ಬರಗೂರು
ಕೇಂದ್ರ ಸರ್ಕಾರವು 2003 ರ ವಿದ್ಯುತ್ ಕಾಯಿದೆಗೆ ತಿದ್ದುಪಡಿಯನ್ನು ತರಲು ಉದ್ದೇಶಿಸಿದ್ದು, ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡ ಹೊರಟಿರುವುದರ ವಿರುದ್ದ ಸಾಂಕೇತಿಕ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಬರಗೂರು ಬೆಸ್ಕಾಂನ ಶಾಖಾಧಿಕಾರಿ ಲೋಕೇಶ್ ತಿಳಿಸಿದರು.
ಅವರು ಸಿರಾ ತಾಲ್ಲೂಕು ಬರಗೂರು ಬೆಸ್ಕಾಂ ಕಚೇರಿ ಆವರಣದಲ್ಲಿ ಕಪ್ಪು ಪಟ್ಟಿ ಧರಿಸಿದ ಸಾಂಕೇತಿಕ ಪ್ರತಿಭಟನೆಯಲ್ಲಿ ಮಾತನಾಡಿದರು. ಖಾಸಗೀಕರಣಗೊಳಿಸುವುದರಿಂದ ಇಲಾಖೆ ನೌಕರರಿಗೂ ಮತ್ತು ರೈತರಿಗೂ ಬಡ ವರ್ಗದವರಿಗೂ ತೀವ್ರ ತೊಂದರೆ ಉಂಟಾಗಲಿದೆ ಎಂದರು.
ನೌಕರರಾದ ಮಂಜುನಾಥ್, ರಾಮಣ್ಣ, ರಾಜಾನಾಯ್ಕ, ಚರಲಿಂಗೇಶ್ವರ್, ಸತೀಶ್ ನಾಯ್ಕ, ಯೋಗೇಶ್, ಪುನೀತ್, ಚೇತನ್, ಅಮರೇಶ್, ದೇವರಾಜು, ಪ್ರವೀಣ್ ಕುಮಾರ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
