ಅನಿಲ ಸೋರಿಕೆ ಅವಘಡಗಳನ್ನು ನಿರ್ಲಕ್ಷಿಸಬೇಡಿ

ತುರುವೇಕೆರೆ

   ಅನಿಲ ಸೋರಿಕೆ ಅವಘಡಗಳನ್ನು ನಿರ್ಲಕ್ಷಿಸಿದರೆ ಬಹಳ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಅಗ್ನಿಶಾಮಕದಳದ ಡಿ.ಎಪ್.ಓ ಮಹಾಲಿಂಗಪ್ಪ ತಿಳಿಸಿದರು.

   ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಜೋಡುಗಟ್ಟೆಯಲ್ಲಿ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಮಂಗಳೂರು, ಹಾಸನ, ಯಡಿಯೂರು, ಮೈಸೂರು ಎಲ್.ಪಿ.ಜಿ ಪೈಪ್‍ಲೈನ್‍ನಲ್ಲಿ ಎಲ್.ಪಿ.ಜಿ ಸೋರಿಕೆಯಾದರೆ ಯಾವುದೇ ಅಪಾಯಗಳು ಸಂಭವಿಸದಂತೆ ಪರಿಸ್ಥಿತಿ ನಿಭಾಯಿಸುವಂತೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಅಪ್‍ಸೈಟ್ ಅಣುಕು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

     ಸಾರ್ವಜನಿಕರು ಮೊದಲು ಎಲ್.ಪಿ.ಜಿ ಅನಿಲದ ಬಗ್ಗೆ ಮೊದಲು ತಿಳಿದುಕೊಳ್ಳಬೇಕಿದೆ. ಎಲ್.ಪಿ.ಜಿಯಿಂದ ಅವಘಡಗಳು ಸಂಭವಿಸಿದರೆ ಹೆಚ್ಚು ಅಪಘಾತಗಳಾಗಲಿವೆ. ಎಲ್.ಪಿ.ಜಿ ಪೈಪ್‍ನಲ್ಲಿ ಸೋರಿಕೆಯಾಗುತ್ತಿದ್ದರೆ ಅಂತಹ ಸ್ಥಳದಲ್ಲಿ ಯಾವುದೆ ಬೆಳೆಗಳು ಬೆಳೆಯುವುದಿಲ್ಲ. ಬೆಳೆಗಳು ಗಿಡಗಳು ಇದ್ದರು ಒಣಗಿರುತ್ತವೆ. ಇಂತಹ ಸ್ಥಳಗಳು ಸಾರ್ವಜನಿಕರಿಗೆ ಕಂಡು ಬಂದರೆ ಕೂಡಲೇ ತುರ್ತು ದೂರವಾಣಿಸಂಖ್ಯೆಗೆ ಫೋನ್ ಮಾಡಿ ಹಾಗೂ ಲೈನ್‍ವಾಕರ್‍ಗೆ ಮಾಹಿತಿ ನೀಡಬೇಕು. ನಂತರ ಅಧಿಕಾರಿಗಳು ಬರುವವರೆಗೂ ಸ್ಥಳದಲ್ಲಿಗೆ ಯಾರನ್ನು ಸುಳಿಯದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

      ಕಾರ್ಯಕ್ರಮಕ್ಕೂ ಮುನ್ನಾ ಎಲ್.ಪಿ.ಜಿ ಪೈಪ್‍ಲೈನ್ ಸೋರಿಕೆಯಾದರೆ ಯಾವ ರೀತಿ ತಡಗಟ್ಟಬಹುದು ಎಂದು ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಹಾಗೂ ಅಗ್ನಿಶಾಮಕದಳ ಅಧಿಕಾರಿಗಳು ಜಂಟಿಯಾಗಿ ಅಪ್‍ಸೈಟ್ ಅಣಿಕು ಪ್ರದರ್ಶನದದಲ್ಲಿ ಪ್ರಾತ್ಯಕ್ಷತೆಯಲ್ಲಿ ತೋರಿಸುವ ಮೂಲಕ ಸುತ್ತಮುತ್ತಲಿನ ಜನರಿಗೆ ಅರಿವು ಮೂಡಿಸಿದರು. ಈ ಸಂದರ್ಭದಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ ಲೈನ್ ವಾಕರ್‍ಗಳನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಮಾಯಸಂದ್ರ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಂಗಸ್ವಾಮಿ, ಸದಸ್ಯರಾದ ಮಹಾಲಿಂಗಯ್ಯ, ಎಚ್.ಪಿ.ಸಿ.ಎಲ್ ಅಧಿಕಾರಿಗಳಾದ ಲಿಯೋ ಜೋಸೆಫ್, ಪಾರ್ಥಸಾರಥಿ, ಮಲ್ಲಿಕಾರ್ಜುನ್ ದೇವರಾಜು ಸೇರಿದಂತೆ ಕಂಪನಿಯ ನೌಕರರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರುಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link