ನಾಲ್ಕು ಜನ ಜೆ.ಡಿಎಸ್ ಶಾಸಕರಿದ್ದರು ಸಹ ಅವರನ್ನು ಸೋಲಿಸಿದರು : ಬೆಟ್ಟಸ್ವಾಮಿ

ಗುಬ್ಬಿ

       ಜಿಲ್ಲೆಯ ಎಲ್ಲಾ ವರ್ಗದ ಹಿಂದುಳಿದ ಸಮುದಾಯಗಳು ಬಿಜೆಪಿ ಪರವಾಗಿದ್ದು ನೂರಕ್ಕೆ ನೂರು ಬಿಜೆಪಿಗೆ ಮತ ನೀಡುವ ಮೂಲಕ ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಲಿದ್ದಾರೆ ಎಂದು ಬಿಜೆಪಿ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಜಿ.ಎನ್.ಬೆಟ್ಟಸ್ವಾಮಿ ತಿಳಿಸಿದರು.

       ಪಟ್ಟಣದ ರುದ್ರೇಶ್ವರ ಟವರ್‍ನಲ್ಲಿ ನಡೆಸಿದ ಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಯಾದವ ಸಮುದಾಯದ ರಾಜ್ಯ ಮುಖಂಡ ಎ.ಕೃಷ್ಣಪ್ಪನವರನ್ನು ಜೆಡಿಎಸ್ ಪಕ್ಷಕ್ಕೆ ಕರೆತಂದರು ಜಿಲ್ಲೆಯಲ್ಲಿ ನಾಲ್ಕು ಜನ ಜೆ.ಡಿಎಸ್ ಶಾಸಕರಿದ್ದರು ಸಹ ಅವರನ್ನು ಸೋಲಿಸಿದರು.

        ನಾವೆಲ್ಲ ಸೇರಿ ಎಸ್.ಪಿ.ಮುದ್ದಹನುಮೆಗೌಡರನ್ನು ಗೆಲ್ಲಿಸಿದ್ದೇವೆ ಎಂದು ಕಾರ್ಯಕ್ರಮದಲ್ಲಿ ಸಚಿವರೆ ತಿಳಿಸಿದ್ದಾರೆ ಅಂತವರಿಗೆ ನಮ್ಮ ಸಮುದಾಯದ ಜನ ಮತ ನೀಡುತ್ತಾರಾ ಗುಬ್ಬಿ ತಾಲೂಕಿನ ಯಾದವರ ಹಟ್ಟಿಗಳಿಗೆ ಸಚಿವರು ಹೋಗಿ ನಮ್ಮ ಸಮುದಾಯದ ಮುಖಂಡರಿಗೆ ಹಾರಹಾಕಿ ತಮ್ಮ ಕಡೆ ಸೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ ಆದರೆ ಇದರಿಂದ ಯಾವುದೆ ಪ್ರಯೋಜನವು ಆಗವುದಿಲ್ಲ ನಮ್ಮ ಸಮುದಾಯ ಸಂಪೂರ್ಣವಾಗಿ ಬಿಜೆಪಿಯ ಪರವಾಗಿ ನಿಂತಿದ್ದಾರೆ ಎಂದು ತಿಳಿಸಿದರು.

       ಬಿಜೆಪಿ ಪಕ್ಷ ನಮ್ಮ ಸಮುದಾಯವನ್ನು ಗುರುತಿಸಿ ಎರಡು ಭಾರಿ ಟಿಕೇಟ್ ನೀಡುವ ಮೂಲಕ ಉತ್ತಮ ಸ್ಥಾನ ಮಾನಗಳನ್ನು ನೀಡಿದೆ ಅನಿವಾರ್ಯ ಕಾರಣಗಳಿಂದ ನಾನು ಸೋತಿರಬಹುದು ಅಷ್ಟೆ ಇದರಲ್ಲಿ ಲಿಂಗಾಯುತರ ಪಾತ್ರ ಯಾವುದು ಇಲ್ಲಾ ನನ್ನ ಕೈಯನ್ನು ಎರಡು ಭಾರಿಯು ಹೆಚ್ಚಿನ ಸಂಖ್ಯೆಯಲ್ಲಿ ಮತನೀಡುವ ಮೂಲಕ ಲಿಂಗಾಯುತ ಸಮುದಾಯ ನನ್ನ ಕೈಹಿಡಿದಿತ್ತು. ಕಳೆದ ವಿದಾನ ಸಭಾ ಚುನಾವಣೆಯಲ್ಲಿ ಚುನಾವಣೆಗೆ ಮೂರು ದಿನ ಮುಂಚೆಯೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯನ್ನು ಎಸ್ಕೇಪ್ ಮಾಡಿಸಿದರು ಇದು ಬೆಟ್ಟಸ್ವಾಮಿ ಸೋಲಿಗೆ ಕಾರಣವಾಗಿದೆ.

        ಕಳೆದ ಎಂ.ಎಲ್.ಸಿ ಚುನಾವಣೆಯಲ್ಲಿ ಹಿಂದುಳಿದ ನಾಯಕರಿಗೆ ಟಿಕೇಟ್ ನೀಡದೆ ಹಣ ಇರುವಂತಹವರನ್ನು ಬೆಂಗಳೂರಿನಿಂದ ಕರೆತಂದು ಎಂ.ಎಲ್.ಸಿ ಮಾಡಿದ್ದಿರಾ ಎಂದು ಪ್ರಶ್ನಿಸಿದ ಅವರು ಹಿಂದುಳಿದ ಸಮುದಾಯದ ಕೆ.ಎನ್.ರಾಜಣ್ಣ ಅವರನ್ನು ನಿಮ್ಮ ಪ್ರಭಾವ ಬೀರಿ ಹಣ, ಜಾತಿ, ಆಧಾರದ ಮೇಲೆ ಸೋಲಿಸಿದ್ದಿರಾ ಇದೆಲ್ಲವೂ ನಿಮಗೆ ಕೀರ್ತಿ ತರುತ್ತದೆ ಎಂದ ಮೇಲೆ ನಿಮಗೆ ಹಿಂದುಳಿದ ಸಮುದಾಯಗಳು ಹೇಗೆ ಮತನೀಡುತ್ತಾರೆ ಎಂದು ಪ್ರಶ್ನಿಸಿದರು.

       ದೇಶದ ರಕ್ಷಣೆಯ ವಿಚಾರದಲ್ಲಿ ಪ್ರಧಾನಿ ಮೋದಿ ಯವರ ಕೊಡುಗೆ ಮಹತ್ತರವಾದುದಾಗಿದೆ ಕಳೆದ 5 ವರ್ಷದ ಅವಧಿಯಲ್ಲಿ ದೇಶದ ಸರ್ವತೋಮುಖ ಅಭಿವೃಧ್ದಿಗೆ ಹಲವು ಮಹತ್ವದ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ದೇಶದ ಎಲ್ಲಾ ಹಿಂದುಳಿದ ವರ್ಗದ ಸಮುದಾಯಗಳಿಗೆ ಸಾಮಾಜಿಕ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇನ್ನೂ 5 ವರ್ಷಗಳು ಬಿಜೆಪಿಗೆ ಅಧಿಕಾರ ನೀಡಿದಲ್ಲಿ ಖಂಡಿತವಾಗಿ ವಿಶ್ವದ ಪ್ರಮುಖ ದೇಶದಲ್ಲಿ ಒಂದಾಗಿ ಭಾರತ ಬೆಳೆಯುತ್ತದೆ ಹಾಗಾಗಿ ಹಿಂದುಳಿದ ಸಮುದಾಯದ ಭಾಂದವರು ಬಿಜೆಪಿಗೆ ಮತ ನೀಡುವ ಮೂಲಕ ದೇಶದ ಅಭಿವೃದ್ದಿಗೆ ಶ್ರಮಿಸಬೇಕು ಎಂದು ತಿಳಿಸಿದ ಅವರು ಜಿ.ಎಸ್.ಬಸವರಾಜು ಸ್ಥಳೀಯವಾಗಿ ಸಿಗುತ್ತಾರೆ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು ಆದ್ದರಿಂದ ಮತದಾರರು ಬಿಜೆಪಿಗೆ ಮತನೀಡುವ ಮೂಲಕ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವಂತೆ ಮನವಿ ಮಾಡಿದರು.

         ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜಣ್ಣ ಮಾತನಾಡಿ ನಾನು ಬಿಜೆಪಿ ಪಕ್ಷದಲ್ಲಿದ್ದೇನೆ ಇತ್ತೀಚಗೆ ಸಚಿವರು ನಮ್ಮ ಗ್ರಾಮಕ್ಕೆ ಬಂದಾಗ ಅವರಿಗೆ ನಮ್ಮ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ತಿಳಿಸಲು ಹೋದ ಸಂದರ್ಭದಲ್ಲಿ ನನಗೆ ಹಾರ ಹಾಕಿದರು ಇದನ್ನ ಪೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ನಾನು ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದೇನೆ ಎಂದು ಬಿಂಬಿಸಿರುವುದು ಇದು ಸತ್ಯಕ್ಕೆ ದೂರವಾದುದು ನಾನು ಬಿಜೆಪಿ ಪಕ್ಷದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದು ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜು ಪರವಾಗಿ ಪ್ರಚಾರ ಮಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದರು.

        ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಅ.ನಾ.ಲಿಂಗಪ್ಪ, ಜಿಲ್ಲಾ ಉಪಾಧ್ಯಕ್ಷ ಸಾಗರನಹಳ್ಳಿ ವಿಜಯ್‍ಕುಮಾರ್, ಹೆಚ್.ಎಲ್.ಬಸವರಾಜು ಮುಖಂಡರಾದ ಬೆಟ್ಟದಹಳ್ಳಿಅರುಣ್. ಸಿದ್ದಲಿಂಗಪ್ಪ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link