ತುಮಕೂರು:
ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಮತ್ತು ಹೊಸ ಸಾಹಸಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಚಿನ್ನವನ್ನು ಖರೀದಿಸುವುದು ಕುಟುಂಬಕ್ಕೆ ಅದೃಷ್ಟ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಈ ಮಂಗಳಕರ ದಿನವನ್ನು ನಮ್ಮ ಶೋ ರೂಂಗಳಲ್ಲಿ ವಿಶೇಷವಾಗಿ ಸ್ವಾಗತಿಸಲು ಸಿದ್ಧವಾಗಿದೆ. ನಾಳೆ ಬೆಳಿಗ್ಗೆ 7 ಗಂಟೆಗೆ ನಮ್ಮ ಎಲ್ಲಾ ಶೋರೂಂ ಗಳು ತೆರೆದಿರುತ್ತವೆ.
ಅಕ್ಷಯ ತೃತೀಯದಲ್ಲಿ ಆಭರಣಗಳ ಮೇಲೆ ನಾವು ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿಯಲ್ಲಿ ನೀಡುತ್ತಿದ್ದೇವೆ ಮತ್ತು ಕರ್ನಾಟಕದಲ್ಲಿ, ನಾವು ಚಿನ್ನದ ಆಭರಣದ ತಯಾರಿಕೆ ಮೇಲೆ 50% ಮತ್ತು ವಜ್ರದ ಮೌಲ್ಯದ ಮೇಲೆ 20% ವರೆಗೆ ರಿಯಾಯಿತಿ ನೀಡುತ್ತಿದ್ದೇವೆ ಇದಲ್ಲದೆ ಚಿನ್ನದ ನಾಣ್ಯಗಳ ಮೇಲೆ ಯಾವುದೇ ತಯಾರಿಕಾ ಶುಲ್ಕ ಇರುವುದಿಲ್ಲ.
ಕಳೆದ ವರ್ಷದ ಮಾರಾಟದ ಅಂಕಿ ಅಂಶದ ಅನ್ವಯ ಪ್ರಸ್ತುತ ವರ್ಷದಲ್ಲಿ ಭಾರತ ಮತ್ತು ವಿದೇಶದಲ್ಲಿ ಸುಮಾರು 2000 ಕೆ.ಜಿ ಚಿನ್ನವನ್ನು ಮಾರಾಟವಾಗುವ ನಿರೀಕ್ಷಿಯಿದೆ ಎಂದು ಮಲಬಾರ್ ಗ್ರೂಪ್ ನ ಅಧ್ಯಕ್ಷ ಎಂ.ಪಿ. ಅಹ್ಮದ್ ಅವರು ತಿಳಿಸಿದ್ದಾರೆ. ಇದರ ಜೊತೆಗೆ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ನ ಇತರೆ ಬ್ರಾಂಡ್ ಗಳಾದ ಎರಾ, ಮೈನ್, ಎಥ್ನಿಕ್ಸ್, ಪ್ರೆಸಿಯಾ, ಡಿವೈನ್ ಮತ್ತು ಸ್ಟಾರ್ಲೆಟ್ ಮುಂತಾದ ಆಭರಣಗಳ ವಿಶಾಲ ಶ್ರೇಣಿಯೂ ಲಭ್ಯವಿರುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
