ಸಣ್ನ ಉದ್ಯಮಗಳ ಸಮಸ್ಯೆ ಕುರಿತು ಸಚಿವರೊಂದಿಗೆ ಚರ್ಚೆ.!

ತುಮಕೂರು:
   ಸಣ್ಣ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು, ಸವಾಲುಗಳನ್ನು ಕುರಿತು ಜಿಲ್ಲಾ ಉಸ್ತುವಾರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರೊಂದಿಗೆ ಉದ್ಯಮಿಗಳು ಸಮಾಲೋಚನೆ ನಡೆಸಿದರು.ತುಮಕೂರು ನಗರದ ಎಪಿಎಂಸಿ ಯಾರ್ಡ್‍ನಲ್ಲಿರುವ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ ವಸಂತನರಸಾಪುರ ಸೇರಿದಂತೆ ಕೈಗಾರಿಕಾ ಪ್ರದೇಶಗಳ ಸಮಸ್ಯೆಗಳ ಬಗ್ಗೆ ಉದ್ಯಮಿಗಳು ಸಂವಾದ ನಡೆಸಿದರು.
   ಈ ಸಂದರ್ಭದಲ್ಲಿ ವಸಂತ ನರಸಾಪುರ ಕೈಗಾರಿಕಾ ಪ್ರದೇಶ ಹಾಗೂ ಇತರೆ ಕಡೆಗಳಲ್ಲಿ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇರುವ ಹಲವು ಸಮಸ್ಯೆಗಳನ್ನು ಚರ್ಚಿಸಲಾಯಿತು. ಹಲವು ಉದ್ಯಮಗಳು ಸಾಕಷ್ಟು ತೊಂದರೆಯನ್ನು ಎದುರಿಸುತ್ತಿವೆ. ಇದಕ್ಕೆ ಮುಖ್ಯವಾಗಿ ತೆರಿಗೆ ಹೊರೆ ಹೆಚ್ಚಾಗುತ್ತಿದೆ. ತೆರಿಗೆ ಹೊರೆಯನ್ನು ಪ್ರತ್ಯೇಕಿಸುವ ಕಾರ್ಯ ನಡೆಯಬೇಕು. ಕೈಗಾರಿಕೆಗಳಿಗೆ, ವಾಣಿಜ್ಯ ಮತ್ತು ಗೃಹ ಹೀಗೆ ಪ್ರತ್ಯೇಕ ತೆರಿಗೆ ವಿಧಿಸುವ ವ್ಯವಸ್ಥೆ ಮಾಡಬೇಕು. ಎಲ್ಲವನ್ನೂ ವಾಣಿಜ್ಯ ದೃಷ್ಟಿಯಿಂದಲೇ ನೋಡುವುದಾದರೆ ಸಣ್ಣ ಕೈಗಾರಿಕೆಗಳು ಬದುಕುವುದಾದರೂ ಹೇಗೆ ಎಂಬ ಪ್ರಶ್ನೆಗಳು ಕೇಳಿಬಂದವು.
     ಜಿಲ್ಲೆಯಲ್ಲಿ ಹಲಸಿನ ಬೆಳೆ ಉತ್ಕೃಷ್ಟವಾಗಿದೆ. ಅದೇ ರೀತಿ ತೆಂಗಿನ ಬೆಳೆಯೂ ಉತ್ತಮವಾಗಿದೆ. ಈ ನಿಟ್ಟಿನಲ್ಲಿ ಜಾಕ್ ಪ್ರೂಟ್ ಪಾರ್ಕ್ ಮತ್ತು ಕೊಕೋ ನೆಟ್ ಡೆವಲಪ್‍ಮೆಂಟ್ ಪಾರ್ಕ್ ತೆರೆಯುವ, ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ. ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ತೆರೆಯಬೇಕಿದೆ ಎಂದು ಸಾಗರನಹಳ್ಳಿ ಪ್ರಭು ಸೇರಿದಂತೆ ಕೆಲವರು ಸಚಿವರಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದರು. ಎಪಿಎಂಸಿ ವತಿಯಿಂದ ಒಂದು ಕೋರಿಕೆ ಸಲ್ಲಿಸಿ, ಕೋಲ್ಡ್ ಸ್ಟೋರೇಜ್ ಪ್ರಸ್ತಾಪ ಮುಂದಿಟ್ಟರು. 
    ಸ್ಮಾರ್ಟ್‍ಸಿಟಿ ವ್ಯವಸ್ಥೆ, ಅವ್ಯವಸ್ಥೆಗಳ ಬಗ್ಗೆಯೂ ಸಭೆಯಲ್ಲಿ ಪ್ರಸ್ತಾಪವಾಯಿತು. ಇಲಾಖೆಗಳ ನಡುವೆ ಹೊಂದಾಣಿಕೆ, ಸಹಕಾರ ಇಲ್ಲದಿರುವುದು, ಮಾಹಿತಿ ವಿನಿಮಯ ಆಗದೇ ಇರುವುದು ಮತ್ತಿತರ ಸಮಸ್ಯೆಗಳು ಸಭೆಯಲ್ಲಿ ಪ್ರಸ್ತಾಪವಾದವು .ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಈ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿ ಉತ್ತರಿಸಿದರು. ಸಭೆಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಹೆಚ್.ಜಿ.ಚಂದ್ರಶೇಖರ್, ಉಪಾಧ್ಯಕ್ಷ ಎಂ.ಎನ್.ಲೋಕೇಶ್, ಕಾರ್ಯದರ್ಶಿ ಟಿ.ಜೆ.ಗಿರೀಶ್, ಜಂಟಿ ಕಾರ್ಯದರ್ಶಿ ಸಂಜಯ್, ಸುಜ್ಞಾನ್ ಹಿರೇಮಠ್, ಎಸ್.ಆರ್.ಪ್ರಭು, ಸತ್ಯನಾರಾಯಣ, ಶ್ರೀನಾಥ್, ಎಪಿಎಂಸಿ, ಡಿಐಸಿ, ಬೆಸ್ಕಾಂ ಅಧಿಕಾರಿಗಳು ಸೇರಿದಂತೆ ಉದ್ಯಮಿಗಳು, ವರ್ತಕಲರು, ಅಧಿಕಾರಿಗಳು ಉಪಸ್ಥಿತರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link