ಐ.ಡಿ.ಹಳ್ಳಿ
ಹೋಬಳಿಯಿಂದ ಶನಿವಾರದಂದು ಜೆಡಿಎಸ್ ಕಾರ್ಯಕರ್ತರಿಗೆ ಶಾಸಕ ಎಂ.ವಿ.ವೀರಭದ್ರಯ್ಯ ರವರ ಕೈಮರ ನಿವಾಸದಲ್ಲಿ ಪೂರ್ವಭಾವಿ ಸಭೆ ಕರೆಯಲಾಯಿತು.
ಈ ಸಭೆಯಲ್ಲಿ ಶಾಸಕ ಎಂ.ವಿ.ವೀರಭದ್ರಯ್ಯ ರವರು ಸಾವಿರಾರು ಜೆಡಿಎಸ್ ಕಾರ್ಯಕರ್ತರಿಗೆ ನಮ್ಮ ಲೋಕಸಭಾ ಚುನಾವಣೆಗೆ ನಮ್ಮ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ರವರು ಸ್ಪರ್ಧಿಸಲಿದ್ದಾರೆ. ಆದ್ದರಿಂದ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಏಕೆಂದರೆ ನಮ್ಮ ಜಿಲ್ಲೆಗೆ ಬರುವಂತಹ ವ್ಯಕ್ತಿ ಮುಂದೆಯೂ ಪ್ರಧಾನಿಯಾಗುವಂತಹ ವ್ಯಕ್ತಿ. ಆದ್ದರಿಂದ ತಾವುಗಳು ದಯವಿಟ್ಟು ಈ ಕ್ಷೇತ್ರದಲ್ಲಿ ನನಗೆ ಯಾವರೀತಿ ಹೆಚ್ಚಿನ ಬಹುಮತವನ್ನು ಹಾಕಿ ಗೆಲ್ಲಿಸಿದ್ದಿರೂ ಅದೇ ರೀತಿ ಈಗಲೂ ಸಹ ನಮ್ಮ ದೇವೇಗೌಡ ರವರಿಗೆ ನನಗಿಂತಲೂ ಹೆಚ್ಚಿನ ಬಹುಮತವನ್ನು ನೀಡಿ ಗೆಲ್ಲಿಸಬೇಕು ಎಂದರು.
ಜೆಡಿಎಸ್ ಕಾರ್ಯಕರ್ತರು ಇನ್ನು ಮುಂದೆ ಕಾಂಗ್ರೆಸ್ ಅವರ ಜೊತೆ ಜೊತೆಯಲ್ಲಿ ಇದ್ದು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಏಕೆಂದರೆ ಇಂದು ತುಮಕೂರು ಲೋಕಸಭಾ ಚುನಾವಣೆಗೆ ಮೈತ್ರಿ ಸರ್ಕಾರ ದಿಂದ ನಮ್ಮ ಜಾತ್ಯತೀತ ಪಕ್ಷದಿಂದ ನಮ್ಮ ತುಮಕೂರು ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವುದಕ್ಕೆ ನಮ್ಮ ದೇವೇಗೌಡರು ಬರುತ್ತಿದ್ದಾರೆ. ಆದ್ದರಿಂದ ದಯಮಾಡಿ ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ರವರ ಜೊತೆಯಲ್ಲಿ 25ರಂದು ತುಮಕೂರು ಜಿಲ್ಲೆಗೆ ಬರಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಮುಖಂಡರ ಜೊತೆಯಲ್ಲಿ ನಾನು ಸಹ ಮನೆ ಬಾಗಲಿಗೆ ಬರುತ್ತೇನೆ. ಇದಕ್ಕೆ ನಮ್ಮ ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಹಕಾರ ನೀಡಬೇಕು. ಈ ತಾಲೂಕಿನಲ್ಲಿ ಈ ಎರಡು ಪಕ್ಷಗಳು ಒಂದಾದರೆ ನಮ್ಮ ಮಾಜಿ ಪ್ರಧಾನಿ ಗಳಾದ ದೇವೇಗೌಡರಿಗೆ ಬಹಳಷ್ಟು ಮತಗಳು ಬರುವುದಕ್ಕೆ ಸಾಧ್ಯ. ಆದ್ದರಿಂದ ಈ ತಾಲೂಕಿನಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಹೊಟ್ಟಿಗೆ ಇರಬೇಕಾಗಿದೆ ಎಂದರು.
ತುಮಕೂರು ವಿಧಾನಸಭಾ ಕ್ಷೇತ್ರದಲ್ಲಿ ದೇವೇಗೌಡರು ಗೆದ್ದೇ ಗೆಲ್ಲುತ್ತಾರೆ ಎಂದು ಶಾಸ್ತ್ರದಲ್ಲಿ ಹೇಳಿದ್ದಾರೆ. ಆದ ಕಾರಣದಿಂದ ಮಾಜಿ ಪ್ರಧಾನಿಗಳು ಈ ಕ್ಷೇತ್ರಕ್ಕೆ ಬರುತ್ತಿದ್ದಾರೆ. ಆದ್ದರಿಂದ ಇವರಿಗೆ ಇನ್ನೂ ಹೆಚ್ಚಿನ ಮತಗಳನ್ನು ನೀಡಿ ಜಯ ಗಳಿಸಬೇಕಾಗಿರುವ ಕರ್ತವ್ಯ ನಮ್ಮ ಜೆಡಿಎಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ.
ದೇವೇಗೌಡರು ನಮ್ಮ ಜಿಲ್ಲೆಯಲ್ಲಿ ಗೆದ್ದರೆ ನಿಜಕ್ಕೂ ಅಭಿವೃದ್ಧಿ ಆಗುವುದರಲ್ಲಿ ಬೇರೆ ಮಾತೇ ಇಲ್ಲ.ಏಕೆಂದರೆ ನಮ್ಮ ದೇವೇಗೌಡರಿಗೆ ನಮ್ಮ ಭಾರತ ದೇಶದಲ್ಲಿ ಯಾರೇ ಪ್ರಧಾನಿ ಆದರೂ ಸಹ ನಮ್ಮ ಜಿಲ್ಲೆಗೆ ಹೆಚ್ಚಿನ ಅನುದಾನವನ್ನು ತಂದು ಅಭಿವೃದ್ಧಿ ಮಾಡುತ್ತಾರೆ. ಈಗಾಗಲೇ ಇವರ ಅಭಿವೃದ್ಧಿಯ ಕೊಡುಗೆಗಳನ್ನು ಕರ್ನಾಟಕದಾದ್ಯಂತ ಜನರು ಮೆಚ್ಚುವಂತಹ ಅಭಿವೃದ್ಧಿಗಳ ಕೆಲಸಗಳನ್ನು ಮಾಡಿ ತೋರಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಒಮ್ಮತವಾಗಿ ಮತ ಹಾಕಿ ಜಯ ಗಳಿಸಬೇಕು. ನಮ್ಮ ತುಮಕೂರು ಜಿಲ್ಲೆಯಿಂದ ಹೆಚ್ ಡಿ ದೇವೇಗೌಡ ರವರು ಜಯ ಗಳಿಸಿ ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗಿ ಇನ್ನೊಂದು ಬಾರೀ ಪ್ರಧಾನಿ ಆಗುವುದಕ್ಕೆ ಶಕ್ತಿಯನ್ನು ನಾವೆಲ್ಲರೂ ನೀಡಬೇಕಾಗಿದೆ ಎಂದರು.
ಇದಕ್ಕೆಲ್ಲ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಒಪ್ಪಿಗೆ ನೀಡಿ ನಾವು ಸಹ ನಮ್ಮ ತಾಲೂಕಿನಲ್ಲಿಯೇ ಅಲ್ಲ ನಮ್ಮ ಮತಗಳು ಜಿಲ್ಲೆಯ ಉದ್ದಕ್ಕೂ ಇವೆ. ಆದ್ದರಿಂದ ನಾವು ಸಹ ಬಹಳ ಸಂತೋಷದಿಂದ ದೇವೇಗೌಡರನ್ನು ಗೆಲ್ಲಿಸುತ್ತೇವೆ ಮುಂದಿನ ದಿನಗಳಲ್ಲಿ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡುತ್ತೇವೆ ಎಂದು ಶಾಸಕರಿಗೆ ಹೇಳಿ. ಜೆಡಿಎಸ್ ಮೈತ್ರಿ ಪಕ್ಷಕ್ಕೆ ಜೈಕಾರ ಗಳನ್ನು ಕೂಗಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟರಂಗಾರೆಡ್ಡಿ, ಅರ್.ಕೆ.ರೆಡ್ಡಿ , ಗರಣಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗೋವಿಂದರಾಜು ಹಾಗೂ ಪಾರ್ವತಮ್ಮ ಬಸ್ತಪ್ಪ ಹಾಲಿ ತಾಲೂಕ್ ಪಂಚಾಯಿತಿ ಸದಸ್ಯರಾದ ನಾಗರಾಜು , ಹೋಬಳಿ ಯುವ ಅಧ್ಯಕ್ಷರಾದ ಸತೀಶ್ ಯಾದವ್ ಉಪಾಧ್ಯಕ್ಷ ನಾಗರಾಜು , ಜಿಲಾನ್, ಗೋಪಾಲ್ ರೆಡ್ಡಿ , ತಾಡಿ ನಾಗರಾಜ್ , ಹಾಗೂ ಅನೇಕ ಕಾರ್ಯಕರ್ತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
