ಹುಳಿಯಾರು:
ಹುಳಿಯಾರಿನಲ್ಲಿರುವ ಖಾಸಗಿ ಶುದ್ಧ ನೀರಿನ ಘಟಕಗಳನ್ನು ತಪಾಸಣೆ ಮಾಡುವಂತೆ ಥಿಯಾಸಾಫಿಕಲ್ ಸೊಸೈಟಿಯ ಸೇವಾ ವಿಭಾಗದ ಅಧ್ಯಕ್ಷ ಎಂ.ಆರ್.ಗೋಪಾಲ್ ಅವರು ಮನವಿ ಮಾಡಿದ್ದಾರೆ.
ಹುಳಿಯಾರಿನಲ್ಲಿ ಊರ್ನಾಲ್ಕು ಖಾಸಗಿ ಶುದ್ಧ ನೀರಿನ ಘಟಕಗಳು ತಲೆ ಎತ್ತಿದ್ದು ಹುಳಿಯಾರು ಪಟ್ಟಣಕ್ಕೆ 20 ಲೀಟರ್ ಕ್ಯಾನ್‍ಗೆ 20 ರೂಗಳಂತೆ ಸರಬರಾಜು ಮಾಡಲಾಗುತ್ತಿದೆ. ಆದರೆ ಕೆಲ ಘಟಕಗಳಿಂದ ಸರಬರಾಜು ಆಗುತ್ತಿರುವ ನೀರು ಸರಿಯಾಗು ಶುದ್ದಿಯಾಗುತ್ತಿಲ್ಲ. ಅಲ್ಲದೆ ಕ್ಯಾನ್ ಸರಿಯಾಗಿ ತೊಳೆಯದೆ ಪಾಚಿ ಹಾಗೂ ಗಲೀಜು ಇರುತ್ತದೆ.
ಅಲ್ಲದೆ ಇಂತಿಷ್ಟು ವರ್ಷವಾದ ನಂತರ ಕ್ಯಾನ್ ತನ್ನ ಗುಣಮಟ್ಟ ಕಳೆದುಕೊಳ್ಳುವುದರಿಂದ ಕಾಲ ಕಾಲಕ್ಕೆ ಹೊಸ ಕ್ಯಾನ್ ಖರೀಧಿಸಿ ನೀರು ಸರಬರಾಜು ಮಾಡಬೇಕಿದೆ. ಆದರೆ ಘಟಕಗಳು ಆರಂಭವಾದ ದಿನಗಳಿಂದಲೂ ಬಳಸಿದ್ದೇ ಬಳಸುತ್ತಿರುವುದರಿಂದ ಈ ಕ್ಯಾನ್ ನೀರು ಬಳಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಹಾಗಾಗಿ ತಾಲೂಕು ಆರೋಗ್ಯಾಧಿಕಾರಿಗಳು ಹುಳಿಯಾರಿನಲ್ಲಿನ ಖಾಸಗಿ ಶುದ್ಧ ನೀರಿನ ಘಟಕಗಳ ತಪಾಸಣೆ ಮಾಡಿ ಶುದ್ಧಿ ಕರಿಸುತ್ತಿರುವ ನೀರಿನ ಗುಣಮಟ್ಟವನ್ನು ಲ್ಯಾಬ್‍ನಲ್ಲಿ ಟೆಸ್ಟ್ ಮಾಡಿಸುವ ಜೊತೆಗೆ ಹೊಸಹೊಸ ಕ್ಯಾನ್ ಬಳಸಲು ಹಾಗೂ ಕ್ಯಾನ್ ಸ್ವಚ್ಚ ಮಾಡುವಂತೆಯೂ ಸೂಚನೆ ನಿಡುವಂತೆ ಅವರು ಮನವಿ ಮಾಡಿದ್ದಾರೆ.ಎಂ.ಆರ್.ಗೋಪಾಲ್, ಅಧ್ಯಕ್ಷರು. ಥಿಯಾಸಫಿಕಲ್ ಸೊಸೈಟಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
