ಸ್ವಚ್ಚತೆಯೇ ದೇವರು : ಟಿ.ಎನ್.ಪ್ರಕಾಶ್

ತಿಪಟೂರು :
 
      ಮೊದಲು ನಾವು ಸ್ವಚ್ಛವಾಗಿದ್ದು ಇನ್ನೊಬ್ಬರಿಗೆ ಸ್ವಚ್ಚತೆಯ ಬಗ್ಗೆ ತಿಳಿಸಬೇಕು, ಪರಿಸರ ಸ್ವಚ್ಛವಾಗಿದ್ದರೆ ದೇವತೆಗಳು ನೆಲೆಸುತ್ತಾರೆ ಎಂದು ನಗರಸಭೆ ಅಧ್ಯಕ್ಷ ಟಿ.ಎನ್.ಪ್ರಕಾಶ್ ತಿಳಿಸಿದರು.
   
       ನಗರದ ಎ.ಪಿ.ಎಂ.ಸಿ ಯ ತರಕಾರಿ ಮಾರುಕಟ್ಟೆಯಲ್ಲಿ ಇಚಿದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತುಮಕೂರು ಹಾಗೂ ಸಾರ್ವಜನಿಕ ಆಸ್ಪತ್ರೆ ತಿಪಟೂರು ಇವರು ಹಮ್ಮಿಕೊಂಡಿದ್ದ ಸ್ವಚ್ಚತಾ ಅಭಿಯಾನ ಕಾಯಕಲ್ಪಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛತೇಯೆ ದೇವರು, ಮೊದಲು ನಾವು ಸ್ವಚ್ಛವಾಗಿದ್ದು ನಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮನ್ನು ನೋಡಿ ಎಲ್ಲರು ಕಲಿತು ಸ್ವಚ್ಛವಾದರೆ ಇಡೀ ದೇಶವೇ ಸ್ವಚ್ಛವಾಗುತ್ತದೆ. ಸ್ವಚ್ಛತೆಯ ಬಗ್ಗೆ ನಾವು ಅರಿವು ಮೂಡಿಸುವುದಕ್ಕಿಂತ ಅರಿತುಕೊಳ್ಳುವಂತೆಮಾಡಬೇಕು.
       ಆಗ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಚವಾಗಿ, ಯಾವುದೇ ರೋಗಗಳು ಬರುವುದಿಲ್ಲ ಸ್ವಚ್ಛಪರಿಸರದಲ್ಲಿ ಸಕಲದೇವತೆಗಳು ನೆಲೆಸಿ ನಮ್ಮ ಆರೋಗ್ಯವನ್ನು ದಯಪಾಲಿಸುತ್ತಾರೆ ಎಂದರು.
 
        ನಮ್ಮ ಸರ್ಕಾರಗಳು ಸ್ವಚ್ಛತೆಯ ಬಗ್ಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಸಾರ್ವಜನಿಕರು ಇವೆಲ್ಲವನ್ನು ಬಳಸಿಕೊಂಡು ನಗರಸಭೆಯವರಿಗೆ ಸಹಕರ ನೀಡಬೇಕು. ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವು ತ್ಯಾಜ್ಯವನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸಲು ನಿಗದಿಪಡಿಸಿರುವ ಸ್ಥಳದಲ್ಲೇ ತ್ಯಾಜ್ಯವನ್ನು ಹಾಕಿ ವ್ಯಾಪಾರಸ್ಥರು ಸಹಕರಿಸಬೇಕೆಂದು ಸಾರ್ವಜನಿ ಆಸ್ಪತ್ರೆಯ ನೇತ್ರಾಧಿಕಾರಿ ಯುವರಾಜ್‍ಯಾದವ್ ಕೋರಿದರು.
        ಈ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ನಗರಸಭೆಯ ಸದಸ್ಯ ಚಂದ್ರಶೇಖರ್, ನಂದೀಶ್, ವ್ಯಾಪರಸ್ಥರಾದ ಗೋಪಿನಾಥ್, ಉಮೇಶ್, ರಾಜಣ್ಣ ಮುಂತಾದವರು ಉಪಸ್ಥಿತರಿದ್ದರು. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link