ದುಡಿವ ಜನರ ಸಮಸ್ಯೆಗಳ ಪರಿಹರಿಸಿ – ಮುಖ್ಯಮಂತ್ರಿ ಕುಮಾರಸ್ವಾಮಿಗೆ ಸಿಐಟಿಯು ಮನವಿ

0
23

ತುಮಕೂರು

      ರಾಜ್ಯದ ದುಡಿವ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ದಿನಾಂಕ;09-10-2018 ರ ಮಂಗಳವಾರ ಸಂಜೆ ಮುಖ್ಯಮಂತ್ರಿಗಳ ನಿವಾಸ ಕೃಷ್ಣದಲ್ಲಿ ಸರ್ಕಾರ ಕರೆದಿದ್ದ ಸಭೆಯಲ್ಲಿ ಸಿಐಟಿಯು ರಾಜ್ಯ ಪದಾಧಿಕಾರಿಗಳು ಮನವಿ ಮಾಡಿದರು.
ಎಲ್ಲಾ ದುಡಿವ ಜನರಿಗೆ ಕನಿಷ್ಟ ಕೂಲಿ ಮಾಸಿಕ ರೂ18000 ಕಡಿಮೆ ಇಲ್ಲದಂತೆ ನಿಗದಿಗೊಳಿಸಬೇಕು, ಸ್ಕೀಮ್ ನೌಕರರಾಗಿರುವ ಅಂಗನವಾಡಿ, ಆಶಾ, ಬಿಸಿಊಟ ಮತ್ತಿತರನ್ನು ಕನಿಷ್ಟ ವೇತನದ ಷಡ್ಯೋಲ್‍ನಲ್ಲಿ ಒಳಗೊಳ್ಳಬೆಕು, ರಾಜ್ಯದಲ್ಲಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಮುಂತಾದ ಖಾಯಂಯೇತರ ಕಾರ್ಮಿಕರು-ನೌಕರರಿಗೆ ಖಾಯಂ ಸ್ಥಾನಮಾನ ನೀಡಲು ತಮಿಳುನಾಡು ಮತ್ತು ಅಸ್ಸಾಂ ಮಾದರಿಯ ಮಸೂದೆಯೊಂದನ್ನು ರಾಜ್ಯದಲ್ಲಿ ರೂಪಿಸಬೇಕು ಎಂದು ಒತ್ತಾಯಿಸಲಾಯಿತು.

     ಸುಪ್ರೀಂಕೋರ್ಟ್‍ನ ತೀರ್ಪಿನ ಅನ್ವಯ ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ/ನೌಕರರಿಗೆ ಖಾಯಂ ಕಾರ್ಮಿಕ/ ನೌಕರರಿಗೆ ಕೊಡಮಾಡಲಾಗಿರುವ ತುಟ್ಟಿಭತ್ಯೆ ಮತ್ತು ವೇತನದೊಂದಿಗೆ ಎಲ್ಲಾ ಭತ್ಯೆಗಳಸಹಿತ, ಸಮಾನ ವೇತನವನ್ನು ಸಮಾನ ಕೆಲಸದಲ್ಲಿ ತೊಡಗಿರುವ ಕಾರ್ಮಿಕರಿಗೆ ನೀಡಲು ಕ್ರಮಕೈಗೊಳ್ಳಬೇಕು, ಕಾರ್ಮಿಕ ಸಂಘಕ್ಕೆ ಶಾಸನಬದ್ಧ ಮಾನ್ಯತೆಗಾಗಿ ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿನ ಶಾಸನಗಳ ಮಾದರಿಯಲ್ಲಿ ಶಾಸನವನ್ನು ರಾಜ್ಯದಲ್ಲಿ ರೂಪಿಸಬೇಕು,

     2009ರಲ್ಲಿಯೇ ರಚನೆಯಾಗಿರುವ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ರಾಜ್ಯ ಸರ್ಕಾರದಿಂದ ಮಂಡಳಿಗೆ ಅಗತ್ಯ ಬಜೆಟ್ ಅನುದಾನ ನೀಡುವ ಮೂಲಕ ಅಸಂಘಟಿತ ಕಾರ್ಮಿಕರಿಗೆ ಪಿಂಚಣಿ ಯೋಜನೆ ರೂಪಿಸಿ ಜಾರಿಗೊಳಿಸ ಬೇಕು, ಕಾರ್ಮಿಕ ವಿವಾದಗಳನ್ನೆ ಪ್ರತ್ಯೇಕವಾಗಿ ವಿಚಾರಣೆ ನಡೆಸಲು ಪೂರಕವಾಗಿ ಜಿಲ್ಲೆಗೊಂದು ಕಾರ್ಮಿಕ ನ್ಯಾಯಾಲಯ ಸ್ಥಾಪಿಸಲು ಕ್ರಮವಹಿಸಬೇಕು ಎಂದು ಮನವಿ ಮಾಡಲಾಯಿತು.

      ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ವಹಿಸಬೇಕು, ರಾಜ್ಯದಲ್ಲಿ ಅಸಂಘಟಿತ ವಲಯದ ಹಮಾಲಿ ಕಾರ್ಮಿಕರು, ಆಟೋಚಾಲಕರು, ಮನೆಕೆಲಸ, ಕಟ್ಟಡ ಕಾರ್ಮಿಕರು, ಟೈಲರ್‍ಗಳು, ಬೀದಿಬದಿ ವ್ಯಾಪಾರಿಗಳು ಮೊದಲಾದ ವೃತ್ತಿಪರರು ತಮ್ಮ ಅತೀಕಡಿಮೆ ಕೂಲಿಯಿಂದ ಬದುಕುತ್ತಿದ್ದು ಇವರಿಗೆ ಸ್ವಂತದ್ದೊಂದು ಮನೆ ಕಟ್ಟಿಕೊಳ್ಳುವ ಬಗ್ಗೆ ತಮ್ಮ ಸರ್ಕಾರ ಅಗತ್ಯ ಅನುದಾನ ನೀಡಬೆಕು, ಕಟ್ಟಡಕಾರ್ಮಿಕರಿಗೆ ಸಂಬಂಧಿಸಿದ ಎಲ್ಲಾ 12 ಸೌಲಭ್ಯಗಳ ತ್ವರಿತ ರೀತಿಯಲ್ಲಿ ಫಲಾನುಭವಿಗಳಿಗೆ ತಲುಪಿಸಲು ಕ್ರಮ ಕೈಗೊಳ್ಳಬೇಕಾಗಿ ವಿನಂತಿಸುತ್ತೇವೆ.

      ಕಟ್ಟಡ ಕಾರ್ಮಿಕ ಮಂಡಳಿಯಲ್ಲಿ ಸಂಗ್ರಹವಾಗಿರುವ ಸೆಸ್ ಹಣವನ್ನು ಕಾರ್ಮಿಕರಿಗೆ ಸೌಲಭ್ಯಗಳಿಗಾಗಿ ಮಾತ್ರ ಬಳಸಬೇಕು ಸೌಲಭ್ಯ ಗಳನ್ನು ತ್ವರಿತವಾಗಿ ಜಾರಿ ಮಾಡಬೇಕು,ರಾಜ್ಯದ ದುಡಿಯುವ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ಉದ್ಯೋಗ ಸೃಷ್ಠಿಗೆ ಪೂರಕವಾಗಿ ಕೆಲಸ ಮಾಡಲು ತ್ರಿಪಕ್ಷೀಯ ಯಂತ್ರದ ಭಾಗವಾಗಿ ಭಾರತೀಯ ಕಾರ್ಮಿಕ ಸಮ್ಮೇಳನದ ಮಾದರಿಯಲ್ಲಿ ಕರ್ನಾಟಕ ಕಾರ್ಮಿಕ ಸಮ್ಮೇಳನವನ್ನು ಪ್ರತಿ ವರ್ಷ ಆಯೋಜಿಸಬೇಕು. ಬೀಡಿ ಕಾರ್ಮಿಕರ ಕನಿಷ್ಟ ಕೂಲಿ ಜಾರಿ, ತುಟ್ಟಿಭತ್ಯೆ ಬಾಕಿ ನೀಡುವಂತೆ ಕ್ರಮ ಹಾಗು ಗುತ್ತಿಗೆ ಪೌರ ಕಾರ್ಮಿಕರ ಸಮಸ್ಯೆ ಪರಿಹಾರ ಹಾಗು ಇತರೆ ಗುತ್ತಿಗೆ ಮುನಿಸಿಪಾಲ್ ಕಾರ್ಮಿರರ ಖಾಯಂಮಾತಿಗೆ ಕ್ರಮವಹಿಸಲು ಒತ್ತಾಯಿಸಿ ಬೇಡಿಕೆಗಳನ್ನು ಕಾರ್ಮಿಕ ನಾಯಕರು ಮುಖ್ಯಮಂತ್ರಿಗಳಿಗೆ ವಿವರಿಸಿದರು. ಈ ವಿಚಾರಗಳ ಕುರಿತು ಚರ್ಚೆ ನಡೆಯಿತು. ಅಂತಿಮವಾಗಿ ಸರ್ಕಾರ ಪರವಾಗೆ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಈ ಸಮಸ್ಯಗಳನ್ನು ಪರಿಹಾರ ಒದಗಿಸುವ ಭರವಸೆ ನೀಡಿದರು.

     ಸಭೆಯಲ್ಲಿ ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಸೆಲ್ವಕುಮಾರ್, ರಾಜ್ಯ ಕಾರ್ಮಿಕ ಅಯುಕ್ತ ಪಾಲಯ್ಯ, ಜಂಟಿ ಕಾರ್ಮಿಕ ಅಯುಕ್ತರಾದ ಶ್ರೀನಿವಾಸ್, ನರಸಿಂಹಮೂರ್ತಿ, ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಮಂಜುನಾಥ್, ಅಸಂಘಟಿತ ಕಾರ್ಮಿಕರ ಕಲ್ಯಾಣ ಮಂಡಲಿಯ ಎಸ್.ಬಿ.ರವಿಕುಮಾರ್, ಜಂಟಿಅಯುಕ್ತ ಶ್ರೀಪಾದ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಂಟಿ ನೀರ್ದೇಶಕಿ, ಸಿಐಟಿಯುನ ರಾಜ್ಯ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮೀನಾಕ್ಷಿ ಸುಂದರಂ, ಉಪಾಧ್ಯಕ್ಷ ವಿ.ಜೆ.ಕೆ ನಾಯರ್, ಅರ್. ಶ್ರೀನಿವಾಸ್ ಕೆ.ಎನ್. ಉಮೇಶ್, ಕಟ್ಟಡ ಕಾರ್ಮಿಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಂತೇಶ್, ಬೀಡಿ ಹಾಗು ಮುನಿಸಿಪಾಲ್ ಕಾರ್ಮಿಕರ  ಪ್ರಧಾನ ಕಾರ್ಯದರ್ಶಿ ಸೈಯದ್‍ಮುಜೀಬ್, ಅಂಗನವಾಡಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್. ಎಸ್. ಸುನಂದ, ಅಕ್ಷರ ದಾಸೋಹ ನೌಕರ ಸಂಘಧ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೆಸ್ತ ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here