ್ಸವಉತ್ಸವ, ವಿಷ್ಣುವಿನ ಜೊತೆಅಶ್ವತ್ಥರಾಮ 10 ಜನರ ವೈಷ್ಣವ ಪಂಥಕ್ಕೆ ಸೇರಿದ ಹಾಸನಗಳು, ಸೀತಾರಾಮ ಕಲ್ಯಾಣ, ಲವಕುಶ ಅಶ್ವಮೇದಯಾಗಕುದುರೆಕಟ್ಟುವುದು ಸೇರಿದಂತೆಧಾರ್ಮಿಕ ಸಂದೇಶ ನೀಡುವ ನೂರಾರು ಮೂರ್ತಿಗಳನ್ನು ಗೊಂಬೆಗಳ ರೂಪದಲ್ಲಿ ಪ್ರತಿಷ್ಟಾಪಿಸಿ ನೂರಾರು ವರ್ಷಗಳಿಂದ ತಾತ ಮುತ್ತಾತರ ಕಾಲಗಳಿಂದ ವಂಶ ಪಾರಂಪರ್ಯವಾಗಿ ಪ್ರತಿ ನವರಾತ್ರಿ ಹಬ್ಬದ ಸಂಧರ್ಭದಲ್ಲಿ 9 ದಿನಗಳ ಕಾಲ ಪ್ರತಿಷ್ಟಾಪಿಸಿ ಪೂಜೆ ಕೈಂಕರ್ಯಗಳೊಂದಿಗೆ ದಿನಂ ಪ್ರತಿ ಸುಮಂಗಲಿಯವರಿಗೆ ಬಾಗಿನ ನೀಡುವ ಮೂಲಕ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿದ್ದಾರೆ.

        ನವರಾತ್ರಿ ಪ್ರಯುಕ್ತಗ್ರಾಮೀಣ ಪ್ರದೇಶದಜನರುಧಾರ್ಮಿಕಆಚರಣೆಯಜೊತೆಜೊತೆಗೆ ವಿಜಯದಶಮಿಯ ಹಬ್ಬಆಚರಣೆ ಸೇರಿದಂತೆ ಈ ಹಬ್ಬದ ವೈಶಿಷ್ಟ್ಯತೆಯನ್ನು ಸಾರುವ ಗೊಂಬೆಗಳನ್ನು ಸಾಲು ಸಾಲಾಗಿ ಒಂದೊಂದುಗೊಂಬೆಯುಒಂದೊಂದುತನ್ನದೇಆದಚರಿತ್ರೆಯನ್ನು ಬಣ್ಣಿಸುವರೀತಿಯಲ್ಲಿ ಪ್ರತಿಷ್ಟಾಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಗಿದ್ದು, ದಿನಂ ಪ್ರತಿ ನೂರಾರುಜನದಸರಾ ನಾಡ ಹಬ್ಬ ಸಾರುವಂತಹ ಗೊಂಬೆ ವೀಕ್ಷಣೆ ಮಾಡುವ ಮೂಲಕ ತೃಪ್ತಿ ವ್ಯಕ್ತ ಪಡಿಸುತ್ತಿದ್ದಾರೆ.

        ವಿಜಯದಶಮಿ ಪ್ರಯುಕ್ತ ಗೊಂಬೆಗಳನ್ನು ಪ್ರತಿಷ್ಟಾಪಿಸಿರುವನಿವೃತ್ತ ಮುಖ್ಯೋಪಾದ್ಯಾಯರಮಾನಂದ್ ಮಾತನಾಡಿನವರಾತ್ರಿ ಸಂಪ್ರದಾಯ ನಮ್ಮತಾತ, ಮುತ್ತಾತನ ಕಾಲದಿಂದ ನಡೆಯುತ್ತ ಬಂದಿದ್ದು ಈಗಲೂ ಅವರಕಾಲದಲ್ಲಿಕೂರಿಸುತ್ತಿದ್ದದಸರಾಗೊಂಬೆಯನ್ನೆ ಈ ಬಾರಿಯೂ ಕೂರಿಸಿ ಪ್ರತೀ ವರ್ಷದಂತೆ ಈ ಬಾರಿಯೂ ಪೂಜೆ ಕಾರ್ಯಗಳನ್ನು ನೆರವೇರಿಸುತ್ತಿದ್ದೇವೆ, ಈ ಗೊಂಬೆಗಳನ್ನು ವೀಕ್ಷಿಸಲು ನಮ್ಮ ಸ್ನೇಹಿತರುಗಳು ಹಾಗು ಸಾರ್ವಜನಿಕರು ಬಹಳ ಸಂಖ್ಯೆಯಲ್ಲಿಆಗಮಿಸುತ್ತದ್ದು ಗೊಂಬೆಗಳ ಪ್ರದರ್ಶ ನ ವೀಕ್ಷಿಸಿ ಪೂಜೆಯಲ್ಲಿ ಪಾಲ್ಗೊಳ್ಳುತ್ತಿರುವುದು ಸಾಮನ್ಯವಾಗಿದೆ, 9 ದಿನಗಳ ಕಾಲ ಈ ಗೊಂಬೆಗಳ ಪ್ರದರ್ಶನ ಹಾಗೂ ಪೂಜ ಕಾರ್ಯಗಳು ಜರುಗಲಿದ್ದು ಪ್ರತಿದಿನ ರಾತ್ರಿ ವೇಳೆಗೆ ಸುಮಂಗಲಿಯವರನ್ನು ಕರೆಸಿ ಹರಿಶಿಣ ಕುಂಕುಮ ಕೊಟ್ಟು ಹಾರೈಸುತ್ತಿರುವುದು ವಾಡಿಕೆಯಾಗಿದೆ, ನಾವು ಎಲ್ಲಿಯೆಇದ್ದರೂ ನವರಾತ್ರಿ ಸಂಧರ್ಬದಲ್ಲಿ ಸ್ವಗ್ರಾಮಕ್ಕೆ ಆಗಮಿಸಿ ಈ ನವರಾತ್ರಿ ಪೂಜೆಯನ್ನು ನಡೆಸಿಕೊಂಡು ಬರುತ್ತಿದ್ದೆವೆ.

        ರಮಾನಂದ್ ಮಡದಿ ನಾಗಮಣಿರಮಾನಂದ್ ಮಾತನಾಡಿನಾನು ಮದುವೆಯಾಗಿ 45 ವರ್ಷಆಗಿದ್ದು, ಕಳೆದ 150 ವರ್ಷಗಳಿಂದಲೂ ನಮ್ಮಅತ್ತೆ-ಅವರಅತ್ತೆಯ ಕಾಲದಿಂದಲೂ ಗೊಂಬೆ ಕೂರಿಸುವಂತಹ ಸಂಪ್ರದಾಯ ಉಳಿಸಿಕೊಂಡು ಬಂದಿದ್ದು, ಹಿರಿಯರ ಸಂಪ್ರದಾಯದಂತೆಯೆ ಪೂಜೆ ಕಾರ್ಯಕ್ರಮಗಳನ್ನು ಯಥಾವತ್ತು ನಡೆಸಿಕೊಂಡು ಬಂದಿದ್ದು, 9 ದಿನಗಳ ಕಾಲವು ವಿಶೇಷ ಪೂಜೆಯಜೊತೆಗೆ ಪ್ರತೀ ದಿನವೂ ಸುಮಂಗಲಿಯವರಿಗೆ ಬಾಗಿನ ನೀಡುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿರುತ್ತೇವೆಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here