ತಿಪಟೂರು

ಮನಸ್ಸು ಮತ್ತು ಹರಿಷಡ್ವರ್ಗಗಳನ್ನು ನಿಗ್ರಹಿಸಿದರೆ ನಾವು ಎಲ್ಲವನ್ನು ಸಾಧಿಸಬಹುದೆಂದು ಗುರುಕುಲ ಶ್ರೀಗಳು ತಿಳಿಸಿದರು.
ನಗರದ ಸಿಡ್ಲೇಹಳ್ಳಿ ಮಹಾಸಂಸ್ಥಾನ ಮಠ, ಶ್ರೀ ಗುರುಕುಲಾನಂದಾಶ್ರಮದಲ್ಲಿ ಆಯೋಜಿಸಲಾಗಿರುವ ಲಿಂ|| ಜಗದ್ಗುರು ಪಟ್ಟದ ಕರಿಬಸವದೇಶಿಕೇಂದ್ರ ಮಹಾಸ್ವಾಮಿಗಳವರ 109ನೇ ಸಂಸ್ಮರಣೆ ಹಾಗೂ ಪೂಜ್ಯರ 23ನೇ ಪೀಠಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಸುಖವಾಗಿ ಬಾಳಬೇಕೆಂದರೆ ಮೊದಲು ಮನಸ್ಸನ್ನು ನಿಗ್ರಹಿಸಬೇಕು, ಸ್ವಾರ್ಥಿಗಳಾಗಬಾರದು. ಕೊಟ್ಟದ್ದು ತನಗೆ ಬಚ್ಟಿಟ್ಟದ್ದು ಪರರಿಗೆ ಎಂಬಂತೆ ಮತ್ತು ಸಕಲ ಜೀವಿಗಳಿಗೂ ಲೇಸನ್ನು ಬಯಸಿ ಇದರಿಂದ ನೀವು ಸಂತೋಷವಾಗಿರಬಹುದು ಮತ್ತು ಇತರರು ಸಂತೋಷವಾಗಿರಬಹುದು ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಮತ್ತು ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಒಂದು ಬಲಾಢ್ಯರು ತಾವು ಮಾಡಿದ್ದೆಲ್ಲಾ ಸರಿಯೆನ್ನುವುದು ತಪ್ಪು ಮತ್ತು ಸಂಸ್ಕಾರವಂತರು ಸಹಿಸಿಕೊಳ್ಳುತ್ತಾರೆ, ಅದು ಹೇಡಿತನದ ಲಕ್ಷಣವಲ್ಲ, ವೀರತೆಯ ಸಂಕೇತ.
ನಮ್ಮ ವೀರಶೈವರಿಂದ ಮಠಗಳು ಸ್ಥಾಪನೆಯಾಗಿ ಶಿಕ್ಷಣವನ್ನು ನೀಡದಿದ್ದರೆ ಶಿಕ್ಷಣವು ಇನ್ನಷ್ಟು ಕೆಳಗೆ ಇರುತ್ತಿತ್ತು. ಈ ಗುರುಕುಲ ಮಠದ ಹಿರಿಯ ಶ್ರೀಗಳು ನಿಜವಾದ ಕಾಯಕ ಯೋಗಿಗಳು, ಅವರು ದಿನನಿತ್ಯ ಕೃಷಿ ಚಟುವಟಿಕೆಗಳನ್ನು ಮಾಡಿ ಇಂತಹ ಮಠವನ್ನು ತುಂಬಾ ಕಷ್ಟದ ದಿನಗಳಲ್ಲಿ ಕಟ್ಟಿದ್ದರು. ಇದರ ಫಲವಾಗಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದ್ದು ಇಲ್ಲಿ ಶಿಕ್ಷಣ ಪಡೆದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ನಾವುಗಳು ಅಲ್ಪ ತೃಪ್ತರಾಗದೆ ಉನ್ನತವಾದ ಕನಸನ್ನು ಹೊಂದಿರಬೇಕು.
ಅದಕ್ಕೆ ತಕ್ಕದಾಗಿ ಯೋಜಿಸುತ್ತಾ ಹೋದರೆ ಸಂಪನ್ಮೂಲಗಳು ತಾನಾಗಿಯೇ ಹರಿದು ಬರುತ್ತವೆಂದು ತಿಳಿಸಿದ ಅವರು, ಭಗವಂತ ತಮಗೆ ಕರುಣಿಸಿರುವುದನ್ನು ನಿಮಗೆ ಬಳಸಿಕೊಂಡು ಹೆಚ್ಚಾದುದನ್ನು ಪರರಿಗೆ, ಅವಶ್ಯಕತೆ ಇರುವವರಿಗೆ ಹಂಚಿ ಆದರೆ ತಾವುಗಳು ಹೆಚ್ಚಾದುದನ್ನು ಇಟ್ಟುಕೊಂಡು ಹಾಳುಮಾಡ ಬೇಡಿ ಎಂದು ಶರಣರಿಗೆ ಕರೆನೀಡಿದರು.
ಗುರುಕುಲ ಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಅರವಿಂದ ಜತ್ತಿಯವರು, ನಮ್ಮ ತಂದೆಯವರು ಕೊನೆಯದಿನಗಳಲ್ಲಿ ನಾನು ಮಾತನಾಡುತ್ತಾ ಅಪ್ಪ ನಾನು ಏನಾದರು ಮಾಡಬೇಕೆಂದಾಗ ಏನು ಬೇಡ ನೀನು ಬಸವನಾಗು ಎಂದರು. ಅದರಂತೆ ನಾನು ವ್ಯಾಪಾರದಲ್ಲಿ ವಿಶ್ವದಾಖಲೆಯನ್ನು ನಿರ್ಮಿಸಿದ್ದರು ಅದನ್ನೆಲ್ಲಾ ಬಿಟ್ಟು ನಾನು ಬಸವಣ್ಣನವರ ಅನುಯಾಯಿಯಾಗಿ ಇಂದು ಅದೇ ಬವಸಣ್ಣನವರು ವಚನಗಳು ಪಸರಿಸುತ್ತಿದ್ದೇನೆ.
ನೀವು ಮಾಡುತ್ತಿರುವ ಸನ್ಮಾನ ಮತ್ತು ಪ್ರಶಸ್ತಿ ತನಗಲ್ಲ ನನ್ನೊಳಗಿರುವ ಬಸವನಿಗೆ ಎಂದು ತಿಳಿಸಿದರು. ನೀವುಗಳು ಜೀವನದಲ್ಲಿ ಆನಂದ ಹೊಂದಲು ಏನು ಮಾಡುವುದು ಬೇಡ ಇಂತಹ ಕಲ್ಪತರು ನಾಡಿನಲ್ಲಿ ಇರುವ ಶ್ರೀಮಠದ ಹುಣ್ಣಿಮೆ ಕಾರ್ಯಕ್ರಮಗಳಲ್ಲಿ ಮತ್ತು ಮನೆಮನೆಗೆ ವಚನಗಳು, ಶರಣ ಸಾಹಿತ್ಯವನ್ನು ಪರಿಚಯಿಸುತ್ತಿರುವ ಶ್ರೀಗಳ ಜೊತೆಗಿದ್ದು ವನಗಳ ಅರ್ಥವನ್ನು ತಿಳಿದು ಇತರರಿಗೆ ತಿಳಿಸಿದರೆ ಸಾಕು ಆನಂದಹೊಂದಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಸಿನಾಗೇಶ್ 2020ರ ವಾರ್ಷಿಕ ದಿನದರ್ಶಿಕೆಯನ್ನು ಬಿಡಗುಡೆಮಾಡಿದರು, ನಿವೃತ್ತ.ಎ.ಸಿ.ಪಿ ಲೋಕೇಶ್ವರ್, ಮಾತನಾಡಿದರು, ಯುವಸಾಧಕರಿಗೆ ನಿವೃತ್ತ ಐ.ಎ.ಎಸ್ ಅಧಿಕಾರಿ ಎಸ್ ದಯಾಶಂಕರ್ ಪ್ರತಿಭಾ ಪುರಸ್ಕಾರವನ್ನು ಮಾಡಿದರು.
ಶರಣಧರ್ಮ ಚಿಂತನಾ ಸಮಾರಂಭದಲ್ಲಿ ಶ್ರೀ ದೇಗುಲಮಠ ಕನಕಪುರದ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿ ಗಳು, ಶ್ರೀ ನಿರಂಜನಪೀಠ, ಮಾಡಾಳು ಶ್ರೀ ರುದ್ರಮುನಿ ಮಹಾಸ್ವಾಮಿಗಳು, ಸಂಸದ ಜಿ.ಎಸ್. ಬಸವರಾಜು, ಶರಣ ಸಂಸ್ಕೃತಿ ಚಿಂತಕರಾದ ನಿ|| ಇಂಜಿನಿಯರ್ ಎಸ್.ಟಿ ಚಂದ್ರಶೇಖರ್, ರೈತ ಮುಖಂಡರೂ ತಾಲ್ಲೂಕು ಹಸಿರು ಸೇನೆಯ ಅಧ್ಯಕ್ಷರಾದ ದೇವರಾಜು ತಿಮ್ಮಲಾಪುರ, ಶ್ರೀಮಠದ ಆಡಳಿತ ಸಂಪರ್ಕಾಧಿಕಾರಿಗಳಾದ ಹೆಚ್.ಎಸ್. ಸಿದ್ಧರಾಮಯ್ಯ, ನಗರಸಭಾ ಸದಸ್ಯರಾದ ಎಂ.ಎಸ್. ಯೋಗೀಶ್, ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಎಂ. ಸ್ವಾಮಿ, ನೊಳಂಬವಾಣಿ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ವೈ.ಆರ್.ಚನ್ನಬಸವಯ್ಯ, ಎಂ.ಎಸ್. ಚಂದ್ರಶೇಖರ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
