ರಂಗಭೂಮಿ ಕಲಾವಿದರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು : ಗುಬ್ಬಿ ವಿರೇಶ್

ಎಂ ಎನ್ ಕೋಟೆ :

       ಗ್ರಾಮೀಣ ಭಾಗದಲ್ಲೂ ಎಲ್ಲ ರೀತಿಯ ಜನಪದ ಮತ್ತು ರಂಗಭೂಮಿ ಕಲಾವಿದರು ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಲಾವಿದ ಸಂಘದ ರಾಜ್ಯಧ್ಯಕ್ಷ ಗುಬ್ಬಿ ವಿರೇಶ್ ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಮುದ್ದಪುರ ಗ್ರಾಮದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಹನುಮ ವಿಜಯ ಎಂಬ ಪೌರಣಿಕ ನಾಟಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಇರುವ ಅನೇಕ ಯೋಜನೆಗಳು ಗ್ರಾಮೀಣ ಭಾಗದ ಕಲಾವಿದರಿಗೆ ಗೋತ್ತಾಗುತ್ತಿಲ್ಲ ಕಲಾವಿದರು ವಾದ್ಯ ಪರಿಕರ ಹಾಗೂ ವೇಶ ಭೂಷಣ ಖರೀಧಿ ಹಾಗೂ ಪ್ರಯೋಜಿತ ಕಾರ್ಯಕ್ರಮಗಳನ್ನು ನಡೆಸಿ ಧನ ಸಹಾಯ ಪಡೆಯಬೇಕು ಎಂದು ತಿಳಿಸಿದರು.

        ಸರ್ಕಾರ ಕಲಾವಿದರಿಗೆ 1500 ರೂಗಳನ್ನು ಮಾಶಾಸನವನ್ನು ನೀಡುತ್ತಿದ್ದು ಇದು ಕಲಾವಿದರಿಗೆ ಸಾಕಗುವುದಿಲ್ಲ ಕಲಾವಿದರಿಗೆ 3000 ರೂಗಳೀಗೆ ಹೆಚ್ಚಿಸಬೇಕು.ರಾಜ್ಯದ ಎಲ್ಲ ಜಿಲ್ಲೆಯ ಕಲಾವಿದರು ಹಾಗೂ ಸಂಘ ಸಂಸ್ಥೆಗಳಿಗೆ ಅನುದಾನವನ್ನು ಹೆಚ್ಚಿಸಬೇಕು. ಸರ್ಕಾರ 15 ಕೋಟಿಯಿಂದ 20 ಕೋಟಿ ಹಂಚಿಕೆ ಮಾಡುತ್ತಿರುವುದು ಸಾಕಾಗುತ್ತಿಲ್ಲ ಕನಿಷ್ಠ 500 ಕೋಟಿ ರೂಗಳಿಗೆ ಸರ್ಕಾರ ಮೀಸಲು ಇಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಯೋಗೀಶ್ , ಸಾಗಸಂದ್ರ ಬಸವರಾಜು , ಲೋಕೇಶ್ ,ಕೆಂಪಣ್ಣ ಹಾಗೂ ಕಲಾವಿದರೂ ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ