ಹುಳಿಯಾರು:
ಹುಳಿಯಾರು ಪಟ್ಟಣದಲ್ಲಿ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣಪತಿ ಮತ್ತು ಗೌರಮ್ಮ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹುಳಿಯಾರು ಪಟ್ಟಣ ಪಂಚಾಯತಿಯಿಂದ ಹುಳಿಯಾರು ಕೆರೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ವೈ.ಎಸ್.ಪಾಳ್ಯ ರಸ್ತೆಯ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದ ಕೆರೆಯ ಅಂಚಿನಲ್ಲಿ 8 ಅಡಿ ಆಳದ ಗುಂಡಿ ತೆಗೆದು ಪಟ್ಟಣ ಪಂಚಾಯಿತಿ ಕೊಳವೆಬಾವಿಯಿಂದ ನೀರನ್ನು ತುಂಬಿಸಿ ಗಣಪತಿ ವಿಸರ್ಜಿಸಲು ಅನುಕೂಲ ಮಾಡಲಾಗಿದೆ.
ಶನಿವಾರ, ಭಾನುವಾರ ಮತ್ತು ಸೋಮವಾರ ಈ ಮೂರು ದಿನ ನಿತ್ಯ ವಿಸರ್ಜನ ಗುಂಡಿಗೆ ನೀರನ್ನು ತುಂಬಿಸಲಾಗುತ್ತದೆ. ನಿತ್ಯವೂ ಸಂಜೆ 6 ಗಂಟೆ ಒಳಗೆ ಮುಂಜಾಗ್ರತ ಕ್ರಮವನ್ನು ವಹಿಸಿ ಗಣಪತಿಯನ್ನು ವಿಸರ್ಜಿಸುವಂತೆ ಮುಖ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.
ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಮೂರ್ತಿಗಳ ಜೊತೆಗೆ ಇರುವ ಹೂವು ಪತ್ರೆ ಊದುಬತ್ತಿ ಕರ್ಪೂರ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಕಲ್ಯಾಣಿಯ ಹೊರಗೆ ಹಾಕಿ ಮೂರ್ತಿಗಳನ್ನು ಮಾತ್ರ ವಿಸರ್ಜಿಸುವಂತೆಯೂ, ಕಲ್ಯಾಣಿಯ ಒಳಗೆ ಇಳಿಯದಂತೆ ದಡದಲ್ಲಿ ನಿಂತು ಎಚ್ಚರಿಕೆಯಿಂದ ಮೂರ್ತಿಗಳನ್ನು ವಿಸರ್ಜಿಸುವಂತೆಯೂ ಅವರು ತಿಳಿಸಿದ್ದಾರೆ.
ವಿಸರ್ಜನ ಸಂದರ್ಭದಲ್ಲಿ ಅನಾಹುತಗಳು ಸಂಭವಿಸಿದರೆ ಇದಕ್ಕೆ ಜಿಲ್ಲಾಡಳಿತವಾಗಲಿ, ತಾಲೂಕಾಡಳಿತವಾಗಲಿ ಅಥವಾ ಪಟ್ಟಣ ಪಂಚಾಯಿತಿಯಾಗಲಿ ಹೊಣೆಯಾಗುವುದಿಲ್ಲ. ಹಾಗಾಗಿ ತಮ್ಮ ಸೆಫ್ಟಿಯನ್ನು ತಾವೇ ವಹಿಸಿಕೊಂಡು ವಿಸರ್ಜಿಸುವಂತೆ ಮಂಜುನಾಥ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
