ಕೊರಟಗೆರೆ
ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಖಾಸಗಿ ಶಾಲೆ ಮಕ್ಕಳಿಗೆ ಸರಿಸಮಾನವಾಗಿ ಉತ್ತಮ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಶೈಕ್ಷಣಿಕವಾಗಿ ಬೀಮ್ ಗ್ರಾಮೀಣಾಭಿವೃಧ್ದಿ ಸಂಸ್ಥೆ ಹೆಚ್ಚು ಒತ್ತು ನೀಡುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರು ಅಂತರಾಷ್ಟ್ರೀಯ ಮೈಟ್ರೀ ಸಂಸ್ಥೆಯ ಜನರಲ್ ಮೇನೇಜರ್ ಅಬ್ರಹಂ ಮೋಸಸ್ ತಿಳಿಸಿದರು.
ಅವರು ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಾಪುರ ಗ್ರಾ.ಪಂ.ವ್ಯಾಪ್ತಿಯ ವಿವಿಧ ಗ್ರಾಮಗಳ ಸರ್ಕಾರಿ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿಯ 200 ಕ್ಕೂ ಹೆಚ್ಚು ಮಕ್ಕಳಿಗೆ ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ನೋಟ್ ಪುಸ್ತಕ, ಬ್ಯಾಗ್‍ಗಳು, ಲೇಖನ ಸಾಮಗ್ರಿಗಳೂ ಹಾಗೂ ಸಮವಸ್ತ ವಿತರಿಸಿ ಮಾತನಾಡಿ ಸರ್ಕಾರ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ ಮಕ್ಕಳು ಖಾಸಗಿ ಶಾಲೆಗೆ ಸರಿಸಮಾನವಾಗಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಅಗತ್ಯವಾದ ಸವಲತ್ತುಗಳನ್ನು ಹಾಗೂ ಪ್ರತಿ ನಿತ್ಯ ಬೆಳಗ್ಗೆ 7 ಗಂಟೆ ಯಿಂದ 9 ಗಂಟೆಯವರೆಗೂ ನುರಿತ ಶಿಕ್ಷಕರಿಂದ ಉಚಿತ ಭೋಧನಾ ಕಾರ್ಯಕ್ರಮ ಶೈಕ್ಷಣಿಕ ವರ್ಷಪೂರ್ತಿ ಮಾಡುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಕಾಳಜಿ ವಹಿಸುವುದರ ಮೂಲಕ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರಕುವಂತೆ ಮಾಡಿದ್ದು ಸುತ್ತಮುತ್ತಲ ಶಾಲಾ ಮಕ್ಕಳು ಇದರ ಸದುಪಯೋಗ ಪಡೆಯುವಂತೆ ಕರೆ ನೀಡಿದರು.
ಬೀಮ್ ಗ್ರಾಮೀಣಾಭಿವೃದ್ದಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಜಿ.ರವಿಕುಮಾರ್ ಮಾತನಾಡಿ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ಉತ್ತಮ ಆರೋಗ್ಯಕ್ಕ ಸಹಕಾರಯಾಗಿದ್ದು ಶಿಕ್ಷಕರು ಹಾಗೂ ಪೋಷಕರು ವಿದ್ಯಾರ್ಥಿಗಳ ಪ್ರಗತಿಗೆ ಶ್ರಮ ವಹಿಸಬೇಕು, ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸರ್ಕಾರ ನೀಡುವ ಸವಲತ್ತುಗಳೊಂದಿಗೆ ಸಂಘ ಸಂಸ್ಥೆಗಳು, ದಾನಿಗಳು, ಹಳೇ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ಶಾಲೆಗಳಿಗೆ ಬೇಟಿ ನೀಡಿ ಪ್ರೋತ್ಸಾಹ ನೀಡಬೇಕು, ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ತಡೆಯಲು ಸರ್ಕಾರದ ಯೋಜನೆಗಳಿಗೆ ನಾವು ಕೈಜೋಡಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಯೋಜನೆಗಳಲ್ಲಿ ಒಂದಾದ ಮದ್ಯಾಹ್ನದ ಬಿಸಿಊಟ ಯೋಜನೆಯಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಆಹಾರ ತಯಾರಿಸಿ ಬಡಿಸುವ ಅಡಿಗೆ ನೌಕರರಿಗೆ ಬೀಮ್ ಗ್ರಾಮೀಣಾಭಿವೃದ್ದಿ ವತಿಯಿಂದ ಸಮವಸ್ತ್ರಗಳನ್ನು ಮತ್ತು ಕಳೆದ ಶೈಕ್ಷಣಿಕ ವರ್ಷದಲ್ಲಿ ಬೀಮ್ ಗ್ರಾಮೀಣಾಭಿವೃಧ್ದಿ ಸಂಸ್ಥೆಯಿಂದ ನಡೆಸಿದ ಉಚಿತ ಭೋಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತಮ ಅಂಕಗಳಿಸಿದ್ದ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಮೈಟ್ರೀಯ ಲಲಿತಾಹೊಳ್ಳ ವಿತರಿಸಿದರು, ಈ ಸಂದರ್ಭದಲ್ಲಿ ಬಾರತಿ, ದಿನೇಶ್, ಬೀಮ್ ಸಂಸ್ಥೆಯ ಯೋಜನಾಧಿಕಾರಿ ಶೋಭಾ ರವಿಕುಮಾರ್, ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಬಲರಾಮಯ್ಯ, ಶಿಕ್ಷಕರುಗಳಾದ ನಟರಾಜು, ಕೆ.ವಿ.ಗಂಗಾಭಿಕಾ, ಕಲ್ಪನಾ, ಮಂಗಳಾ, ಚೈತ್ರಾ, ಶ್ರೀಲಕ್ಷ್ಮೀ, ಮಂಜುನಾಥ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆದವು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ