ಮಧುಗಿರಿ
ಆತ್ಮ ವಿಶ್ವಾಸ ಮತ್ತು ದೃಢ ಸಂಕಲ್ಪಗಳಿದ್ದರೆ ಮಾತ್ರ ನಿರ್ದಿಷ್ಟ ಗುರಿ ತಲುಪಲು ಸಾಧ್ಯ ಎಂದು ಯುವ ಫೇರ್ ಸೇವಾ ಟ್ರಸ್ಟ್‍ನ ಕಾರ್ಯದರ್ಶಿ ಶ್ರೀನಿವಾಸ್ ಅಭಿಪ್ರಾಯ ಪಟ್ಟರು.
ಅವರು ಬುಧವಾರ ಪಟ್ಟಣದ ಎಂಜಿಎಂ ಬಾಲಿಕಾ ಪ್ರೌಢ ಶಾಲೆಯಲ್ಲಿ ಎಂಜಿಎಂ ದಾರಿ ದೀಪ 2018 ರ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ಸಂಸತ್‍ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಅಂಕಗಳು ಜೀವನದ ಮಾನ ದಂಡಗಳಲ್ಲ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಕ್ಕೆ ತಮ್ಮದೆ ಆದಂತಹ ಕೊಡುಗೆಗಳನ್ನು ನೀಡಬೇಕೆಂದರು.
ಹಿರಿಯ ವಕೀಲ ಹೆಚ್‍ಕೆವಿ ರೆಡ್ಡಿ ಮಾತನಾಡಿ, ಹೆಣ್ಣು ಮಕ್ಕಳು ಸ್ವಾಲಂಬಿಗಳಾಗಿ ಬದುಕ ಬೇಕೆಂದರೆ ಶಿಕ್ಷಣ ಎಂಬುದು ಅತ್ಯವಶ್ಯಕವಾಗಿ ಬೇಕಾಗಿದ್ದು, ತಮ್ಮ ಜೀವನದ ಬಗ್ಗೆ ದೂರದೃಷ್ಠಿ ಹೊಂದಿದ್ದರೆ ಮಾತ್ರ ಎಲ್ಲವೂ ಸಫಲವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ 2017-18ನೇ ಸಾಲಿನಲ್ಲಿ ಹೆಚ್ಚು ಅಂಕ ಗಳಿಸಿದ ಶಾಲೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ತಾ.ಪಂ. ಉಪಾಧ್ಯಕ್ಷ ಲಕ್ಷ್ಮೀನರಸಯ್ಯ, ಶಾಲಾ ಆಡಳಿತ ಮಂಡಳಿಯ ಶಂಕರನಾರಾಯಣಶೆಟ್ಟಿ, ಶಂಕರನಾರಾಯಣ್, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ, ಶಿಕ್ಷಕರಾದ ಶೋಭಾ, ಶ್ರೀನಿವಾಸ್, ಯೋಗೀಶ್, ಮಂಜುನಾಥ, ಓಂಕಾರಮ್ಮ, ಹರೀಶ್, ರಮೇಶ್ ಹಾಗೂ ವಿದ್ಯಾರ್ಥಿನಿಯರು, ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ