531 ನೇ ವೈಭವ ಭಕ್ತ ಶ್ರೇಷ್ಟ ಕನಕ ದಾಸರ ಜಯಂತೋತ್ಸವ ಕಾರ್ಯಕ್ರಮ

ಕೊರಟಗೆರೆ

        ಸಮಾಜದಲ್ಲಿ ಇಂದು ಪ್ರತಿಯೊಂದು ವಿಚಾರದಲ್ಲಿಯೂ ಮನುಷ್ಯ ನಾನು ನನ್ನಿಂದಲೇ ಎಂಬ ಭಾವನೆಯಲ್ಲಿದ್ದು, ನಾನು ಎಂಬುವ ಅಹಂ ತೊಲಗಿಸಿ ಆ ಜಾಗದಲ್ಲಿ ನಾವು ಎಂಬ ಭಾವನೆ ರೂಡಿಸಿಕೊಂಡಾಗ ಮಾತ್ರಉತ್ತಮ ಸಮಾಜ ನಿರ್ಮಾಣ ಮಾಡಲು ಸಾದ್ಯ. ಈ ಆದರ್ಶ ಅನುಷ್ಟಾನವಾಗಬೇಕಾದರೆ ದಾಸ ಶ್ರೇಷ್ಟ ಕನಕದಾಸರ ತತ್ವಸಿದ್ದಾಂತ ಅಳವಡಿಸಿಕೊಂಡಾಗ ನಾನು ಎಂಬುವ ಅಹಂ ದೂರವಾಗಲಿದೆ ಎಂದು ತುಮಕೂರು ರೇವಣ ಸಿದ್ದೇಶ್ವರ ಮಠದ ಶ್ರೀಗಳಾದ ಬಿಂದು ಶೇಖರ್ ಒಡೆಯರ್ ಅಭಿಪ್ರಾಯ ಪಟ್ಟರು.
ಅವರು ತುಮಕೂರು ಕಸಬಾ ಹೋಬಳಿ ಕಳಸೇಗೌಡನ ಪಾಳ್ಯ ಗ್ರಾಮದಲ್ಲಿ ಆಯೋಜಿಸಿದ್ದ 531 ನೇ ವೈಭವ ಭಕ್ತ ಶ್ರೇಷ್ಟ ಕನಕ ದಾಸರ ಜಯಂತೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ ಮನುಷ್ಯನ ಅಹಂ ಅಳುವಿಗೆ ಕನಕದಾಸರ ತತ್ವಸಿದ್ದಾಂತ ಮಾರ್ಗದರ್ಶಿಯಾಗಲಿದೆ ಎಂದರು.

       ಕನಕದಾಸರು ನಮ್ಮ ನಾಡುಕಂಡ ಶ್ರೇಷ್ಟದಾಸರು ವ್ಯಾಸರಾಯರ ಶಿಷ್ಯರಾಗಿದ್ದ ಸಂದರ್ಬಅವರು ತೋರಿಸಿಕೊಟ್ಟ ಅಹಂ ನಿವಾರಣೆಯ ನಿದರ್ಶನ ಇಂದಿಗೂ ಜನಜನಿತ ಎಂದಅ ವರು ವ್ಯಕ್ತಿಯೊಬ್ಬ ಮಾಡುವ ಸಾಧನೆಯ ಹಿಂದೆ ಕುಟುಂಬ, ಸಮಾಜದ ನಾನಾ ರೀತಿಯ ಕೊಡುಗೆಗಳಿದ್ದರೂ ಅವೆಲ್ಲವನ್ನು ಮರೆತು ನಾನೆ ಮಾಡಿದ್ದು, ಎಲ್ಲವೂ ನನ್ನಿಂದಲೇ ಆಗಿದ್ದು ಎಂಬ ಭಾವನೆ ವಿಜೃಂಬಿಸುತ್ತಿದೆ, ಈ ಅಹಂ ಭಾವನೆ ಸರಿಯಲ್ಲ, ಕನಕದಾಸರ ಸಂದೇಶವನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಈ ಅಹಂ ಭಾವನೆ ಸಮಾಜದಿಂದ ದೂರವಾಗಲು ಸಾದ್ಯ ಎಂದು ಪ್ರತಿಕ್ರಿಯಿಸಿದರು.

         ಮಾಜಿ ವಿದಾನ ಪರಿಷತ್ ಸದಸ್ಯರಾದಡಾ. ಹುಲಿನಾಯ್ಕರ್ ಮಾತನಾಡಿ ಕನಕದಾಸರು ಕೀರ್ತನೆ ಮೂಲಕ ಸಂಗೀತ ಕ್ಷೇತ್ರಕ್ಕೂ ಕಾವ್ಯದ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ ಮಹಾನ್‍ ದಾಸ ಶ್ರೇಷ್ಟರಾಗಿದ್ದು, ತಮ್ಮ ಭಕ್ತಿ ಮತ್ತು ಆದ್ಯಾತ್ಮಕ ಚಿಂತನೆಗಳ ಮೂಲಕ ಸಮಾಜದಲ್ಲಿ ಅಂಕು ಡೊಂಕುತಿದ್ದುವ ಕೆಲಸ ಮಾಡಿದ ಕನಕದಾಸರು ರಾಜಮನೆತನದ ಸಖ್ಯದೊಂದಿಗೆ ಎಲ್ಲಾ ಶ್ರೀಮಂತ ಸೌಕರ್ಯಗಳಿದ್ದರೂ ಬುದ್ದನಂತೆ ಅವೆಲ್ಲವನ್ನು ತ್ಯಾಗ ಮಾಡಿ ಕೀರ್ತನೆಗಳ ಮೂಲಕ ಸಾಮಾನ್ಯ ಜನರನ್ನು, ಕಾವ್ಯಗಳ ಮೂಲಕ ಪಂಡಿತ ವರ್ಗವನ್ನು ಏಕಕಾಲದಲ್ಲಿ ಮುಟ್ಟಿದ ದಾರ್ಶನಿಕನಾಗಿ, ತಿಮ್ಮಪ್ಪನಾಯ್ಕ ಆಗಿದ್ದ ಇವರು ತಮಗೆ ಸಿಕ್ಕ ಕೊಪ್ಪರಿಗೆ ವಜ್ರ ವೈಡೂರ್ಯಗಳನ್ನು ಜನಸಾಮಾನ್ಯರ ಅಭಿವೃದ್ದಿಗೆ ದಾನಮಾಡಿ ತನ್ನೆಲ್ಲಾ ವೈಭವತ್ಯಾಗ ದಾನಮಾಡಿ , ಜನಸಾಮಾನ್ಯನಂತೆ ಹರಿಕೀರ್ತನೆಗಳ ಮೂಲಕ ಜನಸಾಮನ್ಯರ ನಾಡಿಮಿಡಿತ 250 ಕ್ಕಿಂತಲೂ ಹೆಚ್ಚು ಹರಿದಾಸರಪೈಕಿ ಕನಕದಾಸರೊಬ್ಬರೇ ಶೂದ್ರ ವರ್ಗಕ್ಕೆ ಸೇರಿದ ಹರಿದಾಸರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

         ತುಮಕೂರು ಕಾಳಿದಾಸ ವಿದ್ಯಾವರ್ಧಕ ಸಂಘದ ಜಿಲ್ಲಾದ್ಯಕ್ಷರಾದ ಬಿ.ಕೆ ಮಂಜುನಾಥ್ ಮಾತನಾಡಿ ಇಡೀ ಮನುಕುಲದಲ್ಲೇ ದೇವರನ್ನು ಪ್ರತ್ಯಕ್ಷಿಸಿದ ಏಕೈಕ ವ್ಯಕ್ತಿ ಕನಕದಾಸರಾಗಿದ್ದು, ಕನಕದಾಸರು ಕೇವಲ ಒಂದೇಜಾತಿಗೆ ಸೀಮಿತವಾಗದೆ ಅವರ ಆದರ್ಶ ಜಾತ್ಯಾತೀತವಾದದ್ದು ಎಂದರು. ಇದೇ ಸಂದರ್ಬದಲ್ಲಿ ಕೊರಟಗೆರೆ ಕುರುಬರ ಸಂಘದ ತಾಲ್ಲೂಕ್‍ ಅದ್ಯಕ್ಷ ಮೈಲಾರಪ್ಪ ಮಾತನಾಡಿ ಶೂದ್ರಕುಲದಲ್ಲಿ ಹುಟ್ಟಿದ ಕನಕದಾಸರು ಮೇಲ್ವರ್ಗ ಪುರೋಹಿತ ಶಾಹಿಗಷ್ಟೆ ದೇವರುದರ್ಶನ ಹಾಗೂ ಧಾರ್ಮಿಕ ಕಾರ್ಯಗಳು ಎಂಬ ಭಾವನೆಗಳನ್ನು ಉಡುಪಿಯ ಕೃಷ್ಣ ದೇವಾಲಯದಲ್ಲಿತನ್ನ ಭಕ್ತ ಶ್ರೇಷ್ಟತೆಯಿಂದ ದೇವಾಲಯದ ವಿಗ್ರಹವನ್ನೆ ಹಿಂಬದಿಗೆ ತಿರುಗಿಸಿ ದರ್ಶನ ಭಾಗ್ಯ ಕಲ್ಪಿಸಿದ ಕನಕದಾಸರ ದೈವಿಗುಣಕ್ಕೆ ಕನಕಕಿಂಡಿ ಇಂದಿಗೂ ಸಾಕ್ಷಿಯಾದಂತಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

       ಈ ಸಂದರ್ಬದಲ್ಲಿ ಕಾಳಿದಾಸ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಭೀಮರಾಜು , ಕನಕ ಯುಸೇನೆ ಜಿಲ್ಲಾದ್ಯಕ್ಷ ಕೆಂಪರಾಜು, ಕಾಂಗ್ರೆಸ್‍ ಯುವ ಮುಖಂಡರಾದ ಗುರುಪ್ರಸಾದ್, ಅನಿಲ್‍ಕುಮಾರ್, ಲಕ್ಕಪ್ಪ, ತುಮಕೂರು ಮಹಾನಗರ ಪಾಲಿಕೆ ಸದಸ್ಯರಾದ ಗೋಪಾಲ್, ನಳಿನಾ ಇಂದ್ರಕುಮಾರ್, ಹಾಲುಮತ ಮಹಾಸಭಾಜಿಲ್ಲಾದ್ಯಕ್ಷಗರುಡಯ್ಯ, ಕಾರ್ಯದರ್ಶಿ ಟಿ.ಇರಘುರಾಮ್, ವೈದ್ಯರಾದಡಾ. ನಾಗಭೂಷಣ್, ಟಿ.ವಿ9 ವರದಿಗಾರರಾದ ಮಹೇಶ್. ಕನಕ ಯುವಸೇನೆ ತಾಲ್ಲೂಕ್‍ ಅದ್ಯಕ್ಷ ರಂಗಧಾಮಯ್ಯ, ಹಿಂದುಳಿದ ವರ್ಗತಾ, ಅದ್ಯಕ್ಷ ನಂಜುಂಡಯ್ಯ, ಕೆ.ಬಿ.ಎಸ್.ಎಸ್ ಶಿವಕುಮಾರ್, ಗ್ರಾಮಸ್ಥರಾದ ಮಂಜುನಾಥ್, ಜಯಣ್ಣ, ರೇವಣ್ಣಸಿದ್ದಪ್ಪ, ತಿಮ್ಮೇಗೌಡ, ಹುಲಿಯಪ್ಪ, ಆರ್‍ಆನಂದ್‍ಕುಮಾರ್, ನಂಜುಂಡಪ್ಪ ಸೇರಿದಂತೆ ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link