ಚರಂಡಿ ಕ್ಲೀನ್ ಮಾಡಿ, ಕೊಳಚೆ ವಿಲೇವಾರಿ ಮಾಡಿ

ಹುಳಿಯಾರು

        ಹುಳಿಯಾರು ಪಟ್ಟಣದ ಇಂದಿರಾನಗರದ ಬಾಲಾಜಿ ಚಿತ್ರ ಮಂದಿರದ ಹಿಂಭಾಗದಲ್ಲಿ ಚರಂಡಿ ಕಟ್ಟಿಕೊಂಡಿದ್ದು ತಕ್ಷಣ ಕ್ಲೀನ್ ಮಾಡಿಸಿ, ಕೊಳಚೆ ವಿಲೇ ಮಾಡುವಂತೆ ಇಲ್ಲಿನ ನಿವಾಸಿ ಸಿ.ವಿಶ್ವನಾಥ್ ಮನವಿ ಮಾಡಿದ್ದಾರೆ.ಕಾಲಕಾಲಕ್ಕೆ ಚರಂಡಿ ಕ್ಲೀನ್ ಮಾಡದಿರುವುದರಿಂದ ಚಂರಡಿಯಲ್ಲಿ ಕೊಳಚೆ ನಿರು ನಿಂತು ಸೊಳ್ಳೆಗಳ ಆಶ್ರಯತಾಣವಾಗಿದೆ. ಅಲ್ಲದೆ ಮನೆಯಲ್ಲಿ ವಾಸ ಮಾಡಲಾಗದಷ್ಟು ದುರ್ನಾತ ಬೀರುತ್ತಿದೆ. ಅಲ್ಲದೆ ಸೊಳ್ಳೆಗಳು ಮನೆಗೆ ನುಗ್ಗಿ ನಿದ್ರೆ ಮಾಡಲಾಗದಷ್ಟು ಉಪಟಳ ನೀಡುತ್ತಿದೆ ಎಂದು ಆರೋಪಿಸಿದರು.

         ಕಳೆದ ಆರು ತಿಂಗಳ ಹಿಂದೆ ಇಲ್ಲಿನ ಚರಂಡಿಗಳನ್ನು ಸ್ವಚ್ಚ ಮಾಡಿ ಚರಂಡಿಯ ಕೊಳಚೆ ತ್ಯಾಜ್ಯನ್ನು ಚರಂಡಿಯ ಪಕ್ಕದಲ್ಲಿ ಹಾಕಿ ಹೋದವರು ಇತ್ತ ಇದೂವರೆವಿಗೂ ತಿರುಗಿಯೂ ಸಹ ನೋಡಿಲ್ಲ. ತ್ಯಾಜ್ಯ ವಿಲೇವಾರಿ ಸಹ ಮಾಡದೆ ಹೋಗಿರುವ ಪರಿಣಾಮ ರಸ್ತೆಯ ತುಂಬೆಲ್ಲಾ ತ್ಯಾಜ್ಯ ಹರಡಿ ದಾರಿ ಹೋಕರಿಗೆ ದುರ್ನಾತ ಬೀರುತ್ತಿದೆ ಎಂದು ದೂರಿದ್ದಾರೆ.

         ಪಪಂ ಸದಸ್ಯರುಗಳು ಈ ಮಾರ್ಗದಲ್ಲಿ ಸಂಚರಿಸುತ್ತರಾದರೂ ಕಟ್ಟಿಕೊಂಡಿರುವ ಚರಂಡಿ ಮತ್ತು ಹಿಂದೆ ತೆಗೆದಿರುವ ಚರಂಡಿ ತ್ಯಾಜ್ಯ ರಸ್ತೆಯಲ್ಲಿ ಬಿದ್ದಿರುವದನ್ನು ನೋಡಿಯೋ ನೋಡದಂತೆ ಜಾಣ ಕುರುಡು ಪ್ರದರ್ಶಿಸುತ್ತಾರೆ. ಪಪಂ ಮುಖ್ಯಾಧಿಕಾರಿಗಳು ಇನ್ನಾದರೂ ಚರಂಡಿ ಸ್ವಚ್ಚತೆಗೆ ಮುಂದಾಗುವ ಜೊತೆಗೆ ಆರು ತಿಂಗಳಿಂದ ಚರಂಡಿ ಪಕ್ಕದಲ್ಲಿ ಹಾಕಿರುವ ಚರಂಡಿ ತ್ಯಾಜ್ಯವನ್ನು ವಿಲೆ ಮಾಡುವಂತೆ ಆವರು ಮನವಿ ಮಾಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap