ಕುಣಿಗಲ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಚಿಗುರು ಫೌಂಡೇಶನ್, ಸೇವಾ ಭಾಗ್ಯ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನಡೆದ ಪೋಷಣ್ ಅಭಿಯಾನ್ ಯೋಜನೆಯಡಿಯಲ್ಲಿ ಪೌಷ್ಟಿಕ ಮಾಸಾಚರಣೆ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ, ಪೋಷಕಾಂಶಗಳನ್ನು ಹೊಂದಿರುವ ಸಸಿಗಳು ಮತ್ತು ಬೀಜಗಳನ್ನು ವಿತರಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ತಹಸೀಲ್ದಾರ್ ವಿಶ್ವನಾಥ್ ಆರೋಗ್ಯವೇ ಭಾಗ್ಯ, ದೇಶವು ಪ್ರಗತಿಯನ್ನು ಸಾಧಿಸಬೇಕಾದರೆ ಮನುಷ್ಯರು ಆರೋಗ್ಯವನ್ನು ಕಾಪಾಡಿಕೊಳ್ಳ ಬೇಕು. ಸ್ವಸ್ಥ ದೇಹ, ಸದೃಢ ದೇಶ. ರಾಸಾಯನಿಕ ಮುಕ್ತ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ಮನೆಯ ಕೈ ತೋಟದಲ್ಲಿ ಕುಟುಂಬಕ್ಕೆ ಬೇಕಾದ ಸಾವಯವ ಪದ್ಧತಿಯಲ್ಲಿ ತರಕಾರಿ ಬೆಳೆದು ಸೇವಿಸಿರಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ನಟರಾಜ್, ಶ್ರೀಧರ್, ತಾಲ್ಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನುಷ, ತಾಲ್ಲೂಕು ಪೋಷಣ್ ಅಭಿಯಾನ್ ಸಂಯೋಜನಾಧಿಕಾರಿ ಪುಷ್ಪಲತ ಡಿ, ಚಿಗುರು ಫೌಂಡೇಶನ್ ಅಧ್ಯಕ್ಷ ಪುರುಷೋತ್ತಮ, ಸೇವಾ ಭಾಗ್ಯ ಫೌಂಡೇಶನ್ ಅಧ್ಯಕ್ಷ ವಸಂತ್ ಕುಮಾರ್, ಅಂಗನವಾಡಿ ಮೇಲ್ವಿಚಾರಕಿಯರು, ಶಿಕ್ಷಕಿಯರು, ಸೇವಾ ಭಾಗ್ಯ ಹಾಗೂ ಚಿಗುರು ಫೌಂಡೇಶನ್ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
