ಬೆಳ್ಳೂಡಿಯ ಕನಕ ಗುರು ಶಾಖಾ ಮಠದಲ್ಲಿ ಕಾಗಿನೆಲೆ ಶ್ರೀ ಗಳ ಜನ್ಮ ದಿನಾಚರಣೆ 

ಹರಿಹರ :
 
      ತಾಲ್ಲೂಕಿನ ಬೆಳ್ಳೂಡಿಯ ಕನಕ ಗುರು ಶಾಖಾ ಮಠದಲ್ಲಿ ಜಗದ್ಗುರು ಶ್ರೀ ನಿರಂಜನಾಂದಪುರಿ ಶ್ರೀಗಳ ಜನ್ಮ ದಿನಾಚರಣೆಯ ಪ್ರಯುಕ್ತ ಶಾಖಾ ಮಠದಲ್ಲಿ  ವಿವಿಧ ಗಣ್ಯವ್ಯಕ್ತಿಗಳಿಂದ ಶ್ರೀಗಳಿಗೆ ಶುಭಾಶಯ ಕೋರಿ ಆಶೀರ್ವಾದ ಪಡೆದರು.
 
        ಈ ಸಮಯದಲ್ಲಿ ಕಳೆದ ಬಾರಿ ಎಸ್.ರಾಮಪ್ಪ ಅವರನ್ನು ವಿಧಾನಸಭೆಗೆ ಆಯ್ಕೆಯಾಗುವಂತೆ ಆಶೀರ್ವದಿಸಿದ್ದ ಶ್ರೀಗಳು ಈ ಬಾರಿ ಲೋಕಸಭಾ  ಕಾಂಗ್ರೆಸ್ ಅಭ್ಯರ್ಥಿ ಎಚ್.ಬಿ.ಮಂಜಪ್ಪ ಅವರುನ್ನು ಸಹ ಚುನಾವಣೆಯಲ್ಲಿ ಜಯಶಾಲಿಯಾಗಲಿ ಎಂದು ಹರಸಿ ಆಶೀರ್ವಾದಿಸಿದರು.
     
        ಈ ಸಂದರ್ಭದಲ್ಲಿ ಶಾಸಕ ಎಸ್.ರಾಮಪ್ಪ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ವಕೀಲ ನಾಗೇಂದ್ರಪ್ಪ, ನಗರಸಭಾ ಮಾಜಿ ಅಧ್ಯಕ್ಷ ಬಿ.ರೇವಣಸಿದ್ದಪ್ಪ,ಸಿ.ಎನ್.ಹುಲಿ ಗೇಶ್,ಬೀರಪ್ಪ ಮುಂತಾದ ಕಾಂಗ್ರೆಸ್ ಮುಖಂಡರುಗಳು ಉಪಸ್ಥಿತರಿದ್ದರು.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap