ಹುಳಿಯಾರು:
ಹುಳಿಯಾರಿನ ಬೆಸ್ಕಾಂ ಪವರ್ ಮ್ಯಾನ್ ಚಂದನ್ ಸೇರಿದಂತೆ ತಿಪಟೂರು ಬೆಸ್ಕಾಂ ವಿಭಾಗದಿಂದ 16 ಮಂದಿ ಒರಿಸ್ಸಾಗೆ ಪ್ರಯಾಣ ಬೆಳೆಸಿದರು.
ಫನಿ ಚಂಡಮಾರುತದಿಂದ ಹಾಳಾಗಿರುವ ವಿದ್ಯುತ್ ಮಾರ್ಗದ ದುರಸ್ತಿ ಕೆಲಸ ನಿರ್ವಹಿಸಲು ಈ ತಂಡ ಒರಿಸ್ಸಾಗೆ ತೆರಳುತ್ತಿದ್ದು ಅಲ್ಲಿ 15 ದಿನಗಳ ಕಾಲ ದುರಸ್ತಿ ಕಾರ್ಯದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರಿನಿಂದ ರೈಲಿನಲ್ಲಿ ಇವರು ಒರಿಸ್ಸಾಗೆ ತೆರಳಲಿದ್ದು ಅಲ್ಲಿ ಕರ್ನಾಟಕ ಕೆಪಿಟಿಸಿಎಲ್ ಸಿಬ್ಬಂದಿಗಳ ತಂಡದೊಂದಿಗೆ ಸೇರಿಕೊಂಡು ದುರಸ್ತಿ ಕಾರ್ಯ ಮಾಡಲಿದ್ದಾರೆ. ರಾಜ್ಯ ಸರ್ಕಾರ ಇವರಿಗೆ ಪ್ರಯಾಣ ಭತ್ಯೆ ನೀಡಲಿದ್ದು ಅಲ್ಲಿ ಊಟ ವಸತಿ ಕಲ್ಪಿಇಸಲಾಗಿದೆ.
ಪ್ರಯಾಣಿಸುತ್ತಿರುವ ಎಲ್ಲಾ ಬೆಸ್ಕಾಂ ನೌಕರರಿಗೆಪ್ರಯಾಣ ಸುಖಕರವಾಗಿರಲಿ, ಎಲ್ಲ ಸುರಕ್ಷತಾ ಸಾಮಗ್ರಿಗಳನ್ನು ಉಪಯೋಗಿಸಿ ಸುರಕ್ಷತೆಯಿಂದ ಕಾರ್ಯನಿರ್ವಹಿಸಿ ಸುರಕ್ಷಿತವಾಗಿ ಹಿಂದಿರುಗುವಂತೆ ಬೆಸ್ಕಾಂ ಎಇಇ ಎನ್.ಬಿ.ಗವೀರಂಗಯ್ಯ, ಎಸ್‍ಓಗಳಾದ ಉಮೇಶ್‍ನಾಯ್ಕ, ಮೂರ್ತಿ ಅವರು ಹಾರೈಸಿದ್ದಾರೆ.