ಹುಳಿಯಾರು:
ಟಿಸಿ ಸ್ಪಾರ್ಕ್‍ನ ಕಿಡಿ ತಗುಲಿ 5 ಟ್ರಾಕ್ಟರ್ ರಾಗಿ ಹುಲ್ಲು ಸುಟ್ಟು ಭಸ್ಮವಾದ ಘಟನೆ ಹಂದನಕೆರೆ ಹೋಬಳಿ ಹಳ್ಳಿತಿಮ್ಲಾಪುರದಲ್ಲಿ ಭಾನುವಾರ ಬೆಳಗ್ಗೆ ಜರುಗಿದೆ.
ಇದೇ ಗ್ರಾಮದ ಜಗದೀಶ್ ಎಂಬುವವ ಹುಲ್ಲಿನ ಬಣವೆ ಇದಾಗಿದೆ. ಹುಲ್ಲಿನ ಬಣವೆಯ ಮೇಲಿದ್ದ ಟಿಸಿಯಲ್ಲಿ ನಿರಂತರಾಗಿ ಸ್ಪಾರ್ಕ್ ಬರುತ್ತಿದೆ. ಈ ಸ್ಪಾರ್ಕ್‍ನ ಕಿಡಿ ಕೆಳಗಿದ್ದ ರಾಗಿ ಹುಲ್ಲಿನ ಬಣವೆಯ ಮೇಲೆ ಬಿದ್ದಿದೆ. ಪರಿಣಾಮ ಹುಲ್ಲು ಹೊತ್ತಿ ಉರಿಯಲಾರಂಭಿಸಿತು ಎಂದು ಸಮೀಪದ ತೋಟದಲ್ಲಿ ಕುರಿಮಂದೆ ಹಾಕಿಕೊಂಡಿದ್ದ ಕುರಿಗಾಹಿಗಳು ತಿಳಿಸಿದ್ದಾರೆಂದು ತಿಳಿದು ಬಂದಿದೆ.
ಈ ಗ್ರಾಮಕ್ಕೆ ಸರಿಯಾದ ರಸ್ತೆ ವ್ಯವಸ್ಥಯಿದ್ದಲ್ಲ ಕಾರಣ ಅಗ್ನಿಶಾಮಕ ದಳದವನ್ನು ಕರೆಸಲಾಗದೆ ಸ್ಥಳೀಯರೇ ಅಕ್ಕಪಕ್ಕದ ಕೊಳಬೆಬಾಗಿಗಳ ಮೋಟರ್ ಆನ್ ಮಾಡಿ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಪಕ್ಕದ ಬೇಲಿಗೆ ಬೆಂಕಿಯ ಕೆನ್ನಾಲಿಗೆ ಹರಿಯುವುದನ್ನು ಮಾತ್ರ ತಪ್ಪಿಸಲು ಸಫಲರಾಗಿದ್ದು ರಾಗಿ ಹುಲ್ಲು ಸಂಪೂರ್ಣ ಸುಟ್ಟು ಕರಕಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
